ಹುಡುಕಾಟ ಜಾರಿಯಲ್ಲಿದೆ..

ಮಮತಾ ಅರಸೀಕೆರೆ

…. ಮತ್ತೆ ಮತ್ತೆ ಕೆದಕಿ
ವಿಶ್ವಸ್ಥ ಚಹರೆಯನ್ನು ಹುಡುಕುತ್ತೇನೆ


ಅರಿವು

ಸರಸರನೆತೆರೆಯುತ್ತೇನೆ
ಪ್ರತೀ ಪುಟದಲ್ಲೂಅರಸುತ್ತೇನೆ
ಅಲ್ಲಿರಬಹುದು..
ಇಲ್ಲವೇ !!?
ಇಲ್ಲಂತೂಇದ್ದೇಇರಬಹುದು
ಘಟ್ಟಿಗಿತ್ತಿಯರ ಮಾದರಿಗಳು
ಬಂಡೆಯಂತಹ ಹೆಣ್ಣುಗಳು
ಎಲ್ಲೆಲ್ಲಿ..?
ಪುರಾಣದಲ್ಲಿ
ಉಪನಿಷತ್ತುಗಳ ಕಣಜದಲ್ಲಿ
ಭಾರತದಲ್ಲಿ, ರಾಮಾಯಣಗಳ
ಹಂದರದಲ್ಲಿ
ಮಹಾಕಾವ್ಯಗಳ ರಾಶಿಯಲ್ಲಿ
ಬೈಬಲ್ಲು ಕುರಾನುಗಳ ಅಂತರಂಗದಲ್ಲಿ

ಎಲ್ಲೆಲ್ಲಿದ್ದಾಳೆ ಆಕೆ
ಎಲ್ಲೆ ಮೀರಿದಳೆ?
ಚಲ್ಲಾಪಿಲ್ಲಿಯಾದಳೆ?
ಮತ್ತೆ… ಮತ್ತೆ…
ಧೀರ ಮಹಾಪುರುಷರು
ಅಣಿ ಮಾಡಿಟ್ಟ ಗಲ್ಲಿಗೇರಿದಳೆ..?

ಸಂಶೋಧನೆ

ಕಂಗಾಲಾಗುತ್ತೇನೆ
ಯಾವ ಪುಟದಲ್ಲೂ ದಿಟ್ಟೆಯರಿಲ್ಲ
ಅಗ್ನಿದಿವ್ಯ ಹೊಕ್ಕದೇ ಹೊರಬಂದವರಿಲ್ಲ
ನರಳಿಕೆ ,ಕದಲಿಕೆ
ಅಂಕ ಅಂಕದಲ್ಲೂ ನೋವಿನ
ದಡಬಡಿಕೆ
ಈ ಪುಟದಲ್ಲಿ ಕೆಚ್ಚಾದಳಾ?
ಆ ಪುಟದಲ್ಲಿ ಮಿಗಿಲಾದಳಾ?
ಕಟ್ಟಕಡೆಯ ಪುಟದಲ್ಲಾದರೂ
ನ್ಯಾಯ ದಕ್ಕಿಸಿಕೊಂಡಳಾ?
ಅಥವಾ
ಗೆಲ್ಲುವಆಯುಧ ಅವನಿಗೊಪ್ಪಿಸಿದಳಾ?

ವಿಲಾಪ

ದ್ರೌಪದಿ ,ಸೀತೆಯರು
ಅಹಲ್ಯೆ ,ಗಾಂಧಾರಿಯರು
ಅಂಬೆ , ಶೂರ್ಪನಖಿಯರು
ಹೆಸರುಯಾವುದಾದರೇನು
ಯಾವಯುಗದಲ್ಲಾದರೂ
ಹೆಣ್ಣೆಂಬ ಕಳಂಕ ತೊಲಗಿತೇನು..!?

ಕಿಚ್ಚಾಗಿ ಹರಡಿದವರ ಅರಸುತ್ತೇನೆ
ಕೆಚ್ಚಾಗಿ ಕಾದಿದವರ ಹುಡುಕುತ್ತೇನೆ
ಇತಿಹಾಸದ ಹೊತ್ತಿಗೆಗಳು
ಹತಾಶೆಗೊಳಿಸಲಾರವು
ನಿರೀಕ್ಷೆಯೆಂದು ಹುಸಿಗೊಳ್ಳಲಾರದು
ಆ ಒಂದು ಸುವರ್ಣ ಪುಟದಲ್ಲಾದರೂ
“ಅಕ್ಕ”ನ ಧೀಃಶಕ್ತಿಕಂಡು ನಿಟ್ಟುಸಿರಾಗುತ್ತೇನೆ
ಆಶಾವಾದಿಯಾಗುತ್ತೇನೆ
ಮತ್ತು ……..!

‍ಲೇಖಕರು Avadhi

September 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಸುಜಾತ ಲಕ್ಷ್ಮೀಪುರ

    ಹೆಣ್ಣಿನ ಅಸ್ಮಿತೆಗಳ ಹುಡುಕಾಟ ಅರಿವಾಗಿ,ಶೋಧಿಸಿಯೂ ದಕ್ಕದೆ ವಿಲಾಪವಾಗಿಬಿಡುವ ಸಾಧ್ಯತೆಯ ಮೀರಿದ ಸಾಂದ್ರ ಅನುಭವ ನೀಡುವ ಕವಿತೆ ಮಮತಾ.
    ಅವಳು ಹೋರಾಡುವ ಆಯುಧವನ್ನೂ ಅವನಿಗೇ ಕೊಟ್ಟುಬಿಟ್ಟಿದ್ದಾಳೆ….ತಡೆದು ನಿಲ್ಲಿಸಿಬಿಡುತ್ತದೆ.

    ಪ್ರತಿಕ್ರಿಯೆ
  2. ಡಾ.ರಾಧಿಕಾ ರಂಜಿನಿ

    ಮಮತಾ ಮೇಡಂ ಕವನಗಳು ತುಂಬಾ ಚೆನ್ನಾಗಿವೆ. ಹುಡುಕಾಟ ಸೂಪರ್ ಮೇಡಂ ನಿಮ್ಮ ಪ್ರಶ್ನೆಗಳು ಸರ್ವಕಾಲಿಕ ಮೇಡಂ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: