ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹುಚ್ಚನೊಬ್ಬ ಆರಾಮಾಗಿ ನಡುರಸ್ತೆಯಲಿ ನಡೆದಂತೆ..

ಮಾಲಾ ಅಕ್ಕಿಶೆಟ್ಟಿ

**

ಅಬ್ಬರದ ನಡೆದಂತೆ

ತಲೆ ಮೇಲೆತ್ತಿ ಇಳಿದಾಗ 

ಬರ್ರನೆಯ ಗಾಳಿಗೆ 

ಎಲೆಯೊಂದು ಹಾರಿ ಹಾರಿ ಬಿದ್ದಾಗ 

ಕೋಪ ಏರಿ, ಶಬ್ದಗಳು ಸಿಟ್ಟಿನಲ್ಲಿ 

ಬೆಂದು ತಣ್ಣಗಾಗಿ 

ಎಷ್ಟೊಂದು ನಿರಂಬಳ!

ಹಣ್ಣಾದೀತೆಂದು ಗಿಡ ನೆಟ್ಟು 

ಗೊಬ್ಬರ ಹಾಕಿ, ನೀರೆದರೂ 

ಈಡೇರುವುದಿಲ್ಲವೆಂಬ ಖಚಿತತೆ 

ಮನಸ್ಸು ಶಾಂತ ಸಾಗರದಷ್ಟೇ 

ಶುದ್ಧ, ಸಮಾಧಾನ 

ವೇಗದ ಉಸಿರಾಟಕ್ಕೆ 

ಗದ್ಗರಿಸುವ ದೇಹಕ್ಕೆ 

ಮನಸ್ಸಿನ ಭಾವಕ್ಕೆ 

ಅಂತರಾತ್ಮಕ್ಕೆ ಮುಕ್ತಿ 

ನಿಂತ ಕಾಯುವಿಕೆ 

ಉತ್ತರಗಳು ತಾವೇ 

ಲಭ್ಯ ನಮ್ಮ ಏಷ್ಟೋ 

ದಿನಗಳ ಪ್ರಶ್ನೆಗಳಿಗೆ 

ಚಿಂತೆಗಳು ಸ್ಥಗಿತ 

ಮಗುವೊಂದು ಹಾಯಾಗಿ 

ಹಾಲ್ಕುಡಿದು ಮಲಗಿದಂತೆ 

ನಿದ್ದೆ ಕೆಡಿಸಿಕೊಂಡು 

ಹಾಜರಾಗಿದ್ದ ಪರೀಕ್ಷೆಗಳು 

ಸಮಾಧಾನವಾಗಿ ಮುಗಿದಂತೆ 

ಹುಚ್ಚನೊಬ್ಬ ಆರಾಮಾಗಿ 

ನಡುರಸ್ತೆಯಲ್ಲಿ ನಡೆದಂತೆ

‍ಲೇಖಕರು Admin MM

29 May, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading