ರಾಜೇಶ್ವರಿ ಲಕ್ಕಣ್ಣವರ
ಪಾರ್ಲರಿನ ನಡುಮಧ್ಯ ವಯಸ್ಸಿನ
ಆಂಟಿಯೊಬ್ಬಳು
ಸಣ್ಣಗೆ ದಾರವನ್ನು ಅಡಿಗಡಿಗೆ
ಸರಿದೂಗಿಸಿಕೊಂಡು
ಹುಬ್ಬಿನೊಂದಿಗೆ ಸರಸವಾಡುವಾಗಲೆಲ್ಲ
ಪಕ್ಕದ ಹುಡುಗಿಯೊಬ್ಬಳನ್ನು
ಅರೆ ತೆರೆದ ಕಂಗಳಿಂದಲೇ
ದಿಟ್ಟಿಸುತ್ತೆನೆ
ಚಿತ್ತವೆಲ್ಲ ಅದರತ್ತ ಕಳೆದು ಹೋದ
ಹಾಗೆ ನಿಧಾನವಾಗಿಯೆ
ಅವಳು ಒಂದು ಕಣ್ಣನ್ನು
ಹುಬ್ಬಿನಡಿಯಲ್ಲಿ
ಇನ್ನೊಂದು ಕಣ್ಙನ್ನು ದಾರದತ್ತಲೆ
ಗಮನಿಸುವಾಗ
ಅವಳ ಮುಖ ಬೇರೊಂದು
ಕಥೆಯನ್ನು ಹೇಳುತ್ತದೆ
ಸುಮ್ಮನೆ ಆ ದಟ್ಟ ಕಂಗಳಲೊಮ್ಮೆ
ಇಣುಕುವಾಗ
ಇರಬಹುದೆನೊ ಮನೆಯಲ್ಲಿ ಕಷ್ಟ
ಇವಳೇ ಹಿರಿಯಕ್ಕಳಾಗಿರಬಹುದು
ಬೆನ್ನಿಗೆ ಬಿದ್ದ ತಮ್ಮ,ತಂಗಿಯರು
ಖಾಯಿಲೆಯ ಅಮ್ಮ
ದುಡಿಯಲಾಗದ ಅಪ್ಪ
ಕಥೆಗಳು ಬಹಳಷ್ಟಿವೆ ಹೇಳಲಾಗದ್ದು
ತನ್ನ ಕೆಲಸ ಮುಗಿತು ಎನ್ನುವಂತೆ
ಹುಬ್ಬು ನೀಟಾಗಿ ತನ್ನ ರೂಪವನ್ನು
ಛಾಯೆಯಲ್ಲಿ ತೋರುತ್ತದೆ
ಹುಡುಗಿಯತ್ತ ದೃಷ್ಟಿ ಹಾಯಿಸಿದಾಗಲೆಲ್ಲ
ನಾವೇನು ಮಾಡಲಾಗದೆ
ಸುಮ್ಮನೆ ಸಣ್ಣ ಪರ್ಸಿನಿಂದ
ದುಡ್ಡನ್ನು ಅವಳ ಕೈಗಿಟ್ಟಾಗ
ಮುಖವೊಂದು ಅರಳಬಹುದೇನೊ ಅಷ್ಟೇ..!






Good one Rajeshwari
ಥ್ಯಾಂಕ್ಯೂ ಸರ್
lovely dear
ಥ್ಯಾಂಕ್ಯೂ ಅಕ್ಕ
Nice rajeshwari…keep it up…
ಥ್ಯಾಂಕ್ಯೂ
ಹುಬ್ಬದ ಕೆಳಗಣ ಕಣ್ಣಲಿ ಇಣುಕಿ ಕಾಣಲಾರದ ಬವಣೆಗಳನ್ನು ಅನುಭವಿಸುವ ಹಾಗೂ ಅರ್ಥೈಸುವ ಕವಿಯಿತ್ರಿ ಪರದೆಯ ಎದುರಿನ ಇನ್ನೊಂದು ಪರದೆಯನ್ನು ಎಳೆಯಲು ಪ್ರಯತ್ನಿಸುತ್ತಾಳೆ.
ಕಣ್ಣಿಗೆ ಕಂಡಂತೆ ಇರಲಾರದ ವಾಸ್ತವಗಳನ್ನು ಕಲ್ಪಿಸುವ ಕೆಲಸಕ್ಕೆ ಕೈ ಹಾಕುತ್ತಾಳೆ. ಈ ವಿಭಿನ್ನ ಕುತೂಹಲ ಕವನವನ್ನು ಓದುಗನ ಮನಕಲುಕಲು ಪ್ರೇರೇಪಿಸುತ್ತದೆ.
ಅನೇಕ ಧನ್ಯವಾದಗಳು ಸರ್