ಹೀಗೆರಡು ಕವನಗಳು – ಸಿ ವಿ ಶೇಷಾದ್ರಿಹೊಳವನಹಳ್ಳಿ
ದೂರವಾದಾಗ ಮಾತ್ರ
ನಿಮ್ಮ ಗಾಳಿಪಟ
ನಿಮ್ಮಿಂದ ದೂರವಾದಾಗ ಮಾತ್ರ
ಅದರ ನಕ್ಷತ್ರಗಳು
ನೆನಪಾಗುತ್ತವೆ.
ಬಿಡಬೇಡಿ ದಾರ.
ಅದರಲ್ಲಿದೆ ನಿಮ್ಮ ಪೂರ್ವಜರ ಬಟ್ಟೆ.
ನಿಮ್ಮ ಬಿಂದಿಗೆ ನೀರು
ಚೆಲ್ಲಿ ಹೋದಾಗ ಮಾತ್ರ
ಅದರ ಫಲ ಪುಷ್ಪಗಳು ಅರಿವಾಗುತ್ತವೆ.
ಬಿಗಿಯಾಗಿ ಹಿಡಿಯಿರಿ ಬಿಂದಿಗೆ
ಅದರಲ್ಲಿದೆ ನಿನ್ನೆಯ ಬೆವರು.
ನಿಮ್ಮ ಪುಸ್ತಕ ಕಳೆದುಹೋದಾಗ ಮಾತ್ರ
ಒಂದೊಂದೆ ಹಾಡುಗಳು ಕಾಡುತ್ತವೆ.
ಅದರಲ್ಲಿರುವುದು ಜೀವಂತ ಭಾಷೆ ಮತ್ತು ಸಾಯದ ಕವಿ.
ಮಹಾತ್ಮರಿಲ್ಲದಆಶ್ರಮದಲ್ಲಿ
ಮಹಾತ್ಮರಿಲ್ಲದಆಶ್ರಮದಲ್ಲಿ
ಸತ್ಯದ ಗಿಡಗಳ ತುಂಬ
ಸುಳ್ಳಿನ ಸುವಾಸನೆಯ ಹೂಗಳು.
ತೆಂಗಿನ ಮರಗಳಿಂದ ತಯಾರಿಸಲಾಗುತ್ತಿದೆ ಹೆಂಡ.
ಗೋಶಾಲೆಯಾಗಿದೆ ಕಸಾಯಿಖಾನೆ.
ಪ್ರಾರ್ಥನೆ ಮಾಡಿದಕಡೆ
ಉಪದೇಶ ನೀಡಿದಕಡೆ
ಹುಟ್ಟುತ್ತಿವೆ ಕುಚರ್ಚೆಗಳು.
ಯಾಗ ಮಾಡಿದಜಾಗ ,
ಈಗ ಟಾಕೀಸು.
ಧ್ಯಾನ ಮಾಡಿದಕಡೆ
ಆಡಲಾಗಿದೆ ಕ್ಲಬ್ಡ್ಯಾನ್ಸು.
ಮಹಾತ್ಮರು ಕಟ್ಟುತ್ತಿದ್ದ ಗಡಿಯಾರದಲ್ಲೀಗ
ಸಂಖ್ಯೆಗಳಿಲ್ಲ ಕೇವಲ ಮುಳ್ಳುಗಳು.
ಮಹಾತ್ಮರಿಲ್ಲದ ಆಶ್ರಮದ ಗೋಡೆಗಳಿಂದ
ಜಿನುಗುತ್ತಿದೆ ರಕ್ತ
ಮಹಾತ್ಮರ ಬಾವ ಚಿತ್ರಕ್ಕೆ
ಅದೇತಿಲಕ.
ಮಹಾತ್ಮರು ಇಲ್ಲದವರಿಗೆಂದು
ಚಾದರ ನೇದರು, ಹೋದರು.
ಗೆದ್ದವರಿಗೆ, ಇದ್ದವರಿಗೆಅದರಲ್ಲಿ
ಸನ್ಮಾನ ಮಾಡಲಾಯಿತು.
ಮಹಾತ್ಮರು ಕಲ್ಲು ರಾಶಿಗಳಲ್ಲಿ
ಬೇಕಾದ್ದನ್ನು ಆರಿಸಿಕೊಂಡರು.
ಒಂದರ ಪಕ್ಕ ಒಂದು ಅಥವಾ
ಒಂದರ ಮೇಲೊಂದು ಇಟ್ಟಿದ್ದಿದ್ದರೆ
ಪಾಯವಾಗುತ್ತಿತ್ತು.
ದಿಕ್ಕಿಗೊಂದೊಂದು ಇಟ್ಟರು.
ಒಲೆಯಾಯ್ತು.
ಕೆಲವನ್ನು ಕೆತ್ತಿದರು.
ಸತ್ಯ ಮಾತ್ರ ಉಳಿದು ಮೂಲೆ ಸೇರಿತು.
ಉಳಿದ ಚೂರುಗಳು ದಾರಿಯಲ್ಲಿ ಬಿದ್ದು
ಕಾಲುಕಾಲಿಗೆ ಚುಚ್ಚುತ್ತಿವೆ.
ಪ್ರಾಣಿಗಳಲ್ಲಿ ಅವರು
ಕೇವಲ ಮೂರು ಕೋತಿಗಳನ್ನು ಆರಿಸಿದರು.
ಅವಕ್ಕೆ ಮಾತ್ರ ಕಲಿಸುವಾಗ
ಆಶ್ರಮ ಮರೆತರು.
ಉಳಿದವೆಲ್ಲ ಮರ ಹತ್ತಿದವು.
ಚಿಗುರು, ಪೀಚು, ಹೂ, ಹಣ್ಣುಗಳನೆಲ್ಲ ಕಿತ್ತೆಸೆದವು.
ಅವರು ಹೋದರುದಾರಿಗಕ್ಕ ಪಕ್ಕ ಹಣ್ಣಿನ ಮರಗಳ ನೆಟ್ಟು ,
ಯಾತ್ರಿಕರಿಗೆ ಪ್ರತಿನಿತ್ಯಕಲ್ಲೇಟು.
ಅವರು ಹುತ್ತವಾದರು. ಊರೊಳಗೆಲ್ಲ ಹಾವುಗಳು ಹರಿದಾಡುತ್ತಿವೆ.
ವ್ಯರ್ಥ ಬಿದಿರಾಯಿತು ಅವರ ಕೈಯಲ್ಲಿ ಬೀಸಣಿಗೆ ಮತ್ತು ಕೊಳಲು .
ನಂತರ ಹುಡುಕಲಾಯಿತು ಒಂದೊಂದೇ ಇಜ್ಜಿಲು.
ಅವರು ಹಸು ಸಾಕಿದರು ಹಾಲು ಕರೆಯಲು.
ಆದದ್ದುಕಟುಕರ ಪಾಲು.
ಸಂತೋಷದಿಂದ ಆಡಿಕೊಳ್ಳಲು ಅವರು ಕೊಟ್ಟರು ಗೋಲಿ.
ಗದರಿದರೂ ನಿಲ್ಲದು ಗೋಲಿಯಾಟ ಗಲ್ಲಿಗಲ್ಲಿಯಲಿ.
ಅಕ್ಷರಗಳನ್ನು ಕಾಪಾಡಲು ತಯಾರಿಸಿದರು
ಕಾಗದ ಮತ್ತು ಕಪಾಟು.
ಚೆನ್ನಾಗಿಕುದುರಿತು
ಪುಸ್ತಕ ವ್ಯಾಪಾರಿ ವಹಿವಾಟು.
ಅವರ ಹೂವಿನ ತೋಟಕ್ಕೆ
ಬೇಲಿ ಹಾಕಿದರು ಹೂವಾಡಿಗರು.
ಹೂವು ಬಿಡಿಸಲು ಹೆಣೆದ ಬುಟ್ಟಿಯಲಿ
ಹಾವು ಬಿಟ್ಟರು ಹಾವಾಡಿಗರು.
]]>







vaastavateyannu bimbisuttiruva arhtapoorna kavite
ಅವರ ಹೂವಿನ ತೋಟಕ್ಕೆ
ಬೇಲಿ ಹಾಕಿದರು ಹೂವಾಡಿಗರು.
ಹೂವು ಬಿಡಿಸಲು ಹೆಣೆದ ಬುಟ್ಟಿಯಲಿ
ಹಾವು ಬಿಟ್ಟರು ಹಾವಾಡಿಗರು………tumbaa arthapurnavaada haagu manatattuva,manamuttuva kavite
wary fine your kavana……….,
nimma abpiprayakke dhanyavadagalu..