ಹೆಣ್ಮನದ ಯುವಕನ ಬನಿಯನ್ನಿನ ಮೇಲೆ..

ಕಾವ್ಯಾ ಕಡಮೆ ನಾಗರಕಟ್ಟೆ

 

ಕಣ್ಣೀರಿಗೂ ಒಂದು ಬಣ್ಣ ಇರುತ್ತಿದ್ದರೆ..

ಕಣ್ಣೀರಿಗೂ ಒಂದು
ಬಣ್ಣವಿರಬೇಕಿತ್ತು

ನೀಲಿ ಎಂದಿಟ್ಟುಕೊಳ್ಳೋಣ

painting blueಕೆಂಪಿಗಿಂಥ ನೀಲಿ ಘೋರವೆಂದು
ಸ್ಯಾನಿಟರಿ ನ್ಯಾಪಕಿನ್ ಜಾಹಿರಾತಿನವರು
ಪ್ಯಾಡುಗಳ ಮೇಲೆ ನೀಲಿದೃವ ಹುಯ್ಯುವುದ
ಮೊದಲು ನಿಲ್ಲಿಸುತ್ತಿದ್ದರು

ನೀಲ ಆಗಸ ನೀಲಿ ನದಿ ತಿಳಿ ನೀಲಿ ಸೀರೆ
ಕಡು ನೀಲಿ ಶಾಯಿ ನೀಲಿಮಳೆ ನೀಲ ಮೈ
ನವಿಲ ನರ್ತನ ನೀಲ ಮೇಘ ಶ್ಯಾಮ
ಎಲ್ಲ ಭಯಂಕರವಾಗಿ ಕಾಣುತ್ತಿದ್ದವು

ಪುಟಾಣಿ ನೀಲಿ ಹಕ್ಕಿ ಹಾಡದಿದ್ದರೂ ನಡೆದೀತು
ಎಂದು ಸುಮ್ಮನಾಗುತ್ತಿದ್ದರು ಮೂರ್ತಿ ಸರ್

ರೊಟ್ಟಿ ಕಾಣದವನ ಅಂಗೈ ಸುಳಿಯಲ್ಲಿ
ಹಟ ಮುಗಿದ ಮಗುವ ಕೆನ್ನೆ ಗುಳಿಯಲ್ಲಿ
ಹೆಣ್ಮನದ ಯುವಕನ ಬನಿಯನ್ನಿನ ಮೇಲೆ
ಮಾಲಿಕನ ಕಳೆದುಕೊಂಡ ನಾಯಿಯ
ರೆಪ್ಪೆ ತುದಿಗೆ ಗೃಹಿಣಿಯ ದಿಂಬಿನ ಕೆಳಗೆ
ಒಣಗಿದ ನೀಲಿ ಸುಕ್ಕು
ಪ್ರತಿಯೊಬ್ಬರೊಳಗೂ ಅವರವರದೇ
ನೀಲಿ ಕಡಲ ಬಿಕ್ಕು

ಹಾಗಂತ ಅಳುವಿಗೆ ಬಣ್ಣ ಕೊಟ್ಟಂತೆ
ನಗುವಿಗೂ ವರ್ಣ ತೊಡಿಸುವ
ತುಂಟತನ ಮಾಡಬೇಡಿ ಮತ್ತೆ!

ಅಳು ಉಳಿಸುವ ಕಲೆಯ
ನಗು ಭರಿಸುವುದಿಲ್ಲ
ಅಳು ಗಾಳಿಯಲ್ಲಿ ತೇಲುವುದಿಲ್ಲ
ಒಂದು ಸ್ನಿಗ್ಧ ಮುಗುಳಿನಂತೆ.

 

ಅವರಿಬ್ಬರೂ

twoನನ್ನೊಳಗೆ ಎಂದಿಗೂ ಇಬ್ಬರಿದ್ದರು
ಅವಳು ತುಂಬ ಅತ್ತಾಗ ಇವಳು ಸಮಾಧಾನಿಸುತ್ತ
ಇವಳು ಅತೀ ನಕ್ಕಾಗ ಅವಳು ಎಚ್ಚರಿಸುತ್ತ
ನನ್ನನ್ನು ವಿಶ್ರಾಂತಿಯಲ್ಲಿಟ್ಟಿದ್ದರು

ಥಟ್ಟನೆ ಅದೇನಾಯಿತೋ ಕಾಣೆ
ಇಬ್ಬರೂ ಸದ್ದಿಲ್ಲದೇ ಒಂದಾಗಿಬಿಟ್ಟಿದ್ದಾರೆ
ಒಟ್ಟಿಗೆ ಬಿದ್ದುಬಿದ್ದು ನಗಲು
ಜೊತೆಗೆ ತಬ್ಬಿ ಅಳಲು
ಶುರುವಿಟ್ಟುಕೊಂಡಿದ್ದಾರೆ

ಇಬ್ಬರನ್ನೂ ಕಳೆದುಕೊಂಡ ನಾನು
ಅನಾಥಳಾಗಿರುವೆ ಈಗ ಹೊಸದಾಗಿ
ಅವರಿಬ್ಬರ ನಡುವೆ ಜಗಳ ಹತ್ತಿಸಲು
ಕ್ರೂರ ಕಾರಣದ ತಲಾಶಿನಲ್ಲಿರುವೆ.

‍ಲೇಖಕರು admin

March 2, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

12 ಪ್ರತಿಕ್ರಿಯೆಗಳು

  1. ಋತಊಷ್ಮ

    ಬಣ್ಣದ ಕವಿತೆ ಸೂಪರ್…ಖುಷಿಯಾಯ್ತು .

    ಪ್ರತಿಕ್ರಿಯೆ
  2. ಚಲಂ

    ತುಂಬಾ ಇಷ್ಟವಾಯಿತು…ಥ್ಯಾಂಕ್ಸ್..ಕಾವ್ಯ

    ಪ್ರತಿಕ್ರಿಯೆ
  3. sangeetha raviraj

    ತುಂಬಾ ವಿಭಿನ್ನವಾಗಿದೆ ಕವಿತೆ ಕಾವ್ಯರವರೇ…ಇಷ್ಟವಾಯಿತು ನೀಲಿ ಕವಿತೆ

    ಪ್ರತಿಕ್ರಿಯೆ
  4. ಸುಬ್ರಾಯ ಮತ್ತೀಹಳ್ಳಿ.

    ಕಾವ್ಯಾ………….. ಕಡಮೆಯಲ್ಲ ನಿನ್ನ ಕವಿತೆ. ಅದೊಂದು ಸೂಕ್ಷ್ಮ ಸುಂದರ ದುಡಿಮೆ. ಮನ ಕಲಕುವ ಪ್ರತಿಮೆ.

    ಪ್ರತಿಕ್ರಿಯೆ
  5. ರೂಪಾ ಕೋಟೇಶ್ವರ

    ಅಳು ಉಳಿಸುವ ಕಲೆಯ ನಗು ಭರಿಸುವುದಿಲ್ಲ….:) 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: