ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೊಂದು simple ಕಥೆ..

ರಾಘವೇಂದ್ರ ಜೋಶಿ

ಎಲ್ಲೋ ಓದಿದ ಕತೆಯಿದು…

ನಾಗರಿಕತೆಯ ಸೋಂಕಿಲ್ಲದ ಒಂದು ಪುಟ್ಟ ಊರು. ಅಲ್ಲೊಂದಿಷ್ಟು ಜನ. ಓದು, ಬರಹ, ಟೀವಿ, ಫೇಸ್ ಬುಕ್ಕು, ಇಂಟರನೆಟ್ಟು- ಯಾವುದೂ ಗೊತ್ತಿಲ್ಲದ ಜನ. ತಮ್ಮ ಪಾಡಿಗೆ ತಾವು ಬೆಳೆ ಬೆಳೆದು, ಬೇಟೆಯಾಡಿ, ಆಗೀಗ ತಮ್ಮ ತಮ್ಮ ಹೆಂಗಳೆಯರೊಂದಿಗೆ ನರ್ತಿಸುತ್ತ ಇರುತ್ತಾರೆ. ಎಲ್ಲಿಂದಲೋ ಬಂದ ಪಾದ್ರಿಯೊಬ್ಬ ಈ ಊರನ್ನು ಪ್ರವೇಶಿಸುತ್ತಾನೆ. ಭಗವಂತನ ಲೀಲೆ ಮತ್ತು ಪಾಪ-ಪುಣ್ಯಗಳ ಬಗ್ಗೆ ಮಾತನಾಡುತ್ತ ಈ ಜನರ ತಲೆ ಕೆಡಿಸುತ್ತಾನೆ. ಪ್ರಾಣಿಹತ್ಯೆ ಪಾಪ ಅಂತೆಲ್ಲ ಹೇಳಿ ನರಕದ ಭಯ ಹುಟ್ಟಿಸುತ್ತಾನೆ. ಜನ ಕಂಗೆಡುತ್ತಾರೆ. ಭಯಭೀತರಾಗಿ ಬಿಲ್ಲು-ಬಾಣ ಕೆಳಗಿಡುವ ಹಂತದಲ್ಲಿದ್ದಾಗ-
ಆದಿವಾಸಿಗಳ ಮುದುಕನೊಬ್ಬ ಪಾದ್ರಿಗೆ ಕೈ ಜೋಡಿಸಿಕೊಂಡು ಪ್ರಶ್ನಿಸುತ್ತಾನೆ:
“ಗೊತ್ತಿಲ್ಲದೇ ತಪ್ಪು ಮಾಡಿದರೆ ಭಗವಂತ ಕ್ಷಮಿಸುತ್ತಾನೆಯೇ..?”
ಹೌದು ಅಂತ ಪಾದ್ರಿ ಹೇಳುತ್ತಾನೆ. ತಕ್ಷಣ ಆ ಮುದುಕ ಕಿರುಚಿ ಹೇಳುತ್ತಾನೆ:
“ಮತ್ಯಾಕೆ ಇದೆಲ್ಲ ಹೇಳಿ ನಮಗೆ ಗೊತ್ತುಪಡಿಸುತ್ತಿದ್ದೀರಿ..”
* ಕುಲಕುಲವೆಂದು ಹೊಡೆದಾಡುವ ಪಾದ್ರಿ, ಮಠಾಧೀಶ, ಸ್ವಾಮೀಜಿ, ಮುಲ್ಲಾಗಳನ್ನೊಮ್ಮೆ ಆ ಕಾಡಿನ ಊರಿಗೆ ಕರೆದುಕೊಂಡು ಹೋಗಬೇಕಿದೆ..
 

‍ಲೇಖಕರು G

22 April, 2015

1 Comment

  1. ವಿಜಯೇಂದ್ರ ಕುಲಕರಣಿ ಕಲಬುರಗಿ

    ಎಂತಹ ಸಂದೇಶ ! ಏನ್ಕಥೆ ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading