ಹೀಗೊಂದು ಕವಿತೆ
ಜ ನಾ ತೇಜಶ್ರೀ
ಕುರುಡು ಮೆತ್ತಿಕೊಂಡ ಕಣ್ಣು
ಗಂಟೆಯನ್ನು ಹೆಣ್ಣು ಮುಟ್ಟಬಾರದು
ದೀಪ ಧೂಪ ಬೆಳಗಿ ಆರತಿ ಎತ್ತುವುದಷ್ಟೆ ಅವಳ ಕೆಲಸ:
ಹೆಣ್ಣು ಶಬ್ದ ಮಾಡದೆ ಉರಿಯಬೇಕೆಂಬುದು
ಶತಮಾನಗಳ ಹಳೆಯ ಅಲಿಖಿತ ಕಾನೂನು
.
ಬಿಟ್ಟಬಿಟ್ಟಂತೆ ಕುರುಡು ಮೆತ್ತಿಕೊಳ್ಳುವ
ಈ ಕಣ್ಣುಗಳನ್ನು ಕತ್ತಲಿನಿಂದ
ತಿಕ್ಕಿ ತೊಳೆಯದ ಹೊರತು
ಎಲ್ಲ ಬೆಳಕೂ ಕತ್ತಲೆಯೆ
.
ಶಬ್ದಕ್ಕೆ ಮೌನ, ಬೆಳಕಿಗೆ ಕತ್ತಲು,
ಅದಕ್ಕೇ ಗರ್ಭಗುಡಿಯೂ ದೇವರೂ ಸದಾ
ಮೌನ ಮತ್ತು ಕತ್ತಲು







nice lines
sundara…..
olle pady..
ಒಳ್ಳೆ ಕವಿತೆ ತೇಜಶ್ರೀ
nija….chendada kavite..
malathi S