ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹುಡುಕಿ ಹುಡುಕಿ ನಿರಾಶೆಯ ಛಾಯೆ

ಸ್ಫೂರ್ತಿ

**

ಈಗೀಗ ನಾನು ಹುಡುಕುವುದನ್ನು ಬಿಟ್ಟಿದ್ದೇನೆ
ಬಿಡು ಇದು ಕಳೆದು ಹೋದರೆ ಇನ್ನೊಂದೆಂಬ
ವಾಸ್ತವದ ಧ್ವನಿ ಒಳಗೆ ಆಡುತ್ತಿದೆ.

ಮೊನ್ನೆ ಡಿ ಮಾರ್ಟಲ್ಲಿ ತಂದ
ಒಂದು ಜೊತೆ ಕಾಲ್ಚೀಲ
ಚೇರ್ ಮೇಲೆ ಒಂಟಿಯಾಗಿದೆ
ಇನ್ನೊಂದೆಲ್ಲಿ?
ಎಂಬ ಹುಡುಕುವ ಗೋಜು ನನಗಿಲ್ಲ
ಹುಡುಕಬೇಕಾದ ಉಸಾಬರಿ ಯಾಕೆ,
ದುಡ್ಡಿದೆ ಮತ್ತೊಂದು ಕೊಂಡುಕೊಳ್ಳುವೆ
ಎಂಬ ಅಹಂ ಅಂತೂ ಅಲ್ಲವೇ ಅಲ್ಲ
ಹುಡುಕಿದರೂ ಸಿಗುವುದಿಲ್ಲ ಎಂಬ ಕಾನ್ಫಿಡೆನ್ಸ್
ನನಗೆ ದಕ್ಕುವುದಾದರೆ ಅದು ಯಾಕೆ
ಕಳೆದುಹೋಗುತ್ತಿತ್ತು ಎಂಬ ಕ್ರಾಸ್ ಕ್ವೆಶ್ಚನ್?
ಬಿಡು ಅದರ ಆಯಸ್ಸು ಅಷ್ಟೇ ಎಂಬ ಕಾಮ್ನೆಸ್
ಹುಡುಕಿ ಹುಡುಕಿ ನಿರಾಶೆಯ ಛಾಯೆ
ಆವರಿಸುವುದಿಲ್ಲ ಎಂಬ ಖುಷಿ.

ಬದುಕಿನಲ್ಲಿಯೂ ಈಗ ಇದೇ ಪ್ರಿನ್ಸಿಪಲ್
ಕಳೆದುಹೋದವನ್ನು ಸಹ ಹುಡುಕುವ
ಪ್ರಯತ್ನ ಬೇಡ ಎಂದು ಡಿಸೈಡ್ ಮಾಡಿದೆ
ಕಳೆದು ಹೋದವರ ಬಗ್ಗೆ ಚಿಂತೆ ಏತಕ್ಕೆ ?
ಕಳೆದು ಹೋಗುವವರು ಹೋಗಲಿ
ಇದ್ದಾದರು ಏನು ಸುಖ ಕೊಡುವರು?
ಹುಡುಕಿ ತಂದ ಮೇಲೆ ನಿಯತ್ತಾಗೇನು ಇರುವರೆ?
ಅವರು ಕಳೆದು ಹೋದರೆ ಏನಂತೆ?
ರಹದಾರಿಯಲ್ಲಿ ಯಾವುದೋ ಅಗಮ್ಯ
ಚೇತನ ಸಿಗಬಹುದೇನೋ!
ಎಂಬ ಆಲೋಚನೆ
ಸಿಗದಿದ್ದರೇನಂತೆ ಬದುಕಬಹುದಲ್ಲವೇ?
ಎಂಬ ಆತ್ಮವಿಶ್ವಾಸ
ಹುಡುಕಿ ಹುಡುಕಿ ರೋಸಿಹೋಗಿ
ಖಿನ್ನತೆಯ ವ್ಯಸನಿ ಯಾಕಾಗಬೇಕು?
ಎಂಬ ಚಿಂತನೆ

ಬಂದವರು ಬರಲಿ, ಇದ್ದವರು ಇರಲಿ
ಆದರೆ
ಹುಡುಕುವುದನ್ನು ಬಿಟ್ಟಿದ್ದೇನೆ.

‍ಲೇಖಕರು avadhi

8 May, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading