ಹೇಳಬಯಸಿದ ಅದೆಷ್ಟು ಪದ್ಯಗಳಿದ್ದವು?

ಮಹಾಮೌನ!

ನಳಿನ ಡಿ

ಕ್ಷಣದಗಣನೆ ಹೇಗೆ ಕಳೆದು, ನೀವು ದೂರವಾದಿರಿ ಹೀಗೆ?
ತಾಯಿಯಂತೆ ಕರುಳ ತಬ್ಬಿ,
ಮೊಲ್ಲೆಬಳ್ಳಿಯಂತೆ ಹಬ್ಬಿ,

ಎದೆಯಲಿ ಕಾವ್ಯಕುಸುಮವ ನೆಟ್ಟು ನಡೆಸಿದಿರಿ,
‘ಬಿರುದು’ ‘ಬರಿದು’ ಎಂದು ನೀವು ನಡೆದೇ ಬಂದಿಲ್ಲಿ ಸೇರಿದಿರಿ,

ನಾನು ನೀವು ಅದೆಂತು ಸೇರಿ ಕಟ್ಟಿದೆವು ಕಾವ್ಯ ಹೊಸತು,
ಬೆಟ್ಟದಷ್ಟು ಅನುಭವ ಹೊತ್ತ ಅನುಭವಿಯ ಹೊರತು,
ಎಲ್ಲೋ ಹೊಟ್ಟೆಗಾಗಿ ಅಲೆವ ಗುಬ್ಬಿಯು,
ಕಷ್ಟ-ಇಷ್ಟವಷ್ಟೇ ಬರೆದು ನಿಟ್ಟುಸಿರಾದುದು,
‘ಎಲ್ಲೆ ಎಲ್ಲಿ’ ಬದುಕುವೆಡೆಯಲ್ಲಿ,
ಯಾರು ಇಹರು, ಸದಾ ಒಂಟಿಯಾಗೇ ನಡೆದ ಸಲಗದ ಅನುಭಾವವೂ,
ಬಹುತೇಕ ಮರೆತಿರೆಂದೇ ನಾ ತಿಳಿಯೇ,
ಆಗಾಗ್ಗೆ ನೆನಪಾಗದೆ ಮಾತಾಗಿ, ನಗುವಾಗಿ, ಸೊಗಸಾದ ಪದ್ಯಗಳ ಗ್ರಹಣವಾಗಿ, ಬರುವ ಭೇಟಿಗೆ ಆಮಂತ್ರಣವಾಗಿ, ಶುಭವನ್ನೇ ಕೋರುತ್ತಾ
ಮರೆಯಾದಿರೆಲ್ಲಿ ಹೀಗೆ?

ಬದುಕ ಸಾರವರಿತು,
ತನ್ನಷ್ಟಕ್ಕೆ ತಾನಾಗಿ ಬಲಿತು,
ನೋವಿಗಿಷ್ಟು ಕಾವ್ಯದ ಮುಲಾಮು ಬಳಿದು,
ಹೋದಿರೆಲ್ಲಿ ಹೇಳದೇ?

ಹೇಳಬಯಸಿದ ಅದೆಷ್ಟು ಪದ್ಯಗಳಿದ್ದವು,
ಪದಗಳಲಿ ಉಸುರದ ದುಃಖಗಳ ಎಳೆಗಳಿದ್ದವು,
ತಾಯಿ ಮಗುವ ಕಂಡಾಗ ಎಲ್ಲದರ ಬಟಾವಡೆಯಾಗುವುದಿತ್ತು,
ದೇವನಿಗೆ ಇದೆಲ್ಲಾ ಏಕೆನಿಸಿತ್ತೋ ಏನೋ?

ಕಾವ್ಯದ ಹಕ್ಕಿ ಜಗಕೆ ವಿಮುಖವಾಗಿ ಹಾರಿತು….

ಜೋಗದ ಜೋಗುಳ ಹಾಡಿ,
ಕನ್ನಡಮ್ಮನ ನಿತ್ಯೋತ್ಸವ ಅನವರತ ಗೈದು ಪುಣ್ಯದಿ,
ಸರ್ವಧರ್ಮವ ಆರಾಧಿಸಿ,
ಸಕಲರಿಗೂ ಲೇಸನ್ನೇ ಬಯಸಿ,
ಹಿರಿ ಕಿರಿಯರೆನದೇ ಮಾತೃಪ್ರೀತಿ ಧಾರೆಯೆರೆದು,
ಶುದ್ದ ಮನಸಿನ ತಾಯಿಗೂ ವಯೋಮಾನ,
ಕಾಲನೆದುರಾದಾಗ ಮಹಾಮೌನ!

ಎನ್ನೆದೆಯ ಕಾವ್ಯ ದೈವವು ಶಾಂತಿಯಲಿ ಲೀನವಾಗಲಿ

‍ಲೇಖಕರು avadhi

May 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: