ಊಟ
ತಿನ್ನುತ್ತಾ ಇದ್ದೆ ನಾನು ತಟ್ಟೆ ತುಂಬಾ ಮೀನು
ಕಸಿದುಕೊಂಡರು ತಿರುಗಿ ಕೇಳಲು ಭಯವಾಗುವಂತೆ
ಪೇಟೆ ತಿರುಗಿ ದರ ಇಳಿಸಿ ಚೀಲ ತುಂಬಿಕೊಂಡೆ
ಮಡಿಕೆ ಒಡೆದರು ಒಲೆಯೇ ಆರಿಹೋಗುವಂತೆ
ಗಾಳ ಇಳಿಬಿಟ್ಟು ಹಿಡಿಯಲು ಕಲಿತೆ ಬುಟ್ಟಿ ತುಂಬುವಂತೆ
ಮುರಿದು ಎಸೆದರು ದಡಕ್ಕೆ ಮುಳ್ಳುಬೇಲಿ ಕಾಲಿಡದಂತೆ
ಹಿತ್ತಿಲ ಬಾನಿಯ ತುಂಬ ಮೊಟ್ಟೆ ಎಸೆದು ಜುಳುಜುಳು ಮರಿ
ಮನೆಹಿತ್ತಿಲುಗಳ ಕಿತ್ತುಕೊಂಡರು ಹೆಸರು ಹರಿದು ಹೋಗುವಂತೆ
ಗಾಳಿಯಲ್ಲಿ ಬೆರಳಾಡಿಸಿ ಚಿತ್ರ ಬಿಡಿಸಿದೆ ಕಣ್ಣು ಮಿನುಗುವಂತೆ
ಹೊಟ್ಟೆ ತುಂಬಿಸಿತು ಮತ್ಸ್ಯಗಂಧ ಬೇನೆ ಮರೆಸುವಂತೆ
ಕಿಡಕಿ ಸುತ್ತ ಗಸ್ತು ಹಾಕಿದ್ದಾರೆ ಊಟದ ಜಾಡು ಹಿಡಿಯಲು
ನಿಯತ್ತು ಅಳಿಯದ ಗಾಳಿ ಅದೃಶ್ಯ ಚಿತ್ರಗಳ ಮಾರುವುದಿಲ್ಲ







ಚೆನ್ನಾಗಿದೆ.
`ಗಾಳಿಯಲ್ಲಿ ಬೆರಳಾಡಿಸಿ ಚಿತ್ರ ಬಿಡಿಸಿದೆ ಕಣ್ಣು ಮಿನುಗುವಂತೆ
ಹೊಟ್ಟೆ ತುಂಬಿಸಿತು ಮತ್ಸ್ಯಗಂಧ ಬೇನೆ ಮರೆಸುವಂತೆ’
ಸಾಲುಗಳು ಇಷ್ಟವಾದವು
ಕವಿತೆ ಜನರ ಮನೋಭಾವವನ್ನು ಬಿಂಬಿಸುತ್ತಾ ,ಕೊನೆಗೆ ‘ನಿಯತ್ತು ಅಳಿಯದ ಗಾಳಿ ಅದೃಶ್ಯ ಚಿತ್ರಗಳ ಮಾರುವದಿಲ್ಲ’ಎಂಬಲ್ಲಿ ಆಶಾವಾದವನ್ನು ಪ್ರಕಟಪಡಿಸುತ್ತದೆ.ಅರ್ಥಪೂರ್ಣ ಕವಿತೆ.
it’s a wonderful poem reflecting deep understanding of the real life around us and the words and their combinations are scintillating