ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೃದಯಶಿವ ಅಲಿಯಾಸ್ ಕೆ.ಎಂ.ಶಿವಣ್ಣ

ನಾನು ಅಪ್ಪಟ ಕನ್ನಡ ಮಾಧ್ಯಮದ ವಿದ್ಯಾರ್ಥಿ. ನನ್ನವ್ವ ನರಸಮ್ಮ (ಅನಕ್ಷರಸ್ಥೆ) ಮತ್ತು ನನ್ನಪ್ಪ ಮಂಚೇಗೌಡ (ಏಳನೇ ತರಗತಿ) ಅಪ್ಪಟ ಕನಕಪುರದ ಕನ್ನಡಿಗರು. ಅವರಿಗೆ ಕನ್ನಡ ಬಿಟ್ಟು ಬೇರಾವ ಭಾಷೆಯೂ ಬರಲ್ಲ.

ನಾನು ಕನ್ನಡದ ಹೊರತಾಗಿ ತಮಿಳು, ಮಲಯಾಳಂ, ಹಿಂದಿ ಭಾಷೆಗಳನ್ನು ಮಾತನಾಡುತ್ತೇನೆ, ಓದುತ್ತೇನೆ, ಬರೆಯುತ್ತೇನೆ. ತುಳು, ತೆಲುಗು, ಇಂಗ್ಲೀಷ್ ಅರ್ಥವಾಗುತ್ತೆ, ಈ ಮೂರು ಭಾಷೆಗಳನ್ನು ಒಂದು ರೇಂಜಿಗೆ ಮಾತನಾಡಲು ಬಲ್ಲೆ.

ನಾನೋದಿದ್ದು ಎಸ್ಸೆಸ್ಸೆಲ್ಸಿ. ಆರ್ಥಿಕ ಸಮಸ್ಯೆಯಿಂದ ನನ್ನ ಶಿಕ್ಷಣವನ್ನು ಮುಂದುವರೆಸಲು ಆಗಲಿಲ್ಲ. ಕರೆಸ್ಪಾಂಡೆನ್ಸ್ ಕೋರ್ಸ್ ಎಂಬ ಅರ್ಥಹೀನ ಮಾರ್ಗದಲ್ಲಿ ಕಟ್ಟಿದ ಬಿಎ ಕಂಪ್ಲೀಟಾಗಿಲ್ಲ, ಕಂಪ್ಲೀಟ್ ಮಾಡುವ ಆಸಕ್ತಿಯೂ ಇಲ್ಲ. ನನ್ನ ಬಳಿ ಡಿಗ್ರಿ ಸರ್ಟಿಫಿಕೇಟುಗಳಿಲ್ಲ ಅನ್ನುವ ಕೊರಗಿಲ್ಲ.

ಹೃದಯಶಿವ ಅಲಿಯಾಸ್ ಕೆ.ಎಂ.ಶಿವಣ್ಣ ಅಲಿಯಾಸ್ ದೊಡ್ಡಮಂಚೇಗೌಡ ಯಾವತ್ತಿಗೂ ಖುಷಿವಂತ.

ಚಿಯರ್ಸ್…

‍ಲೇಖಕರು Admin

8 December, 2016

3 Comments

  1. kvtirumalesh

    ಪ್ರಿಯ ಶಿವಣ್ಣ
    ನಿಮ್ಮ ಪತ್ರ ಓದಿ ಮನಸ್ಸು ಆರ್ದ್ರವಾಯಿತು. ನೀವು ಮನಸ್ಸು ಕಹಿಮಾಡಿಕೊಳ್ಳದೆ ಖುಷಿಯಾಗಿಯೆ ಇದ್ಫೀರಿ ಎನ್ನುವುದು ತಿಳಿದು ಸಂತೋಷವೂ ಆಯಿತು

    ನಿಮಗೋಸ್ಕರ ನಾನಾಗಲಿ ನನ್ನಂಥವರಾಗಲಿ ಏನಾದರೂ ಸಹಾಯ ಮಾಡಬಹುದೇ? ನನ್ನ ಸಲಹೆಯೆಂದರೆ, ನಿಮ್ಮ ಬಿ.ಎ. (ಕರೆಸ್ಪಾಂಡೆನ್ಸ್) ಪ್ರಯತ್ನ ಕೈಬಿಡಬೇಡಿ. ಯಾವುದೇ ಕೋರ್ಸಿನಿಂದ ನಮಗೇನು ದಕ್ಕುತ್ತದೆ ಎನ್ನುವುದು ಸ್ವಲ್ಪ ಮಟ್ಟಿಗೆ ನಮ್ಮನ್ನೂ ಹೊಂದಿಕೊಂಡಿದೆ. ದೇಶದ ಕರೆಸ್ಪಾಂಡೆನ್ಸ್ ಕೋರ್ಸುಗಳು ಸರಿಯಿಲ್ಲವೆನ್ನುವುದನ್ನು ನಾನು ಊಹಿಸಬಲ್ಲೆ. ಬದಲು ನೀವು ನೇರವಾಗಿ ಕಾಲೇಜು ಸೇರಬಹುದು, ಬೇಕಿದ್ದರೆ. ನಾನು ನಿಮ್ಮ ಬೆಂಬಲಕ್ಕಿರುವೆ. ‘ಅವಧಿ’ಯ ಸಂಪಾದಕರಲ್ಲಿ ನನ್ನ ಈ-ಮೇಲ್ ವಿಳಾಸ ಸಿಗಬಹುದು. ಓದುವುದಕ್ಕೆ ವಯಸ್ಸು ಎಂದೂ ಅಡ್ಡಬರುವುದಿಲ್ಲ. ಶುಭಾಶಯಗಳು!
    ಕೆ.ವಿ.ತಿರುಮಲೇಶ್

  2. Anonymous

    ನಮ್ಮಂಥ ಖುಶಿವಂತರ ದೊಡ್ಡ ಗುಂಪೇ ಇದೇ ಗುರುವೇ, ಹಲವು ಭಾಶೆ ಕಲಿಯೋದು ಸಣ್ನ ಸಂಗತಿ ಅಲ್ಲಾ , ನಾಲ್ಕು ಭಾಶೆ ಮಾತಾಡೋದು ಅಂದ್ರೆ ನಾಲ್ಕು ಡಿಗ್ರಿ ಗಿಂಥ ಮಿಗಿಲು ಶಿವಾ,,,,,

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading