ಪ್ರಕಾಶ್ ಬಿ

ನಿನ್ನ ನೋಡದೆ ದಿನಗಳು ಸಂಜೆಯಾಗಿ ಸೊರಗಿವೆ ಹೀಗೆ
ನೀನಿಲ್ಲದೆ ನಿನ್ನ ನೆನದೆ ಕತ್ತಲಲ್ಲೂ ಕೊರಗಿವೆ ಹೀಗೆ
ಬಡಕಲು ಬತ್ತಿಗೀಗ ಎಣ್ಣೆ ಇಲ್ಲದೆ ಸಣ್ಣಾಗಿದೆ
ಅರಳಿದ ಕಲೆಗೆ ಬೆಲೆಯೇ ಇಲ್ಲದೆ ಸೊರಗಿವೆ ಹೀಗೆ
ಬಾಳ ಬುತ್ತಿಯಲ್ಲೀಗ ಕನಸುಗಳದೆ ಘಾಟು, ಘಾಟು
ಮಾಯದ ಗಾಯಗಳವು ಮುಲಾಮಿಲ್ಲದೆ ಒರಗಿವೆ ಹೀಗೆ
ಹೆಜ್ಜೆ ಬೆನ್ನು ಹತ್ತಿದ ಕಾಲಿಗೆ ಗೆಜ್ಜೆ ಸದ್ದು ಇನ್ನೂ ಸಿಕ್ಕಿಲ್ಲ
ಜಗದ ಚುಚ್ಚು ಮಾತಿಗೆ ಮನದ ಮೌನವೇ ಉತ್ತರ ಹೇಳುತ್ತಿವೆ ಹೀಗೆ
ಬೆನ್ನು ಬಿದ್ದ ಕನಸು ನಿತ್ಯ ಕಾಡಿಸುತ್ತಿದೆ ನಿನ್ನ ಹಾಗೆ
ನೀ ಇಟ್ಟ ಹೆಜ್ಜೆ `ಪ್ರಕಾಶ’ ಹುಡುಕುತ್ತಿದೆ ಸಾವಲ್ಲೂ ಧ್ಯಾನವೇ ಹೀಗೆ






Thumba chennagide
ಬಡಕಲು ಬತ್ತಿಗೀಗ ಎಣ್ಣೆ ಇಲ್ಲದೆ ಸಣ್ಣಾಗಿದೆ
ಅರಳಿದ ಕಲೆಗೆ ಬೆಲೆಯೇ ಇಲ್ಲದೆ ಸೊರಗಿವೆ ಹೀಗೆ thumba sundaravada salugalu ivu
nice poem..
ತುಂಬಾ ಚೆನ್ನಾಗಿದೆ.ಅಬಿನಂದನೆಗಳು
thank u..