ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೆಗಲು ಮುಟ್ಟಬೇಡಿ..ಎಲ್ಲರೂ ಹೆಣ ಹೊತ್ತವರೇ

ಗುಟ್ಟುಗಳು -ವಿಜಯ ಕುಮಾರ್ ಕುಂಭಾಶಿ ಬ್ರಹ್ಮಾಂಡಕ್ಕೆ ತೆರೆದಿಟ್ಟ ಎದೆ ಈ ಭೂಮಿ ಇಲ್ಲಿ ಗುಟ್ಟುಗಳಿಲ್ಲ; ಇರಬಾರದಲ್ಲ?!   ಕತ್ತಲ ಮೂಲೆಯನ್ನೆಲ್ಲ ತಡಕಾಡಿಬಿಡಬೇಕು ಮುಗುಮ್ಮಾಗಿ ಕೂತ ಗುಟ್ಟುಗಳೆಲ್ಲ ಒದ್ದಾಡಬೇಕು   ಗುಟ್ಟೊಂದು ಜೀವಂತವಾಗಿ ಸೆರೆಸಿಕ್ಕುವುದೇ ಇಲ್ಲ ಕೆದಕಿದಂತೆ ಕಂದಕವಾಗಿ ಬಾಯ್ತೆರೆಯುತ್ತದೆ ಹೆಣವೊಂದು ಧುತ್ತೆಂದು ಅದರೆದೆಯ ಮೇಲೆ ನಾವಿರುತ್ತೇವೆ ಸೂತಕವಂಟಿಸಿಕೊಂಡು   ಭಯಾನಕ ರಂಗೋಲಿಗಿಟ್ಟ ಚುಕ್ಕಿಗಳ ಸಾಲು ನೇಣುಹಾಕಿ ಸತ್ತ ಗುಟ್ಟುಗಳ ಸಮಾಧಿ. ಹೆಗಲು ಮುಟ್ಟಬೇಡಿ; ಎಲ್ಲರೂ ಹೆಣ ಹೊತ್ತವರೆ   ಸ್ಮಶಾನಕ್ಕೆ ಬೆನ್ನುಹಾಕಿ ಬಂದ ದಿನ ನಿಮ್ಮೊಳಗೂ ಒಂದು ಗುಟ್ಟು ಮಿಸುಕಾಡುತ್ತದೆ ಆತ್ಮಕ್ಕೆ ಸಾವಿಲ್ಲವಲ್ಲ; ಹುಡುಕಾಡುತ್ತದೆ!]]>

‍ಲೇಖಕರು G

3 July, 2012

7 Comments

  1. shanthi k.a.

    tumba chennagide

  2. Nataraju S M

    ಕುಂಭಾಶಿ ಹುಡುಗನ ಕವಿತೆಗಳನ್ನು ಹಿಡಿಯಾಗಿ ಓದಲು ಕಾಯುತ್ತಲೇ ಇದ್ದೇನೆ.. ಚಂದದ ಕವಿತೆ.. ಶುಭವಾಗಲಿ

  3. D.RAVI VARMA

    ಸ್ಮಶಾನಕ್ಕೆ
    ಬೆನ್ನುಹಾಕಿ ಬಂದ ದಿನ
    ನಿಮ್ಮೊಳಗೂ
    ಒಂದು ಗುಟ್ಟು ಮಿಸುಕಾಡುತ್ತದೆ
    ಆತ್ಮಕ್ಕೆ ಸಾವಿಲ್ಲವಲ್ಲ;
    ಹುಡುಕಾಡುತ್ತದೆ!……heart touching …..
    ravi varma hosapete

  4. Vikram Hathwar

    Very nice…..ಗುಟ್ಟೊಂದು ಜೀವಂತವಾಗಿ ಸೆರೆಸಿಕ್ಕುವುದೇ ಇಲ್ಲ……keep writing….

  5. sachin

    Really gud one…

  6. raghunath

    good one congrats

  7. nARAYAN rAICHUR

    ‘ondu henava naalku henagalu horuvudetake ? Naagsling yogi taanu merevudetake “- NENAPIGE BANTU : oLLEYA kAVANA – NARAYAN RAICHUR, (rANGA-vIMRSHAKA/lEKHAKA)

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading