ಕಾವ್ಯ ಎಸ್
ನನಗೊಂದು ದಿನ ಬೈಸಿಕಲ್ಲಿನ ಕೆಳಗೆ
ಒಬ್ಬಳು ಹುಡುಗಿ ಸಿಕ್ಕಿದ್ದಳು
ಹೇಗಿದ್ದಳು ಹುಡುಗಿ…???

ನಯವಾಗಿ, ಮೃದುವಾಗಿ ತಕ್ಕಮಟ್ಟಿಗೆ
ಸುಂದರವಾಗಿ
ಚಕ್ರ ಅವಳ ಮೇಲೆ ಸ್ವಲ್ಪ ಸ್ವಲ್ಪವೇ
ಉರುಳುತಲಿತ್ತು
ಹೇಗಿದ್ದಳು ಹುಡುಗಿ…??
ಹುಡುಗಿ ನಗುತ್ತಲೇ ಇದ್ದಳು
ನನಗೂ ಆಶ್ಚರ್ಯ… !!
ಆದರೆ ಅಲ್ಲೊಂದು ಹೆಪ್ಪುಗಟ್ಟಿ ಉಕ್ಕುವ
ಶಬ್ಧ ಹೊರಡುತಿತ್ತು
ಹೇಗಿದ್ದಳು ಹುಡುಗಿ..?

ಆಗಲೂ ಹುಡುಗಿ ಸ್ವಲ್ಪವೇ ನಗುತ್ತಿದ್ದಳು
ಶಬ್ಧ ಹಾಗೆಯೇ ಮುಂದುವರೆದಿತ್ತು
ಇನ್ನೇನು ಸಂಪೂರ್ಣವಾಗಿ ಚಕ್ರ ಅವಳ
ಮೇಲೆ ಉರುಳುವುದರಳಿತ್ತು ಅಷ್ಟರಲ್ಲಿ
ಕಾಲಚಕ್ರವಾಗಿ ಅವಳೇ ಅದರ ಮೇಲೆ ಹತ್ತಿ
ಸವಾರಿ ಮಾಡಿದ್ದಳು.






ಚೆನ್ನಾಗಿದೆ
ಚೆನ್ನಾಗಿದೆ ಮೇಡಂ