ಹೆಂಡತಿಯ ತವರೂರು ನಾಗವಂದದಲ್ಲಿ..

IMG_20160416_124140

ವೀರೇಶ ಹೊಗೆಸೊಪ್ಪಿನವರ 

ಒಂದು ನನ್ನ ತಾಯಿಯ ತವರು ಮನೆ ರಟ್ಟೀಹಳ್ಳಿ,
ಇನ್ನೊಂದು ಹಿರೇಜಂಬೂರು ನಮ್ಮ ತಂದೆಯ ಅಕ್ಕನ ಊರು
ಮತ್ತೊಂದು ನನ್ನ ಹೆಂಡತಿ ತವರೂರು ನಾಗವಂದ (ನಮ್ಮ ಚಿಕ್ಕಮ್ಮನ ತವರು ಮನೆಯೂ ಹೌದು).
ನಾ ಚಿಕ್ಕವನಿದ್ದಾಗ ಈ ಊರುಗಳಿಗೆ ಜಾತ್ರೆಗೆ ಹೋಗ್ತಿದ್ದೆ.. ಮದುವೆ ಆಗಿ ಮುಂದಿನ ತಿಂಗಳಿಗೆ ಇನ್ನೇನು ಆರು ವರ್ಷ ಮುಗಿಯುತ್ತೆ. ಒಂದು ವರ್ಷ ಸಹಾ ನಮ್ಮ ಅತ್ತೆ ಮನೆಯ ಊರಿನ ಜಾತ್ರೆಗೆ ಹೋಗಿರಲಿಲ್ಲ..
ಈ ಬಾರಿ ಜಾತ್ರೆ ಶುಕ್ರವಾರ, ಶನಿವಾರ ಬರುತ್ತೆ.  ನೀವು ಬರ್ಲೇ ಬೇಕು ಅಂತ ಹಠ ಹಿಡಿದ್ಲು ಜ್ಯೋತಿ.. ಸರಿ ರಜೆ ಸಿಕ್ತು ಹೋಗಿದ್ದೆ.. ಸಕ್ಕತ್ತಾಗಿತ್ತು..
ಆ ಉರಿ ಬಿಸಿಲಲ್ಲೂ ಜಾತ್ರೆನ ಮೊದಲ ಬಾರಿಗೆ ಇಷ್ಟು ಎಂಜಾಯ್ ಮಾಡಿದೆ. ಅದು ನಾಗವಂದ ಗ್ರಾಮದ ಶ್ರೀ ವೀರಭದ್ರೇಶ್ವರ ದೇವರ ಗುಗ್ಗಳ. ಸಮಾಳ ಬಾರಿಸಿಕೊಂಡು ಹರಕೆಯ ಗುಗ್ಗಳಗಳ ಸಾಲು, ಸಾಲು… ಇವರೊಂದಿಗೆ ಪುರವಂತರು ಹೇಳುತ್ತಿದ್ದ ವೀರಭದ್ರೇಶ್ವರನ ಒಡಪುಗಳು, ಹಾಲ್ ಐಸ್, ನೀರ್ ಐಸ್, ಡೊಳ್ಳು, ಕುಣಿತ, ಭಜನೆ.., ರಾಸುಗಳ ಮೆರವಣಿಗೆ, ತರ್ಲೆ ಹುಡುಗರ ಪೂ…ಪೂ.. ಅಲ್ಲಲ್ಲಿ ಫ್ಲೆಕ್ಸ್ ಬ್ಯಾನರ್ರು… ಮಜವೋ ಮಜ…
ಈ ಊರಿನಲ್ಲಿ ಜಕಣಾಚಾರಿ ಕಟ್ಟಿದ್ದ ಎಂಬ ಒಂದು ಪುರಾತನ ದೇವಾಲಯವೂ ಇದೆ. ಹೀಗೆ ಸುತ್ತ ಮುತ್ತ ಕೆಲವು ಊರುಗಳಲ್ಲಿ ಇದೇ ತರಹದ ದೇವಾಲಯಗಳಿವೆ. ಅವೆಲ್ಲವೂ ಒಂದೇ ರಾತ್ರಿಯಲ್ಲಿ ಕಟ್ಟುತ್ತಿದ್ದದ್ದಂತೆ, ಬೆಳಗಾಗುವುದರೊಳಗೆ ಕಟ್ಟಲಾಗಲಿಲ್ಲ ಅಂದರೆ ಅಲ್ಲಿಗೇ ನಿಲ್ಲಿಸಿ ಹೋಗುತ್ತಿದ್ದರಂತೆ. ಅದಕ್ಕೆ ಹೋದಾಗಂತೂ ಒಂದು ಒಳ್ಳೆಯ ಅನುಭವವಾಯ್ತು.. ಆದರೆ ಅದು ಶಿಥಿಲಾವಸ್ಥೆ ಸೇರಿರುವುದೇ ದುಃಖದ ವಿಷಯ…
ನನ್ನ ಮೊಬೈಲ್ ಕ್ಯಾಮೆರಾ ಕಣ್ಣು ಕಂಡಂತೆ ಜಾತ್ರೆಯ ಚಿತ್ರ ಇಲ್ಲಿದೆ- 
IMG_20160416_095534
IMG_20160416_124629
IMG_20160416_132339
 
IMG_20160416_101539
IMG_20160416_095700
IMG_20160416_205130
IMG_20160416_185635
IMG_20160416_124629

ಹಹಹ…ರುದ್ರ ವೀರ ಭದ್ರ…

IMG_20160416_132313

ಹಂಚಿನ ಮನಿ ಕುಟುಂಬ

IMG_20160416_104826

ಸೊಸೆ ಜೊತೆ selfie

 

IMG_20160416_124840

IMG_20160416_095838 IMG_20160416_131106
 
 
ಅದಲ್ಲದೆ ಬಸವಣ್ಣನ ಹಿಂದೆ ಒಂದು ಬಾವಿ ಇತ್ತಂತೆ. ಒಂದು ಬಾರಿ ಬಸವಣ್ಣನಿಗೆ ಪ್ರದಕ್ಷಿಣೆ ಹಾಕಲು ಬಂದ ತುಂಬು ಗರ್ಬಿಣಿ ಆಯ ತಪ್ಪಿ ಆ ಬಾವಿಗೆ ಬಿದ್ದಳಂತೆ. ಅಂದೇ ಆ ಬಾವಿ ಮುಚ್ಚಿ ಕಲ್ಲು ಚಪ್ಪಡಿಗಳನ್ನು ಹಾಕಿದ್ದಾರೆ. ಇಲ್ಲಿ ಇನ್ನೊಂದು ವಿಶಿಷ್ಟ ನಂಬಿಕೆ ಇದೆ. ಇಲ್ಲಿರುವ ಕಲ್ಲು ಗುಂಡನ್ನು ಎದೆ ಮಟ್ಟಕ್ಕೆ ಎತ್ತಲು ಸಾಧ್ಯವಾದರೆ ನಾವು ಅಂದುಕೊಂಡ ಕೆಲಸ ಆಗುತ್ತೆ ಅನ್ನೋ ನಂಬಿಕೆ..
ಆ ಚಿತ್ರಗಳನ್ನೂ ನೋಡಿ –
anna-tangi
kallu-gundu
shilpa kale veerabhadreshwara

‍ಲೇಖಕರು Avadhi

April 19, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: