– ಸೌಮ್ಯಾ ಕೆ ಆರ್
ಘಟನೆ 1 :
ಪವಿತ್ರಾ ಮತ್ತು ಆಶಾ ಸ್ನೇಹಿತರು. 7ನೇ ತರಗತಿಯಲ್ಲಿ ಓದುತ್ತಿರುವ ಪುಟ್ಟ ಬಾಲಕಿಯರು. ಪವಿತ್ರಾ ಮನೆಯಲ್ಲಿ ಆಧುನಿಕ ತಂತ್ರಜ್ಞಾನದ ಟಿವಿ ಇತ್ತು, ಆದರೆ ಆಶಾ ಮನೆಯಲ್ಲಿ ಇರಲಿಲ್ಲ. ಆ ಎಳೆಯ ವಯಸ್ಸಿನಲ್ಲೇ ಇವರಿಬ್ಬರೂ ಪ್ರಾಣಸ್ನೇಹಿತರು. ಅಂತಸ್ತು ಎಂದೂ ಅವರ ಸ್ನೇಹಕ್ಕೆ ಅಡ್ಡಿಯಾಗಿರಲಿಲ್ಲ. ಎಲ್ಲೇ ಹೋದರೂ ಇಬ್ಬರೂ ಒಟ್ಟಿಗೆ ಇರುತ್ತಿದ್ದವರು. ಓದು, ಆಟ, ಪಾಠ ಎಲ್ಲದರಲ್ಲೂ ಸಮಾನತೆ ಕಾಯ್ದುಕೊಂಡು ಬಂದವರು. ಆಶಾ ತಮ್ಮ ಮನೆಯಲ್ಲಿರುವ ಟಿವಿಯಲ್ಲಿ ಗೇಮ್ ಆಡಲು ಆಗದು ಎನ್ನುವ ಒಂದೇ ಕಾರಣಕ್ಕೆ ಪವಿತ್ರಾ ಮನೆಗೆ ಹೋಗುತ್ತಿದ್ದಳು. ಒಮ್ಮೆ ಪವಿತ್ರಾಳನ್ನು ಕರೆದುಕೊಂಡು ಅವರ ಅಮ್ಮ ದೇವಸ್ಥಾನಕ್ಕೆ ಹೋಗಿದ್ದರು. ಆಶಾಳನ್ನು “ಮನೆಯಲ್ಲಿರಮ್ಮ..” ಎಂದು ಹೇಳಿ ಹೋಗಿದ್ದಳು. ಸಂಜೆಗತ್ತಲು ಸಮಯದಲ್ಲಿ ಆ ಪುಟ್ಟ ಬಾಲಕಿ ಯಾವುದರ ಪರಿವೆಯೇ ಇಲ್ಲದೆ ಗೇಮ್ ಆಡುತ್ತಿದ್ದಾಗ ಆಶಾಳ ಅಪ್ಪ ಅವಳನ್ನ ಪುಸಲಾಯಿಸಿ ಬೆಡ್ ರೂಮಿಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿ, ರಾಕ್ಷಸ ಬಲ ಪ್ರದಶರ್ಿಸಿದ… ಆ ಕರಾಳ ಘಟನೆ ಆಶಾಳ ಮನಸ್ಸಿನಲ್ಲಿ ಮಾಸದ ಗಾಯವಾಗಿ ಉಳಿದುಬಿಟ್ಟಿತು…
ಘಟನೆ 2 :
ಸರೀತಾ ಹಾಗೂ ಮನೋಜ್ ದಂಪತಿಗೆ ಒಬ್ಬಳೇ ಮುದ್ದಾದ ಮಗಳು. ಬಹಳ ದಿನಗಳ ನಂತರ ಮಗುವಾದ್ದರಿಂದ ಅವಳ ಮೇಲೆ ಇಬ್ಬರಿಗೂ ಜೀವ. ಮಗಳಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡಬೇಕೆಂಬ ಇಚ್ಛೆ ಇಬ್ಬರಲ್ಲೂ ಇತ್ತು. ಹೀಗಾಗಿ ತಮಗೆ ಕಷ್ಟವಾದರೂ ಪರ್ವಾಗಿಲ್ಲ ಎಂದು ಒಳ್ಳೆಯ ಶಾಲೆಗೆ ಸೇರಿಸಿದ್ದರು. ಅದೊಂದು ಖಾಸಗಿ ಶಾಲೆ. ಅಲ್ಲಿ ಎಲ್ಲ ಬಗೆಯ ಸವಲತ್ತುಗಳನ್ನೂ ನೀಡಲಾಗುತ್ತಿತ್ತು. ನಿತ್ಯ ಇಬ್ಬರೂ ದುಡಿಯಲು ಹೋಗುತ್ತಿದ್ದ ಕಾರಣಕ್ಕೆ ಶಾಲೆಯಿಂದ ಮನೆಗೆ, ಮನೆಯಿಂದ ಶಾಲೆಗೆ ಮಗಳನ್ನು ಕರೆದುಕೊಂಡು ಹೋಗಲು ವಾಹನ ವ್ಯವಸ್ಥೆ ಇತ್ತು. ಅದನ್ನು ಶಾಲೆಯ ಆಡಳಿತ ಮಂಡಳಿಯೇ ಮಾಡಿತ್ತು. ಆ ವಾಹನದಲ್ಲಿದ್ದ ಡ್ರೈವರ್ ಸೀನಪ್ಪ ನಿತ್ಯ ಮಕ್ಕಳನ್ನು ಜಾಗರೂಕತೆಯಿಂದಲೇ ಕರೆದೊಯ್ಯುತ್ತಿದ್ದ. ಅದೊಂದು ದಿನ ಸರೀತಾ ಹಾಗೂ ಮನೋಜ್ ದಂಪತಿಗೆ ಮಗಳು ತುಂಬಾ ಸುಸ್ತಾಗಿ ಕುಸಿದು ಬಿದ್ದಾಗ ಆಕೆಯನ್ನು ಗಮನಿಸಿದರು. ಜ್ವರ ಹೆಚ್ಚಾಗಿದ್ದರಿಂದ ಬಟ್ಟೆ ಬಿಚ್ಚಿ ಅವಳನ್ನು ಹಸಿ ಬಟ್ಟೆಯಲ್ಲಿ ಒರೆಸಿ ಮಲಗಿಸಲು ಮುಂದಾದಾಗ ಅವಳ ಜನನಾಂಗದ ಮೇಲೆ ಸಾಕಷ್ಟು ಗಾಯಗಳಾಗಿದ್ದನ್ನು ಗಮನಿಸಿದರು. ಗಾಬರಿಯಾಗಿ ಮುಗ್ದತೆಯಿಂದಲೇ ವಿಚಾರಿಸಿದಾಗ ನಿತ್ಯ ಸೀನಪ್ಪ ತನ್ನ ತೃಶೆ ತೀರಿಸಿಕೊಳ್ಳುತ್ತಿದ್ದ ಕೃತ್ಯ ಬಯಲಾಗಿತ್ತು…
ಘಟನೆ 3 :
ಮಂಗಳಾ ಬಹಳ ಕಷ್ಟಪಟ್ಟು ಬದುಕುತ್ತಿದ್ದ ಹೆಣ್ಣುಮಗಳು. ಮದುವೆಯಾಗಿ ಸ್ವಲ್ಪ ದಿನಕ್ಕೇ ಒಂದು ಮಗುವಿನ ತಾಯಿಯನ್ನಾಗಿ ಮಾಡಿದ ಗಂಡ ಆಕಸ್ಮಿಕ ಮರಣವನ್ನಪ್ಪಿದ್ದ. ಇದರಿಂದ ಮಂಗಳಾ ಒಬ್ಬಳೇ ಹೇಗೋ ಜೀವನ ನಡೆಸುತ್ತಿದ್ದಳು. ಅವಳಿಗೆ ಸುಮಾರು 16 ವರುಷದ ಮಗಳಿದ್ದಳು. ಮಂಗಳಾಳಿಗೆ ಪಕ್ಕದ ಹಳ್ಳಿಯಲ್ಲಿ ಒಬ್ಬ ಅಣ್ಣ ಕೂಡ ಇದ್ದ. ಸುಮಾರು 45 ವರ್ಷ ವಯಸ್ಸು. ಅವನೇ ಮಂಗಳಾಳ ಎಲ್ಲ ಆಗುಹೋಗುಗಳನ್ನು ನೋಡುತ್ತಿದ್ದ. ಒಂದು ದಿನ ಮಂಗಳಾ ಅಣ್ಣ ದುರುಗಪ್ಪನ ಪತ್ನಿ ತವರಿಗೆ ಹೋಗಿದ್ದಳು. ಆದ್ದರಿಂದ ತನಗೆ ನಿತ್ಯ ಅಡುಗೆ ಮಾಡಲು ಸೊಸೆಯನ್ನು ಕಳುಹಿಸಲು ಮಂಗಳಾಳನ್ನು ಒತ್ತಾಯಿಸಿದ. ಇದಕ್ಕೆ ಒಪ್ಪಿದ ಮಂಗಳಾ ಕೂಡ ಸ್ವಲ್ಪ ದಿನ ಅಡುಗೆ ಮಾಡಿಕೊಡಲು ಹರೆಯದ ಮಗಳನ್ನು ಕಳುಹಿಸಿದ್ದಳು. ಆದರೆ ಹೊಟ್ಟೆಗೆ ಅನ್ನಮಾಡಿ ಹಾಕಲು ಬಂದ ಸೊಸೆಯ ಹೊಟ್ಟೆಯನ್ನೇ ಮಾವ ತುಂಬಿಸಿ ಕಳುಹಿಸಿದ್ದ! ಇದು ಮಂಗಳಾ ಗಮನಕ್ಕೆ ಬಂದಿದ್ದು ಸುಮಾರು ನಾಲ್ಕು ತಿಂಗಳ ನಂತರ!! ಮಂಗಳಾಳ ಮಗಳು ನವ್ಯಾಳಿಗೆ ಸಂಸಾರದ ಯಾವ ಪರಿವೆಯೂ ಇರಲಿಲ್ಲ. ಆದರೆ ಅತ್ಯಾಚಾರ ನಡೆಸಿದ ಸಮಯದಲ್ಲಿ ಮಾವ “ನೀನು ಯಾರಿಗಾದರೂ ಹೇಳಿದರೆ ನಿಮಗೆ ಯಾವುದೇ ಸಹಾಯ ಮಾಡುವುದಿಲ್ಲ, ಜೊತೆಗೆ ಕೊಲೆ ಮಾಡಿಬಿಡುತ್ತೇನೆ” ಎಂದು ಬೆದರಿಕೆ ಹಾಕಿದ್ದ. ಆದರೆ ನವ್ಯಾ ಗರ್ಭಿಣಿ ಎಂದು ಗೊತ್ತಾದಾಗ ಅಮ್ಮ ಮಗಳ ಬದುಕು ಅಕ್ಷರಶಃ ಬೀದಿಗೆ ಬಿದ್ದಿತ್ತು.

ಘಟನೆ 4 :
ಕುಟುಂಬದಲ್ಲಿ ಅಂಥ ಬಡತನವೇನೂ ಇರಲಿಲ್ಲ. ಪತಿ ಪತ್ನಿ ಇಬ್ಬರೂ ದುಡಿಯುತ್ತಿದ್ದರು. ಒಮ್ಮೆ ಅದೇನಾಯಿತೊ ರಾಜೀವ ಕೆಲಸ ಬಿಟ್ಟ. ಪತ್ನಿ ಪಾರ್ವತಿ ತನ್ನ ಗಾಮರ್ೆಂಟ್ಸ್ ಕೆಲಸ ಮುಂದುವರಿಸಿದ್ದಳು. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು. ಮೊದಲನೆಯವಳು ಮಗಳು. ಹರೆಯಕ್ಕೆ ಕಾಲಿಟ್ಟ ಮಗಳ ಮೇಲೆ ಅಪ್ಪನೇ ಕಾಕದೃಷ್ಟಿ ಬೀರುತ್ತಿದ್ದ. ನಿತ್ಯ ಆಕೆಯನ್ನು ಬೆದರಿಸಿ ಹಿಂಸಿಸಿ ಅತ್ಯಾಚಾರ ನಡೆಸುತ್ತಿದ್ದ. ಅದೊಂದು ದಿನ ಮಗಳು ಅಜ್ಜಿಗೆ ವಿಷಯ ತಿಳಿಸಿದಾಗಲೇ ಅಪ್ಪ ಮಗಳ ಮೇಲೆ ಸುಮಾರು ಆರು ತಿಂಗಳಿನಿಂದ ಅತ್ಯಾಚಾರ ನಡೆಸುತ್ತಿದ್ದ ಎನ್ನುವ ವಿಚಾರ ಬಹಿರಂಗವಾಗಿತ್ತು. ಪೊಲೀಸರು ಆತನನ್ನು ಬಂಧಿಸಿದಾಗ ಅವನು ಒಂದು ಕೇಳಿದ ಪ್ರಶ್ನೆ “ನಾನು ಬೆಳೆಸಿದ ಮರದ ಹಣ್ಣನ್ನು ನಾನು ತಿನ್ನುವುದರಲ್ಲಿ ತಪ್ಪೇನು!?” ಅಲ್ಲಿ ಪೊಲೀಸರೂ ಬೆಚ್ಚಿ ಬಿದ್ದಿದ್ದರು…
****
ಇವು ಕೇವಲ ಕಾಲ್ಪನಿಕವಲ್ಲ, ನೈಜ ಘಟನೆಗಳು. ಹೆಣ್ಣು ಬರುಬರುತ್ತ ಭೋಗದ ವಸ್ತುವಾಗುತ್ತಿದ್ದಾಳೆ. ಹೆಣ್ಣು ಎನ್ನುವ ಒಂದೇ ಕಾರಣಕ್ಕೆ ಗಭರ್ಾವಸ್ಥೆಯಲ್ಲಿದ್ದಾಗಿನಿಂದಲೇ ಅವಳ ಮೇಲೆ ಕಾಕ ದೃಷ್ಟಿ ಹೆಚ್ಚಾಗುತ್ತಿದೆ. ಕುಟುಂಬ ವಲಯದಿಂದ ಮೊದಲ್ಗೊಂಡು ಸಮಾಜದ ಉನ್ನತ ಸ್ಥರದ ವರೆಗೆ ಅವಳನ್ನು ಕೇವಲ ಒಂದು ಅಂದದ ವಸ್ತುವಿನಂತೆ ಹಾಗೂ ತಾನೂ ಅದ ನ್ನು ಕಿತ್ತು ತಿನ್ನಬೇಕು ಎನ್ನುವ ವಕ್ರ ದೃಷ್ಟಿ ಹೆಚ್ಚಾಗುತ್ತಿದೆ. ಅಷ್ಟರ ಮಟ್ಟಿಗೆ ಸಮಾಜ ನೈತಿಕತೆಯನ್ನು ಬೀದಿಯಲ್ಲಿ ಬಿಸಾಡಿ ತುಳಿಯುತ್ತಿದೆ.
ಹೆಣ್ಣು ಭ್ರೂಣ ಹತ್ಯೆಯಿಂದ ಆರಂಭಗೊಂಡು ಕಾಮಾಂಧರ ದಾಳಿ ಹಾಗೂ ಲೈಂಗಿಕ ದೌರ್ಜನ್ಯ, ಹತ್ಯೆವರೆಗೆ ಹೆಣ್ಣು ನಿತ್ಯ ಒಂದಿಲ್ಲೊಂದು ಕಾರಣಕ್ಕೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ನರಳುವ ಸ್ಥಿತಿ ನಿರ್ಮಾಣವಾಗಿದೆ. ಇದು ಪಿತೃ ಪ್ರಧಾನ ಸಮಾಜ ಎನ್ನುವ ಕಾರಣಕ್ಕೆ ಮಹಿಳೆ ಬಾಲ್ಯದಲ್ಲಿ ತಂದೆಯ ಅಧೀನದಲ್ಲಿ, ಹರೆಯದಲ್ಲಿ ಗಂಡನ ಸುಪರ್ದಿಯಲ್ಲಿ, ಮುಪ್ಪಿನಲ್ಲಿ ಮಕ್ಕಳ ಹದ್ದುಬಸ್ತಿನಲ್ಲಿ ಬದುಕುತ್ತಾಳೆ. ಆದರೆ ತನ್ನ ಸ್ವಂತಿಕೆಯನ್ನೂ ಬದಿಗಿಟ್ಟು ಬದುಕುವ ಜೀವಕ್ಕೆ ಈಗ ಅಲ್ಲೂ ರಕ್ಷಣೆ ಇಲ್ಲದಾಗಿದೆ. ಅಂದರೆ ಪುರುಷನ ರಕ್ಷಣೆಯಲ್ಲಿಯೇ ಜೀವನ ದೂಡುವವಳಿಗೆ ಈಗ ಪಕ್ಕದಲ್ಲಿರುವ ಪುರುಷ ವ್ಯವಸ್ಥೆ ಕೂಡ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ. ನಿತ್ಯ ಅವಳ ಮೇಲೆ ಮಾರಣಾಂತಿಕ ಹಲ್ಲೆ, ಲೈಂಗಿಕ ದೌರ್ಜನ್ಯ ಎಲ್ಲೆ ಮೀರಿದೆ. ಹಾಗಾದರೆ ಅವಳು ಸ್ವಂತ ಬದುಕನ್ನು ಕಂಡುಕೊಳ್ಳುವುದಾದರೂ ಎಂದು ಮತ್ತು ಹೇಗೆ?
ಅಪ್ರಾಪ್ತ ಬಾಲಕಿಯರಿಂದ ಆರಂಭವಾಗಿ ಈಗತಾನೆ ಕೊನೆಯುಸಿರೆಳೆಯುತ್ತಾಳೇನೋ ಎನ್ನವಂಥ ಹಣ್ಣು ಹಣ್ಣು ಮುದಿಕಿಯರ ಮೇಲೂ ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿವೆ. ಇದಕ್ಕೆ ಕಾರಣ ಏನು? ಪುರುಷ ಮನಸ್ಸುಗಳು ಅಷ್ಟು ರಾಕ್ಷಸೀ ಪ್ರವೃತ್ತಿಗೆ ಬರಲು ಕಾರಣವೇನು? ಹೆಣ್ಣು ಅಷ್ಟು ನಿಸ್ಸಹಾಯಕಳೇ? ಅವಳಿಗೂ ಒಂದು ಮನಸ್ಸಿದೆ, ಅದೂ ಕೂಡ ಘಾಸಿಯಾಗುತ್ತದೆ ಎನ್ನುವ ಮನೋಭಾವ ಮೂಡುವುದು ಯಾವಾಗ ? ಇವುಗಳಿಗೆ ನಾವು ಉತ್ತರ ಕಂಡುಕೊಳ್ಳಬೇಕಾದ ಜರೂರತ್ತು ಇಂದಿದೆ.
ಕರ್ನಾಟಕ ಅತ್ಯಾಚಾರಿಗಳ ರಾಜ್ಯವಾಗುತ್ತಿದೆ. ದಿನೇ ದಿನೆ ಇಂಥ ಪ್ರಕರಣಗಳು ಹೆಚ್ಚುತ್ತಲೇ ಇವೆ. 2011ರಲ್ಲಿ 324 ಅಪ್ರಾಪ್ತ ಬಾಲಕಿಯರ ಮೇಲೆ ಹಾಗೂ 381 ಯುವತಿಯರ ಮೇಲೆ ಅತ್ಯಾಚಾರ ನಡೆದಿವೆ. 2012ರಲ್ಲಿ 330-393, 2013ರಲ್ಲಿ 563-498 ಬಾಲಕಿಯರು ಹಾಗೂ ಯುವತಿಯರ ಮೇಲೆ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಆದರೆ 2014 ಜೂನ್ ಮದ್ಯದವರೆಗೆ 325 ಬಾಲಕಿಯರ ಮೇಲೆ ಹಾಗೂ 151 ಯುವತಿಯರ ಮೇಲೆ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇದು ಇತ್ತೀಚೆಗೆ ಇನ್ನೂ ಇಂಥ ಪ್ರಕರಣಗಳು ಹೆಚ್ಚಾಗುತ್ತಿವೆ ಎನ್ನವುದಕ್ಕೆ ಸಾಕ್ಷಿ. 2011ರ ಈಚೆಗೆ ಸುಮಾರು 1542 ಬಾಲಕಿಯರ ಮೇಲೆ 1423 ಯುವತಿಯರ ಮೇಲೆ ಅತ್ಯಾಚಾರಗಳಾಗಿವೆ. ಇಷ್ಟು ಪ್ರಕರಣದಲ್ಲಿ ಭಾಗಿಯಾದವರು ಸುಮಾರು 4627 ಆರೋಪಿಗಳು. ಆದರೆ ಇವರಲ್ಲಿ ಬಂಧಿಸಿರುವುದು ಮಾತ್ರ ಕೇವಲ 3970 ಮಂದಿಯನ್ನ. ಇದರಲ್ಲಿ ಇನ್ನೂ ಪ್ರಮುಖ ವಿಚಾರ ಎಂದರೆ 2011ರಿಂದ ಇಲ್ಲಿಯವೆಗೆ ಶಿಕ್ಷೆಗೆ ಗುರಿಯಾದವರು ಕೇವಲ 118 ಮಂದಿ!! ಪರಿಸ್ಥಿತಿ ಹೀಗಿರುವಾಗ ದೌರ್ಜನ್ಯ ನಿಲ್ಲುವುದಾದರೂ ಹೇಗೆ? ಈ ಕಾರಣಕ್ಕೆ ನಮಲ್ಲಿ ನಿತ್ಯ ಸುಮಾರು 21 ನಿಮಿಷಕ್ಕೊಂದು ಅತ್ಯಾಚಾರಗಳು ನಡೆಯುತ್ತಿವೆ. ಕೆಲವು ವರದಿಯಾಗುತ್ತವೆ ಇನ್ನು ಕೆಲವು ಮೌನವಾಗಿ ಮುಚ್ಚಿಹೋಗುತ್ತಿವೆ… ಇನ್ನು ಒಂದು ಆಘಾತಕಾರಿ ವಿಚಾರವೆಂದರೆ ಅದೆಷ್ಟೋ ಬಡ ಮಹಿಳೆಯರ ಮೇಲೆ ಆಗುವ ಲೈಂಗಿಕ ದೌರ್ಜನ್ಯಗಳು ಆಚೆ ಕೂಡ ಬರುತ್ತಿಲ್ಲ! ಮಾದ್ಯಮಗಳೂ ಕೂಡ ಆ ಕಡೆ ಗಮನಹರಿಸುವುದಿಲ್ಲ.
ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರ ನಡೆದಾಗ ಇಡೀ ದೇಶದಲ್ಲಿ ಒಂದು ಬಗೆಯ ಹೊಸ ಅಲೆ ಎದ್ದಿತ್ತು. ಆದರೆ ಅದಾಗಿ ಕೆಲವೇ ದಿನಗಳ ನಂತರ ಪ್ರತಿಭಟನೆಯ ಕಸುವು ಕೂಡ ಕುಂದಿಹೋಯಿತು. ಆ ಚಳವಳಿಯಲ್ಲಿ ಪಾಲ್ಗೊಂಡ ಬಹುತೇಕರು ರಾಜಕಾರಣದ ಕಡೆ ಹೊರಳಿದ್ದೂ ಕೂಡ ಅದಕ್ಕೆ ಕಾರಣವಿರಬಹುದೇನೋ. ಆದರೆ ಹೆಣ್ಣಿನ ಮೇಲಾಗುವ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಲು ರಾಜಕಾರಣದಲ್ಲಿ ಅವಕಾಶವೇ ಇಲ್ಲವೇನೋ ಎನ್ನುವಷ್ಟರಮಟ್ಟಿಗೆ ಇಂದು ವಾತಾವರಣ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಸರಣಿ ಅತ್ಯಾಚಾರಗಳು ಮೇಲಿಂದ ಮೇಲೆ ನಡೆಯುತ್ತಿದ್ದರೂ ಇದು ವಿಧಾನಸಭೆಯಲ್ಲಿ ಕೇವಲ ರಾಜಕಾರಣದ ವಸ್ತುವಾಗಿದೆ. ಅಲ್ಲಿ ಕುಳಿತ ಆಡಳಿತ ಹಾಗೂ ಪ್ರತಿಪಕ್ಷಗಳೆರಡರ ಸದಸ್ಯರು ಜನಪ್ರತಿನಿಧಿಗಳು ಎಂದು ಕರೆಸಿಕೊಂಡು ಈ ವಿಚಾರವನ್ನು ಕೇವಲ ತಮಾಷೆಯ ವಸ್ತುವನ್ನಾಗಿಸಿಕೊಳ್ಳುತ್ತಿದ್ದಾರೆ. ಅತ್ಯಾಚಾರ ತಡೆಯಲು ಹಾಗೂ ಅಂಥ ಆರೋಪಿಗಳಿಗೆ ಶಿಕ್ಷೆ ವಿಧಿಸಲು ಒಂದು ಜಂಟಿ ಸದನ ಸಮಿತಿ ರಚಿಸುವುದಾಗಿ ಸಕರ್ಾರ ಹೇಳಿಕೆ ನೀಡಿದೆ. ಆದರೆ ಅದು ಯಾವಾಗ ರಚನೆಯಾಗುತ್ತದೆ ಎನ್ನುವ ಪ್ರಶ್ನೆಗೆ ಖಚಿತವಾದ ಉತ್ತರ ನೀಡಿಲ್ಲ. ಸಕರ್ಾರಿ ವ್ಯವಸ್ಥೆಯಲ್ಲಿ ಎಲ್ಲವೂ ಗಾಳಿಯಲ್ಲಿ ತೇಲುವ ಗುಂಡಿನಂತಾಗಿವೆ. ಹೀಗಾಗಿ ಆರೋಪಿಗಳೂ ಕೂಡ ರಾಜಾರೋಷವಾಗಿ ಹಾಡಹಗಲೇ ಮಹಿಳೆಯರನ್ನು ಅಪಹರಿಸಿ ದೌರ್ಜನ್ಯ ನಡೆಸುವಂಥ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ.
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲಿ ಭಾರತೀಯ ದಂಡ ಸಂಹಿತೆ (ಐ.ಪಿ.ಸಿ.) ಪ್ರಕಾರ ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಬಹುದು. ಆ ಮೂಲಕ ಆರೋಪಿಗೆ ತ್ವರಿತವಾಗಿ ಶಿಕ್ಷೆಯಾಗುವಂತೆ ಮಾಡಬಹುದು. ಆದರೆ ಯಾವ ಠಾಣೆಯ ಪೊಲೀಸರೂ ಇಂಥ ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ. ಪೋಸ್ಕೊ ಅಡಿ ಕ್ರಮ ತೆಗೆದುಕೊಂಡರೆ ತಿಂಗಳೊಳಗೆ ಪೋಲಿಸರು ಆರೋಪಿಯ ವಿಚಾರಣೆ ನಡೆಸಿ ಮಕ್ಕಳ ವಿಶೇಷ ನ್ಯಾಯಾಲಕ್ಕೆ ದೋಷಾರೂಪಾಣಾ ಪಟ್ಟಿ ಸಲ್ಲಿಸಬೇಕು. ಇಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಗುವಿನ ಹೇಳಿಕೆಯೇ ಅಂತಿಮ. ಪೋಲೀಸ್ ಇಲಾಖೆಯಲ್ಲಿ ಈ ಪ್ರಕರಣಗಳನ್ನು ಆಲಿಸಿ, ಪ್ರಕರಣ ದಾಖಲಿಸಿಕೊಳ್ಳುವುದಕ್ಕಾಗಿಯೇ ಪ್ರತಿ ಠಾಣೆಯಲ್ಲಿ ವಿಶೇಷ ಘಟಕ (ಖಎಕಗ) ಸ್ಥಾಪಿಸಬೇಕು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸಕರ್ಾರ 2012ರ ನವೆಂಬರ್ 14 ರಂದು ಪೋಸ್ಕೊ ಕಾಯ್ದೆಯನ್ನು ಜಾರಿಗೆ ತಂದಿದೆ. ಈ ಕಾಯ್ದೆ ಪ್ರಕಾರ 18 ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಮಕ್ಕಳ ಮಾರಾಟ, ವೇಶ್ಯಾವಾಟಿಕೆ ಮತ್ತು ಅಶ್ಲೀಲ ಚಿತ್ರಗಳಿಗೆ ಮಕ್ಕಳನ್ನು ಬಳಸಿಕೊಳ್ಳುವುದು ಅಪರಾಧ. ಹೆಣ್ಣು/ಗಂಡು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದು ಶಿಕ್ಷಾರ್ಹ ಅಪರಾಧ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬುದು ತಿಳಿದ ಕೂಡಲೇ ಸ್ಥಳೀಯ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಕೊಳ್ಳಬಹುದು. ಆದರೆ ಇಂಥ ನೈತಿಕತೆಯನ್ನು ಪ್ರದಶರ್ಿಸುವ ಪೊಲೀಸರೂ ಇಲ್ಲವಾಗಿದ್ದಾರೆ. ಹೀಗಾಗಿ ಆರೋಪಿಗಳಿಗೆ ಪೊಲೀಸರ ಮೇಲೆ ಭಯ ಇಲ್ಲದಾಗಿದೆ. ಇದೊಂದು ರೀತಿ ಕಳ್ಳಾ-ಪೊಲೀಸ್ ಆಟದಂತಾಗಿದ್ದು, ಮಕ್ಕಳು-ಮಹಿಳೆಯರಿಗೆ ರಕ್ಷಣೆ ಇಲ್ಲದಂತ ವಾತಾವರಣ ಸೃಷ್ಟಿಯಾಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಪೊಲೀಸ್ ಹಾಗೂ ಸಕರ್ಾರದ ಮೇಲೆ ಜನಸಾಮಾನ್ಯರು ನಂಬಿಕೆ ಕಳೆದುಕೊಳ್ಳುವ ದಿನ ದೂರವಿಲ್ಲ…
ಇವೆಲ್ಲದರ ಜೊತೆಗೆ ಸಮಾಜದಲ್ಲಿ ಜನಸಾಮಾನ್ಯರು ಕೂಡ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕಿದೆ. ಪ್ರೀತಿ, ಕರುಣೆ, ವಿಶ್ವಾಸ, ನಂಬಿಕೆ ಬತ್ತಿಹೋಗಿರುವ ಈ ದಿನಮಾನಗಳಲ್ಲಿ ಅವುಗಳನ್ನು ಮತ್ತೆ ಕಟ್ಟಿಬೆಳೆಸಬೇಕಿದೆ. ಈ ಸಮಾಜ ತನಗೆ ಸುರಕ್ಷಿತ ಎನ್ನುವ ಭಾವನೆ ಮಹಿಳೆಯಲ್ಲಿ ಮೂಡುವಂಥ ವಾತಾವರಣವನ್ನು ಸೃಷ್ಟಿಸಬೇಕಾದ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲೂ ಇದೆ. ಈ ಬಗ್ಗೆ ಕೇವಲ ಸಕರ್ಾರ ಮಾತ್ರವಲ್ಲ ಸಮಾಜದ ಎಲ್ಲ ಸ್ಥರದ ಜನ ಹಾಗೂ ಸಂಘ ಸಂಸ್ಥೆಗಳೂ ಕೂಡ ಗಂಭೀರವಾಗಿ ಯೋಚಿಸಬೇಕಿದೆ. ಬಾಲ್ಯವಿವಾಹ ಸತಿಪದ್ಧತಿ, ದೇವದಾಸಿ ಪದ್ಧತಿಗಳು ಸಮಾಜದಲ್ಲಿ ಮಹಿಳೆಯನ್ನು ಅಣುಅಣುವಾಗಿ ಕೊಂದ ರೀತಿಯಲ್ಲೇ ಈಗ ಅತ್ಯಾಚಾರವೆಂಬ ಭೂತ ಹಿಂಸೆ ನೀಡಿ ಕೊಲ್ಲುತ್ತಿದೆ. ಅದಕ್ಕೆ ಈಗ ಕೊನೆ ಹಾಡಲೇಬೇಕಿದೆ. ಅದಕ್ಕಾಗಿ ಒಂದು ದೊಡ್ಡ ಆಂದೋಲನ ನಡೆಯಲೇಬೇಕಿದೆ. ಆ ಮೂಲಕ ಸಮಾಜ ಎಲ್ಲ ಸ್ಥರದ ಜನರಲ್ಲೂ ಅರಿವು ಮೂಡಿಸುವ ಮೂಲಕ ಸ್ತ್ರೀಗೆ ಒಂದು ಶಾಂತಚಿತ್ತ ವಾತಾವರಣವನ್ನು ಸೃಷ್ಟಿಸಬೇಕಿದೆ. ಅವಳಿಗೂ ಒಂದು ಮನಸ್ಸಿದೆ ಎನ್ನುವುದನ್ನು ಅರಿಯಬೇಕಿದೆ. ಅವಳನ್ನು ನೋಡುವ ದೃಷ್ಟಿ ಕೂಡ ಬದಲಾಗಬೇಕಿದೆ. ಈ ಬಗ್ಗೆ ಅರಿವು ಹೆಚ್ಚಿಸಬೇಕಿದೆ. ಆ ಕೆಲಸ ಎಲ್ಲ ನೆಲೆಯಲ್ಲಿ ಜರೂರಾಗಿ ಆಗುವಂತಾಗಲಿ…






A serious matter has been eloborately discssed.But somewhere down the line man should start thinking about his bad deeds and stop doing this.Socialogists and psycologists should find reasons to correct this type of men and society at large.
ಎನ್ನುವ ಭಾವನೆ ಮಹಿಳೆಯಲ್ಲಿ ಮೂಡುವಂಥ ವಾತಾವರಣವನ್ನು ಸೃಷ್ಟಿಸಬೇಕಾದ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲೂ ಇದೆ. ಈ ಬಗ್ಗೆ ಕೇವಲ ಸಕರ್ಾರ ಮಾತ್ರವಲ್ಲ ಸಮಾಜದ ಎಲ್ಲ ಸ್ಥರದ ಜನ ಹಾಗೂ ಸಂಘ ಸಂಸ್ಥೆಗಳೂ ಕೂಡ ಗಂಭೀರವಾಗಿ ಯೋಚಿಸಬೇಕಿದೆ. ಬಾಲ್ಯವಿವಾಹ ಸತಿಪದ್ಧತಿ, ದೇವದಾಸಿ ಪದ್ಧತಿಗಳು ಸಮಾಜದಲ್ಲಿ ಮಹಿಳೆಯನ್ನು ಅಣುಅಣುವಾಗಿ ಕೊಂದ ರೀತಿಯಲ್ಲೇ ಈಗ ಅತ್ಯಾಚಾರವೆಂಬ ಭೂತ ಹಿಂಸೆ ನೀಡಿ ಕೊಲ್ಲುತ್ತಿದೆ. ಅದಕ್ಕೆ ಈಗ ಕೊನೆ ಹಾಡಲೇಬೇಕಿದೆ. ಅದಕ್ಕಾಗಿ ಒಂದು ದೊಡ್ಡ ಆಂದೋಲನ ನಡೆಯಲೇಬೇಕಿದೆ. ಆ ಮೂಲಕ ಸಮಾಜ ಎಲ್ಲ ಸ್ಥರದ ಜನರಲ್ಲೂ ಅರಿವು ಮೂಡಿಸುವ ಮೂಲಕ ಸ್ತ್ರೀಗೆ ಒಂದು ಶಾಂತಚಿತ್ತ ವಾತಾವರಣವನ್ನು ಸೃಷ್ಟಿಸಬೇಕಿದೆ. ಅವಳಿಗೂ ಒಂದು ಮನಸ್ಸಿದೆ ಎನ್ನುವುದನ್ನು ಅರಿಯಬೇಕಿದೆ. ಅವಳನ್ನು ನೋಡುವ ದೃಷ್ಟಿ ಕೂಡ ಬದಲಾಗಬೇಕಿದೆ. ಈ ಬಗ್ಗೆ ಅರಿವು ಹೆಚ್ಚಿಸಬೇಕಿದೆ. ಆ ಕೆಲಸ ಎಲ್ಲ ನೆಲೆಯಲ್ಲಿ ಜರೂರಾಗಿ ಆಗುವಂತಾಗಲಿ…
manamuttubva baraha…
Last paragraph is rather insightful madam
ಇವೆಲ್ಲವುಗಳು ಆಗಾಗ ನಮ್ಮ ಅರಿವಿಗೆ ಬರುತ್ತಿರುತ್ತವೆ. ಕಾನೂನುಗಳು ಕಾಣುವ ಆರೋಪಿಗಳನ್ನು ಮಾತ್ರ ಶಿಕ್ಷಿಸುತ್ತವೆ!! ಆದರೆ ಒಳಗಿನ ಕಣ್ಣು ಸತ್ವಯುತವಾಗದ ಹೊರತು ಇವುಗಳ ಹತೋಟಿ ಸಾಧ್ಯವಾಗದು. ಇದು ಸರಿ, ತಪ್ಪು ನ್ಯಾಯ ಅನ್ಯಾಯ ಅತ್ಯಚಾರ ಮಹಿಳೆಯರ ಸಬಲೀಕರಣ, ತಾರತಮ್ಯ… ಎಲ್ಲವುಗಳ ಬಗ್ಗೆ ಬಹುಮಾಧ್ಯಮಗಳಲ್ಲಿ ಪ್ರಸಾರಗೊಂಡು ಸಾರ್ವತ್ರಿಕ ಜಾಗೃತಿ ಮೂಡಿಸಬೇಕಾದ ತುರ್ತು ಇಂದಿನ ಅಗತ್ಯವಾಗಿದೆ.
ಈ ಬರಹವೊಂದಾದರೂ ಸದ್ಯದ ಪರಿಸ್ತಿತಿಗೆ ಪ್ರಸ್ತುತವಾಗಿ ಚಿಂತನಾರ್ಹವಾಗಿದೆ.
ಮಾನವೀಯ ಮೌಲ್ಯಗಳು ಮಾಯವಾಗಿವೆ. ಪ್ರೀತಿ, ವಾತ್ಸಲ್ಯ, ಕರುಣೆ, ಮಮತೆಗೆ ಬೆಲೆ ಇಲ್ಲದಾಗಿದೆ. ಅನುಮಾನ ಎಲ್ಲೆಡೆ ಮನೆಮಾಡುವಂತಾಗಿದೆ. ಹೀಗಾಗಿ ಸಮಾಜದ ಸ್ವಾಸ್ತ್ಯ ಹದಗೆಟ್ಟಿದೆ. ಹೆಣ್ಣು ದೇವತೆ ಎಂದು ಹೇಳುತ್ತಲೇ ಅವಳನ್ನು ಅಬಲೆಯನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ. ಮುಗ್ದ ಮಕ್ಕಳಿಂದ ಹಿಡಿದು ಮದುಕಿಯರ ವರೆಗೆ ಅತ್ಯಾಚಾರಗಳು ನಡೆಯುತ್ತಿವೆ. ಹೀಗಾಗಿ ಅದನ್ನು ತಪ್ಪಿಸುವ ಕೆಲಸ ಆಗಬೇಕು. ಇದು ಕೇವಲ ಸರ್ಕಾರದಿಂದ ಮಾತ್ರ ಆಗುವಂತ ಕೆಲಸವಲ್ಲ. ಸಮಾಜದ ಎಲ್ಲ ಸ್ಥರಗಳಲ್ಲೂ ಜಾಗೃತಿ ಮೂಡಬೇಕು. ಪ್ರತಿಯೊಬ್ಬರೂ ತಮ್ಮ ತಮ್ಮ ನೆಲೆಯಲ್ಲಿ ನೈತಿಕತೆ ಬೆಳೆಸಿಕೊಳ್ಳಬೇಕು. ನಿಜಕ್ಕೂ ಸೌಮ್ಯಾ ಅವರ ಲೇಖನ ಅದ್ಭುತ. ಬರವಣೆಗೆ ಈಗೇ ಇದೇ ಜಾಗೃತಿಯ ನೆಲೆಯಲ್ಲಿ ಸಾಗಲಿ. ನಮ್ಮೊಳಗೆ ಹೊಸದೊಂದು ಚಿಂತನೆಯ ಹುಳಬಿಟ್ಟಿದ್ದಕ್ಕೆ, ಆ ಮೂಲಕ ಎಚ್ಚರಿಸಿದ್ದಕ್ಕೆ ಥ್ಯಾಕ್ಸ್…
-ರಮೇಶ್ ಹಿರೇಜಂಬೂರು