-ರಾಘವೇಂದ್ರ ಜೋಶಿ

ಮಧ್ಯರಾತ್ರಿಯಲ್ಲಿ
ಎದ್ದುಹೋದ ಬುದ್ಧ,
ಗೆದ್ದರೂ ಕ್ಷಣದಲ್ಲಿ
ಬಿದ್ದುಹೋದ ಗೊಮ್ಮಟ.
ಆಕಾಶ ನೋಡಲು
ದುರ್ಬೀನು ಬೇಕೇ?
ಬಟ್ಟಬಯಲಲ್ಲಿ
ಖಾಲಿಖಾಲಿಯಾಗುವದೆಂದರೆ ಹೀಗೇನೆ..
*
ಅಪ್ಪನ ಕೈಯಿಂದ
ಗಾಳಿಯಲ್ಲಿ ಹಾರಿದ ಮಗು.
ಮತ್ತೇ ಹಿಡೀತಾನೆ ಬಿಡು
ಅಂತ ನಗುತ್ತಿತ್ತು.
ಗಾಳಿಗೂ ವಿಚಿತ್ರ
ಮುಲಾಜು.
ಸತ್ತು ಹೋಗುವಷ್ಟು
ನಂಬುವದೆಂದರೆ ಹೀಗೇನೆ..
*
ತೇಲಿಸಿದಳು ಕುಂತಿ
ತೆಪ್ಪದಲಿ ಮಗನನ್ನು;
ತುಪ್ಪದ ಭಾಂಡಲೆಯಲ್ಲಿ
ನೂರೊಂದು ಮಕ್ಕಳು.
ಹುಟ್ಟಿಸಿದ ದೇವರು
ಹುಲ್ಲು ಮೇಯುತ್ತಿದ್ದ.
ಕತ್ತಲೂ
ಕೂಡ ಮಿಂಚುವದೆಂದರೆ ಹೀಗೇನೆ..
*
ಸುತ್ತಲೂ ಕರ್ಕಶ
ಆದರೂ ಕೇಳಿಸದು.
ಎಲ್ಲೋ ನಿಡುಸುಯ್ಯುತ್ತಿರುವ
‘ಲಬ್ ಡಬ್‘ ಅವಳದೇನಾ?
ಆದಷ್ಟು ಬೇಗ
ವೈದ್ಯರನ್ನು ಕಾಣಬೇಕು.
ಶಬ್ದದೊಳಗೆ
ನಿಶ್ಶಬ್ದವಾಗುವದೆಂದರೆ ಹೀಗೇನೆ..
*
ಸಡಗರದಿ ನಾರಿಯರು
ಹಡೆಯುವಾಗ ಸೂಲಗಿತ್ತಿ;
ಅಡವಿಯೊಳಗೆ ಹೆರುವ
ಮೃಗವ ಹಿಡಿದು
ರಕ್ಷಿಸುವರ್ಯಾರು?
ಯಾರು?
ಗೊತ್ತಿಲ್ಲ.
ಆದರೆ
ದಾಸರು ನೆನಪಾಗುವದೆಂದರೆ ಹೀಗೇನೆ…






ಅದ್ಭುತ!!!
chennagide.nimma baashe tumba klishtakara.arthisikollalu nanna brain tumba kelsa madbeku
ಮನದಲ್ಲಿ ಮುಲುಗುತ್ತಿರುವ ಭಾವನೆಗಳು
ಕವನವಾಗಿ ಅರಳುವುದು ಹೀಗೇನೆ!
ondu taraha chennaagide.
🙂
malathi S
nice word framing
Nimma kaviteyalli Acharya Rajnish bandu Bichi enuki janapadad swalpa sogadu torisiddiri,so vivida bojanad anubhav onde thatteyalli. keep it up
ಒ೦ದು ಸು೦ದರ ಸ೦ಕೀರ್ಣ ಕವನ ಜೋಷಿಗಳೇ.
ನಮಸ್ಕಾರ.
ತುಂಬಾ ಚೆನ್ನಾಗಿದೆ.
good reading.chennagi bareetheeri maarayare….innashtu bareeri..
Superb Joshi………..specially last one.
Joshi nange anasutte you are Back with a BANG…
Please continue, bring more BANGs…..
ವ್ಹಾವ್! ಥ್ಯಾಂಕ್ಸ್ ಅವಧಿ.
ಮೆಚ್ಚಿಕೊಂಡವರಿಗೆಲ್ಲ ಧನ್ಯವಾದ.
🙂
nimma kavite matte matte odide , prati odigu hosadondu artha nidutte
good going, expecting next poem eagerly
bye,
joshi wow thumba thumba chennagide,thumba kushi kottavu. bareetha iri.preethiyinda.murali