ಮಾನವತಾವಾದ ಎಂಬ ಸ್ಥಾವರದ ಬಸವ

ಬಂದೇಸಾಬ ಎಫ್ ಮೇಗೇರಿ


ಇಪ್ಪತ್ತನೆಯ ಶತಮಾನದಲ್ಲಿ ಜಾಗತಿಕ ಸಂಸ್ಥೆಗಳು ಚಿಂತನೆ ಮಾಡಿ ಆಚರಣೆಯಲ್ಲಿ ತರಲಿರುವ ಮಾನವ ಕಲ್ಯಾಣದ ತತ್ವಗಳನ್ನು ಕರುನಾಡಿನಲ್ಲಿ ಎಂಟು ಶತಮಾನಗಳ ಹಿಂದೆಯೇ ಜಗಜ್ಯೋತಿ ಬಸವೇಶ್ವರರು ಅನುಷ್ಟಾನದಲ್ಲಿ ತರಲು ಪ್ರಯತ್ನಿಸಿದುದು ಸೂರ್ಯ ಪ್ರಕಾಶಿಸಿದಷ್ಟು ಸತ್ಯ. ಎಲ್ಲರಿಗೂ ವೈಚಾರಿಕ ಮತ್ತು ಅಭಿವ್ಯಕ್ತಿ ಸ್ವಾತಂತ್ರ ನೀಡಬೇಕು. ದುಡಿಮೆಗೆ ತಕ್ಕಂತೆಯೇ ಫಲ ದೊರಕಬೇಕು. ಮಾನವನು ಪ್ರಾಮಾಣಕವಾದ ಜೀವನ ನಡೆಸಬೇಕೆಂಬ ಆಶಯವನ್ನು ಬಸವೇಶ್ವರರು ಹೊಂದಿದ್ದರು. ‘ದಯೆಯೇ ಧರ್ಮದ ಮೂಲ’ ಎಂದು ಸಾರಿದ ಅವರ ವಿಚಾರ ಮಾನವತಾವಾದಕ್ಕೊಂದು ಅಮೋಘವಾದ ನಿದರ್ಶನವಾಗಿದೆ.
ಅಂದು ಸಮಾಜದಲ್ಲಿ ಬೇರೂರಿದ್ದ ಜಾತಿಭೇದ, ಅಸಮಾನತೆಯನ್ನು ಹೋಗಲಾಡಿಸಲು ಸಂಪ್ರದಾಯಗಳನ್ನು ಕಿತ್ತೆಸೆದರು. ಬದುಕಿನ ಎಲ್ಲಾ ರಂಗಗಳಲ್ಲೂ ಸಮಾನತೆಯನ್ನು ಮೂಡಿಸಲು ಯತ್ನಿಸಿದರು. ಸಮಾಜದಲ್ಲಿ ಮೇಲು- ಕೀಳು ಎಂಬ ಭಾವನೆ, ತಾರತಮ್ಯ ಇರಕೂಡದೆಂದು ಪ್ರತಿಪಾದಿಸಿದರು. ವೃತ್ತಿ ಆಧಾರದ ಮೇಲೆ ಭೇದಭಾವ ಕಲ್ಪಿಸಕೂಡದೆಂದು ಹೇಳಿದರು.
ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನಗಳು ಪಾತಾಳದ ಸ್ಥಿತಿಯಲ್ಲಿದ್ದುದನ್ನು ಕಂಡ ಬಸವಣ್ಣನವರು ಮರು ಮರು ಮರುಗಿದರು. ಸ್ತ್ರೀಯರ ಮೇಲಿದ್ದ ಮೂಢನಂಬಿಕೆ, ತಪ್ಪು ಕಲ್ಪನೆಗಳನ್ನು ಬೇರು ಸಮೇತ ಕಿತ್ತು ಹಾಕಲು ಆಲೋಚಿಸಿದರು. ಪ್ರಾಚೀನ ಕಾಲದಿಂದಲೂ ಸ್ತ್ರೀಯರ ಮೇಲೆ ದಬ್ಬಾಳಿಕೆ, ಶೋಷಣೆ ನಡೆಯುತ್ತಾ ಬಂದಿದ್ದನ್ನು ತೊಡೆದು ಹಾಕಿದ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ. ಶಿವ ಶರಣರು ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ ನೀಡಿ ವೈಚಾರಿಕ, ಬೌದ್ಧಿಕ ಹಾಗೂ ಆಧ್ಯಾತ್ಮಿಕ ವಿಕಾಸಕ್ಕೆ ಕಾರಣೀಭೂತರಾದರು.
ಶಿವ ಶರಣರಾದ ಹರಳಯ್ಯ ಹಾಗೂ ಆತನ ಧರ್ಮಪತ್ನಿ ತಮ್ಮ ತೊಡೆಯ ಚರ್ಮದಿಂದ ಬಸವಣ್ಣನಿಗೆ ಪಾದರಕ್ಷೆಗಳನ್ನು ಮಾಡಿಕೊಂಡು ಬಂದು ಕೈಯಲ್ಲಿ ಕೊಟ್ಟಾಗ, ಬಸವಣ್ಣನವರು ಆ ಪಾದರಕ್ಷೆಗಳನ್ನು ಕಾಲಲ್ಲಿ ಹಾಕಿಕೊಳ್ಳದೇ ತಲೆಯ ಮೇಲೆ ಹೊತ್ತು ಸಂತೋಷದಿಂದ ಕುಣಿದು ಕುಪ್ಪಳಿಸಿದರು. ಈ ಪ್ರಸಂಗ ಜಾಗತಿಕ ಮಾನವ ಚರಿತ್ರೆಯಲ್ಲಿ ಸುವಣರ್ಾಕ್ಷರಗಳಿಂದ ದಾಖಲಿಸಬಹುದು.
ಶ್ರಮ ಜೀವಿಗಳ ಗಳಿಕೆಯನ್ನು ದಕ್ಷಿಣೆ, ಪ್ರಸಾದ, ನೈವೇದ್ಯೆಗಳ ರೂಪದಲ್ಲಿ ಕಸಿದುಕೊಳ್ಳುವ ಪುರೋಹಿತ ವರ್ಗದ ಬದುಕು ಧಾಮರ್ಿಕ ಜೀವನವೆಂದು ಬಗೆಯುವ ಡಾಂಭಿಕತೆಯನ್ನು ತೊಡೆದು ಹಾಕಲು ಕಾಯಕವೇ ಕೈಲಾಸ ಎಂದು ಎಚ್ಚರಿಸಿದರು. ಯಾವುದೇ ಕೆಲಸ ಸಣ್ಣದಿರಲಿ, ದೊಡ್ಡದಿರಲಿ ಮಾಡುವಾಗ ಶ್ರದ್ಧೆಬೇಕು, ನಿಷ್ಠೆಬೇಕು. ಅದರಿಂದ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ತೋರಿಸಿಕೊಟ್ಟಿದ್ದಾರೆ.
ಒಂದು ಬುಡಕಟ್ಟಿನ ಜನ ಅನುಕೂಲಕ್ಕಾಗಿ ಪಶು ಸಂಗೋಪನೆ, ಕುರಿ ಸಾಕಾಣಿಕೆ, ನೇಕಾರಿಕೆ, ಕಮ್ಮಾರಿಕೆ ಮುಂತಾದ ವೃತ್ತಿಗಳನ್ನು ತಮ್ಮ ತಮ್ಮಲ್ಲೆ ಹಂಚಿಕೊಂಡರು. ತಂದೆಯಿಂದ ಮಗನಿಗೆ, ಮಗನಿಂದ ಮೊಮ್ಮಗನಿಗೆ ಹೀಗೆ ಪರಂಪರಾಗತವಾಗಿ, ಮುಂದೆ ಜಾತಿಯಾಗಿ ಪರಿಣಮಿಸಿತು ಎಂದು ಬಸವೇಶ್ವರರು ಪರಿಣಾಮಕಾರಿಯಾಗಿ ಹೇಳಿದರು. ಇದು ಕತರ್ಾರನ ಕಮ್ಮಟ ಇಲ್ಲಿ ಸಾಧಕನು ಉತ್ತಮವಾಗಿ ಹೊರಬಂದರೆ , ಆತನು ಸ್ವರ್ಗದಲ್ಲಿಯೂ ಸ್ವೀಕಾರಕ್ಕೆ ಅರ್ಹನು ಎಂಬ ಭರವಸೆಯನ್ನು ನೀಡಿದರು.
ಜಾತಿ ವ್ಯವಸ್ಥೆ ಭಾರತೀಯ ಸಮಾಜಕ್ಕೆ ಒಂದು ವಾಸಿಯಾಗದ ಖಾಯಿಲೆಯಾಗಿದೆ. ಇದು ರಾಷ್ಟ್ರದಲ್ಲಿ ಹಲವಾರು ಪಂಗಡಗಳನ್ನಾಗಿ ಮಾಡಿದೆ. ಪ್ರತಿಯೊಂದು ಜಾತಿಯೂ ಕೂಡಾ ತಮ್ಮದೇ ಶ್ರೇಷ್ಟ ಎಂದು ತಿಳಿದು ಧಮರ್ಾಂಧರಾಗುತ್ತಿದ್ದಾರೆ. ಇದು ಪ್ರಾಚೀನ ಕಾಲದಿಂದಲೂ ವಿಷರಕ್ತಗತವಾಗಿ ಬಂದಿದೆ. ಹನ್ನೆರಡನೆಯ ಶತಮಾನದಲ್ಲಿ ಜಾತಿ ವ್ಯವಸ್ಥೆಯಿಂದಾಗಿ ಮೇಲು- ಕೆಳವರ್ಗದವರ ಜೀವನಸ್ಥಿತಿ ಶೋಚನೀಯವಾಗಿತ್ತು. ಜಾತಿ ವ್ಯವಸ್ಥೆಯನ್ನು ಬಸವೇಶ್ವರರು ಸಂಪುರ್ಣವಾಗಿ ತಿರಸ್ಕರಿಸಿದರು. ‘ಕರ್ಣದಲ್ಲಿ ಜನಿಸಿದವರುಂಟೇ ಜಗದೊಳಗೆ’ ಎಂದು ಬಸವಣ್ಣನವರು ವಾಸ್ತವಿಕ ಅನುಭವದಿಂದ ಪ್ರಶ್ನಿಸುವುದರ ಮೂಲಕ ವಣರ್ಾಶ್ರಮದ ರಚನೆಯಲ್ಲಿ ಹುರುಳಿಲ್ಲ ಎಂದು ತೋರಿಸಿಕೊಟ್ಟರು.
ಸಹಸ್ರಾರು ವರ್ಷಗಳಿಂದ ಭರತಖಂಡದಲ್ಲಿದ್ದ ಅಸ್ಪೃಶ್ಯತೆಯನ್ನು ಬಸವಣ್ಣನವರು ಗುರುತಿಸಿ ಅದರ ನಿಮರ್ೂಲನೆಗಾಗಿ ಅವಿರತವಾಗಿ ಹೋರಾಡಿದರು. ಉತ್ತಮ ಕುಲದಲ್ಲಿ ತಾನು ಹುಟ್ಟಿದ್ದೇ ತಪ್ಪಾಯಿತೆಂದು ಆತ್ಮ ಶೋಧನೆ ಮಾಡಿಕೊಂಡು ಆಕಾಶವೇ ಕಳಚಿ ಮೇಲೆ ಬಿದ್ದಂತಾಗಿ ಸಂಕಟಪಡುವ ಬಸವಣ್ಣನವರ ವಿಚಾರ ಅಪೂರ್ವವಾದುದು. ಸಮಾಜದೊಳಗಿನ ಜಾತೀಯತೆಯ ಜಟಿಲತೆಯನ್ನು ತೊಡೆಯಲು ಅಂತರ್ ಜಾತಿಯ ವಿವಾಹ ಅವಶ್ಯವೆಂದು ಭೋಧಿಸಲಿಲ್ಲ, ಸ್ವತಃ ಈ ಮಾತಿಗೆ ತಾವೇ ಸಾಕ್ಷಿಯಾದರು. ದಾಸೋಹದ ಮೂಲಕ ಸಹಪಂಕ್ತಿಯನ್ನು ಏರ್ಪಡಿಸಿ ಜಾತಿಯ ಅಸಮಾನತೆಯನ್ನು ತೊಡೆದು ಹಾಕಿದರು.
ಹನ್ನೆರಡನೆಯ ಶತಮಾನದಲ್ಲಿ ಜಾತಿ ರಹಿತ ಸಮಾಜ ಕಟ್ಟಲು ನಿರ್ಧರಿಸಿದ್ದ ಬಸವೇಶ್ವರರ ಅನುಯಾಯಿಗಳು ಈಗ ಜಾತೀಯತೆಯನ್ನು ನಡೆಸುತ್ತಿರುವುದು ತುಂಬಾ ವಿಷಾದಕರ ಸಂಗತಿಯಾಗಿದೆ. ಈ ಜಾತಿ ವ್ಯವಸ್ಥೆಯನ್ನು ಕಿತ್ತು ಹಾಕಿ ಬಸವಣ್ಣನವರ ತತ್ವಗಳನ್ನು ಜಾರಿಗೆ ತಂದು ಮಾನವೀಯತೆಯ ಮೆರೆಯಬೇಕಾದ ಪ್ರಸಂಗ ಈಗ ಒದಗಿಬಂದಿದೆ.
 

‍ಲೇಖಕರು G

April 22, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: