ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಹೀಗೊಂದು ಬಹಿರಂಗ ಪತ್ರ’ – ಎಂ ಎಸ್ ರುದ್ರೇಶ್ವರ ಸ್ವಾಮಿ

ಒಂದು ಬಹಿರಂಗ ಪತ್ರ….

ಎಂ ಎಸ್ ರುದ್ರೇಶ್ವರ ಸ್ವಾಮಿ

ದೊಡ್ಡ ನಾಟಕಕಾರರು
ನೀವು, ನಿಮ್ಮೊಳಗೆ
ಯಯಾತಿ ಅಡಗಿ ಕುಳಿತಿದ್ದಾನೆ, ತುಘಲಕ್-
ನ ಒಳಹೊರಗನ್ನು ಬಲ್ಲವರು
ನೀವು, ಎರಡು ನಾಯಿ-
ಗಳ ಕಿತ್ತಾಟ-
ವನ್ನು ಆಳವಾಗಿ ಚಿಂತಿಸಿದ ಚಿಂತಕರು ನೀವು
ಬರೀ ಗಮನಿಸಿದವರಲ್ಲ
ಬೇರೆಯವರ ಹಾಗೆ.

ನಾಯಿಗಳು
ಕಿತ್ತಾಡುವಾಗ ಥಟ್ಟನೆ ಒಂದರ ಮೇಲೆ
ಇನ್ನೊಂದು ಎಗರುವುದಿಲ್ಲ
ಸುಮ್ಮನೆ ಗುರ್ ಗುರ್
ಎಂದು ಬೊಗಳುತ್ತ
ಒಂದು ಸುತ್ತು ಹಾಕುತ್ತವೆ ಕಣ್ಣಲ್ಲಿ ಕಣ್ಣಿಟ್ಟು
ಅದು ಬರೀ ಅಣಕು
ಆಟ ಅರ್ಥಮಾಡಿ-
ಕೊಳ್ಳುವುದಕ್ಕೆ
ಯಾರು ಬಲಶಾಲಿ ಎಂದು ತಿಳಿದುಕೊಳ್ಳುವುದಕ್ಕೆ
ಥಟ್ಟನೆ ಕಿತ್ತಾಡುವುದು
ಮೂರ್ಖತನವೆಂದು ಗೊತ್ತು
ಅವಕ್ಕೆ. ತಮ್ಮಲ್ಲಿರುವ
ಶಕ್ತಿ ಪ್ರದರ್ಶನ ಮಾಡುತ್ತ ಇದು ನಾನು
ನಾನು ಇದು… ಇಲ್ಲಿಗೆ
ಗೊತ್ತಾಗಿ ಬಿಡುತ್ತದೆ
ಯಾರೊಬ್ಬರ
ತೀರ್ಪೂ ಇಲ್ಲದೆ, ಬಲಹೀನ ಬಾಲಮುದುರಿ-
ಕೊಂಡು ಹಿಂದೆ ಸರಿಯುತ್ತದೆ
ಅಲ್ಲಿಗೆ ಮುಗಿಯಿತು
ನಾಟಕ. ನಾಟಕ-
ಕಾರರು ನೀವು, ಗೊತ್ತು ನಿಮಗೆ ಇದೆಲ್ಲ.
ಅದಕ್ಕೆ, ಲಂಕೇಶರು
ಸಾಯುವವರೆಗೂ ಸುಮ್ಮನೆ
ಇದ್ದಿರಿ, ಅವರ
ಒಂದು ಹೊಗಳಿಕೆಯ ಮಾತಿಗೆ ಕಾಯುತ್ತಿದ್ದಿರಿ
ಅವರನ್ನು ಮಣ್ಣಲ್ಲಿಟ್ಟ
ಮರುದಿನವೇ ನಿಮಗೆ
ಬಾಯಿ ಬಂದದ್ದು
ಅನಂತಮೂರ್ತಿಯವರು ಇರುವವರೆಗೂ
ತುಟಿ ಪಿಟಕ್ಕೆನ್ನಲಿಲ್ಲ ನೀವು,
ಗೊತ್ತಿತ್ತು ನಿಮಗೆ,
ಬುದ್ಧಿವಂತ ನಾಯಿ
ಹಿಂದೆ ಸರಿಯುವ ರೀತಿ ನೀತಿ
ಈಗ ಮಾತಾಡುತ್ತಿದ್ದೀರಿ….
 

‍ಲೇಖಕರು G

3 October, 2014

5 Comments

  1. Kiran

    Hit and hard! You have driven a point quite strongly here!

  2. narendra shivanagere

    What karnad did say was wrong, but please don’t compare him to dog sir, let us all hold the integrity of our Kannada literature together.
    Sometimes silence is more powerful weapon to teach lesson to these big people?

    • Kiran

      Nagendra, you are mistaken here!
      It is the behavioural analogy; not direct comparison.
      When we say someone is cunning as fox, he does not become a fox.
      Poisonous like snake does not make anyone a snake – it is only representative of the strongest survival instinct of that life-form.
      You missed the entire point otherwise.
      Silence is more a sign of approval; not defiance.

  3. vasudeva nadig

    ee padyada hinnele arthavagilla..nanu orai, kanpur u.p li irodrinda karnatakada intha ‘nataka’ galu gottagolla..

  4. vidyashankar

    🙂 avakaashavaada

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading