ವಿನು ಬಳಂಜ
ಕೋಟ್ಯಾಂತರ ಜನ ಗಂಡಸರ ಮಧ್ಯೆ ಕೆಲವೊಬ್ಬರು ಕಾಮುಕಗಂಡಸರಿಂದಾಗಿ ತಲೆತಗ್ಗಿಸುತ್ತ ಕೆಲವು ಸಾಲುಗಳನ್ನು ಬರೆಯುತ್ತಿದ್ದೇನೆ.
ಪ್ರಶ್ನೆಯೊಂದಿಗೆ ಆರಂಬಿಸುತ್ತೇನೆ ನಮ್ಮ ಹೆಣ್ಮಕ್ಕಳ ಮಾನ ಕಾಪಾಡುವ ಸಲುವಾಗಿ ಒಂದು ಹೋರಾಟದ ಅಗತ್ಯ ಇದೆಯ? ನಾಚಿಗೇಡು.
ಅದಕ್ಕೆ ಗಂಡಸಾಗಿ ತಲೆ ತಗ್ಗಿಸಿಕೊಂಡೇ ಬರೆಯುತ್ತಿದ್ದೇನೆ….ಗಂಡಸರನ್ನು ಕೇವಲವಾಗಿ ಕಾಣುವಂತೆ ಮಾಡುತ್ತಿರುವ ಎಲ್ಲಕಾಮುಕ ಗಂಡಸರಿಗೂ ಧಿಕ್ಕಾರ.
ರೇಪ್ ಅನ್ನೋದು ಇವತ್ತು ಶರಾಬು ಕುಡಿದಂತೆ ಸಿಗರೇಟು ಸೇದಿದಂತೆ ಅನ್ನುವಂತಾದರೆ ಎಲ್ಲರೂ ತುರ್ತಾಗಿ ಯೋಚಿಸೋದು ಒಳಿತು.ಹೆಣ್ಣುಮಕ್ಕಳಿಲ್ಲದ ಮನೆಗಳೇ ಇಲ್ಲ.ಇಂತ ಸುದ್ದಿ ಬಂದ ಕೂಡಲೇ ನಮ್ಮವರನ್ನು ನೆನೆಸಿಕೊಳ್ಳೋಣ ಕಣ್ಣು ಮಂಜಾಗುತ್ತೆ ಪಕ್ಕದ ಮನೆ ಹೆಣ್ಮಗಳು ಪುಟ್ಟ್ಮಕ್ಕಳು ನಮ್ಮನೆಯವರೇ ಆಗುತ್ತಾರೆ.ಆಗಲೂ ಮತ್ತದೇ ಕೆಲವು ಕೆಟ್ಟ ಅಪ್ಪಂದಿರು ಎದುರು ಬರುತ್ತಾರಲ್ಲ…ದೇವರೆ ನಿನ್ನ ಸೃಷ್ಟಿಯಲ್ಲಿ ಅಂತಾ ಅಪ್ಪಂದಿರ ಜನ್ಮ ಆಗದೇ ಇರಲಿ.
ಬೆಂಗಳೂರು ಕಸದಿಂದ ಅಮೆರಿಕಾದ ಪತ್ರಿಕೆಗಳಲ್ಲಿ ಹರಾಜಾಯಿತು.ಕೆಲವೇ ನೂರು ಮಾನಗೇಡಿಗಳಿಂದ ಇಡೀ ಭಾರತ ಜಗತ್ತಲ್ಲೆ ಹರಾಜಾಗ್ತಾ ಇದೆ.ಅಂತಾ ನೂರು ಜನರನ್ನು ಸದೆಬಡಿಯಲು ಒತ್ತಾಯಿಸಿ ಹೋರಾಟ ನಡೆಯುತ್ತೆ ಆ ಹೋರಾಟವನ್ನು ಶಾಂತಿಯುತವಾಗಿ ನಡೆಸಿ ಅಂತ ದಾರಿ ತೋರಿಸೋ ನಮ್ಮ ಆಳುವವರಿದ್ದಾರೆ.ಪ್ರಜಾಪ್ರಭುತ್ವದಲ್ಲಿ ಮಾನಕ್ಕಾಗಿ ಹೋರಾಟಗಳು?
ಸೆಕ್ಸ್ ಅನ್ನೋದು ಹಿಂದೆ ಅದರದ್ದೆ ಆದ ಪಾವಿತ್ರತೆಯನ್ನು ಕಾಯ್ದುಕೊಂಡಿತ್ತು ಅಂತ ಹೇಳಬಹುದು.ಇವತ್ತು ಅದು ಯಥೇಚ್ಚವಾಗಿ ಮಾರಾಟ ಆಗುತ್ತಿರುವ ಸರಕು.ಇವುಗಳ ಬಗ್ಗೆ ಹದಿಹರೆಯದಲ್ಲು ಉತ್ತೇಜಿಸುವ ಕಾರ್ಯವನ್ನು ಇಂಟರ್ನೆಟ್ಗಳು ಮಾಡುತ್ತಿವೆ ಅನ್ನುವುದು ಅತಿಶಯದ ಮಾತಲ್ಲ.ನಾವು ಇದರ ಬಗ್ಗೆ ಯೋಚಿಸಬೆಕಾಗಿದೆ.ನಿಯಂತ್ರಣವಿಲ್ಲದ ಮನಸ್ಸನ್ನು ಇನ್ನಷ್ಟು ಕೆಡಿಸಲು ಇದಕ್ಕಿಂತ ಬೇರೆ ಯಾವುದೂ ಬೇಕಿಲ್ಲ.
ಇವುಗಳ ಹರಡುವಿಕೆಗೆ ಕಾನೂನಿನ ಚೌಕಟ್ಟಿಲ್ಲ.ಈ ಚೌಕಟ್ಟನ್ನು ಮಾಡಬೇಕಾದವರು ಯಾರು ? ಜನ,ಅಥವ ಜನ ನಾಯಕರು?
ಅಪರಾಧಗಳಿಗೆ ನಮ್ಮಲ್ಲಿ ಭಯ ಹುಟ್ಟಿಸುವಂತ ಕಾನೂನು ಇಲ್ಲ.ಇದ್ದರೂ ಶಿಕ್ಷ್ಯೆ ಆಗೋದು ಕೇವಲ ಕೆಲವೇ ಸಂದರ್ಭ ಮಾತ್ರ.ಇದರ ಬಗ್ಗೆ ನಮ್ಮ ನಾಯಕರೂ ಹೆಚ್ಚಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ ಅವರಲ್ಲೂ ತುಂಬಾ ಜನ ಮಾನದ ವಿಚಾರದಲ್ಲಿ ಅಭಿಮಾನ ಇಲ್ಲದ ಮಹಶೂರರೇ ಇದ್ದಾರೆ.ನಮ್ಮ ದೇಶದಲ್ಲಿ ಹೋರಾಟ ಮಣ್ಣುಮುಕ್ಕಲು ಇಷ್ಟು ಸಾಕಲ್ಲ.
ಹೆಂಗಸರೇ ಈಗ ನಿಮಗೊಂದು ಪ್ರಶ್ನೆ.. ನೀವು ಯಾಕೆ ಚರಿತ್ರಹೀನ ನಾಯಕರವಿರುದ್ಧ ಹಕ್ಕು ಚಲಾಯಿಸಬಾರದು? ಮನೆಯಿಂದ ಮನೆಗೆ ಕಿವಿಯಿಂದ ಕಿವಿಗೆ ನಿಮ್ಮ ಹೋರಾಟ ಹರಡಲಿ ಇದುಮಾನದ ಪ್ರಶ್ನೆ ಆದ್ರಿಂದ ಬೀದಿಗಿಳಿಯೋದು ಕಷ್ಟಾನೆ ರಾಜಕೀಯ ಪಾರ್ಟಿಗಳ ಬ್ಯಾನರ್ಗಳು ಅಲ್ಲಿ ಹಾರಾಡಿ ಕಳೆದುಕೊಂಡ ಮಾನದಲ್ಲು ಓಟು ಹುಡುಕುತ್ತವೆ ಅಲ್ಲವೆ?.ಇವರಿಗೆ ಗಟ್ಟಿ ಕಾನೂನು ಬೇಕಿಲ್ಲ ಅವಕಾಶವಾದಿ ಕಾನೂನು ಬೇಕು ಆಗ ಅಳುವವರೂ ಇರುತ್ತಾರೆ ಅಳಿಸುವವರೂ ಇರುತ್ತಾರೆ ಸಮಾನ್ಯರ ಹೋರಾಟದಲ್ಲಿ ನೇತಾರರಾಗಿ ಇವರೂ ಬರುತ್ತಾರೆ.ಮತ್ತದೇ ಲಾಟಿ ಚಾರ್ಜ್ ಮತ್ತದೇ ಅಶ್ರುವಾಯು ಸಿಡಿತ ಮತ್ತದೇ ಜಲಪಿರಂಗಿ …..ಮತ್ತೆ ಮತ್ತೆ ನೋವುಗಳು,ಇವುಗಳು ಯಾವುದು ನೊಂದವರಿಗೆ ಸಾಂತ್ವನ ಅಲ್ಲ…ನೊಂದವರ ನೋವು ಹೇಳಲಾಗದ ಸಾವು.
ಡೆಲ್ಲಿಯ ಹುಡುಗಿಯೇ ನಿನ್ನ ನೋವನ್ನು ಸಾಯದ ಸಾವೆಂದೇ ಹೇಳುತ್ತೇನೆ ನಿನ್ನ ಆ ಸಾಯದ ನೋವು ಅದೆಷ್ಟೋ ನಿದ್ದೆಯ ಮನಸ್ಸುಗಳನ್ನು ಎಚ್ಚರಮಾಡಿತಲ್ಲ ನಿನ್ನಂತಹ ಎಲ್ಲರು ಮತ್ತೆ ನಗುವಂತಾಗಲಿ.ಬೇರೇನು ಹೇಳಲಿ.
ಎಲ್ಲವನ್ನೂ ದೇವರೇ ನೋಡಿಕೊಳ್ಲುವುದಿಲ್ಲ ಆಳುವ ನಾಯಕರೇ ನಿಮ್ಮ ಬಾಲ ಡೊಂಕಾಗದಿರಲಿ.ಒಂದು ಹುಡುಗಿಯ ರೇಪ್ ಆದರೆ ಒಬ್ಬಳ ರೇಪ್ ಅಲ್ಲ ಇಡೀ ದೇಶದ ರೇಪ್.
ಕೊನೆಗೆ ಕಾಡಿದ್ದು ಕೂಡುಕುಟುಂಬದ ಕೊರತೆ.








ಖಂಡಿತ, ಕೆಲವೇ ಕೆಲವು ಕಾಮಾಂಧರಿಂದ ಉಳಿದೆಲ್ಲ ಗಂಡಸರು ತಲೆ ತಗ್ಗಿಸುವಂತಾಗಿದೆ. ಹೆಣ್ಣುಮಕ್ಕಳು ಈ ಕಾರಣಕ್ಕಾಗಿ ಎಲ್ಲರನ್ನೂ ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ.
Bareee novu novu mansina tuuumbaaa
ಮತ ಚಲಾಯಿಸದಿರುವುದು ಒಂದು ತಪ್ಪೆಂದು ಗೊತ್ತಿದ್ದರೂ ನಾನು ಬಹುತೇಕ ಚುನಾವಣೆಗಳಲ್ಲಿ ಮತಹಾಕಹೋಗಿಲ್ಲ.ಒಂದು ರಜಾ ಸಿಗುತ್ತೆ ಅಷ್ಟೇ. ಆಯ್ಕೆಗಳೆ ಇಲ್ಲದೆ ಯಾರಿಗೆ ಮತ ಹಾಕುವುದು? ಎಲ್ಲರು ಭ್ರಷ್ಟರೇ, ಕಾಮುಕರೇ-ಒಂದಲ್ಲ ಒಂದು ದೃಷ್ಟಿಯಲ್ಲಿ. ಬೇರೆಲ್ಲದಕ್ಕೆ ಶಿಕ್ಷೆ ಇದೆ. ಆದರೆ ರೇಪ್ ಕೇಸ್ ಗಳಲ್ಲಿ ಕಾನೂನೇ ದುರ್ಬಲವಾಗಿರುವುದು, ಕಾನೂನುಪಾಲಕರ ಅಸಹಕಾರದ್ದೇ ದುರಂತ.ತಲೆತಗ್ಗಿಸುವವರು ಇದ್ದಾರಲ್ಲ, ಅಷ್ಟು ಸಾಕು ಹೋರಾಟ ಮುಂದುವರಿಸಲು.
ಕೊನೆಯ ಮೂರು ವಾಕ್ಯಗಳು ಅರ್ಥಪೂರ್ಣ.
ಆಧುನಿಕತೆಯ ವೇಗದ ಭರಾಟೆಯಲ್ಲಿ ಕೂಡುಕುಟುಂಬಗಳ ಸೊಗಡು ನಾಶವಾಗಿದ್ದು ತುಂಬ ನೋವೆನಿಸುತ್ತದೆ.
“ಕೊನೆಗೆ ಕಾಡಿದ್ದು ಕೂಡುಕುಟುಂಬದ ಕೊರತೆ.” – ಎಂಥ ಮಾತು ಸರ್…:)