ನೀವು ದೋಣಿ ಏರಿಯೇ ಸಾಗಬೇಕು, ಕಂದೀಲ ಬೆಳಕಿನಲ್ಲಿಯೇ ಇರಬೇಕು, ಬೆಳದಿಂಗಳು ಚೆಲ್ಲುವಾಗ ಪುಸ್ತಕ ಅನಾವರಣಗೊಳ್ಳಬೇಕು..
ಯಾವುದೋ ಒಂದು ಕಾದಂಬರಿಯ ಮೊದಲ ಸಾಲು ಹೀಗಿರಬಹುದೇನೋ..? ಹಾಗಿತ್ತು ಒಂದು ಕವನ ಸಂಕಲನದ ಬಿಡುಗಡೆ. ದಿನೇಶ್ ಹೊಳ್ಳ ಕಲಾವಿದರು. ಹಾಗಾಗಿ ಇಡೀ ಸಮಾರಂಭಕ್ಕೆ ಆ ಒಂದು ಕಳೆಯ ಸ್ಪರ್ಶ ಇರುವಂತೆ ನೋಡಿಕೊಂಡರು. ಗೆಳೆಯರು, ಹಿತೈಶಿಗಳನ್ನೆಲ್ಲಾ ಒಟ್ಟಾಗಿ ದೋಣಿ ಏರಿಸಿದರು. ಕತ್ತಲಲ್ಲಿ ಹುಟ್ಟು ಹಾಕುತ್ತಾ ಮರಮೇಡ್ ದ್ವೀಪಕ್ಕೆ ಕರೆದುಕೊಂಡು ಹೋದರು
ಇದನ್ನೆಲ್ಲಾ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದು ನಮ್ಮ ಹಿತೈಷಿ, ಕಥೆಗಾರ್ತಿ ರಾಜಲಕ್ಷ್ಮಿ ಕೋಡಿಬೆಟ್ಟು.
‘ಸುತ್ತಲೂ ಫಲ್ಗುಣಿಯ ಜುಳು ಜುಳು, ನಡುವೆ ಇರುವ ದ್ವೀಪದಲ್ಲಿ ಕಲಾವಿದ ಆಶಯ ಹೊತ್ತ ಪುಸ್ತಕ ಮೊದಲು ಹಾಯ್ ಹೇಳಿದ್ದು ಪಂಜಿನ ಬೆಳಕಿಗೆ ಮತ್ತು ಆಕಾಶದಲ್ಲಿರುವ ಚಂದಮಾಮಿಗೆ’ ಎನ್ನುತ್ತಾರೆ ಕೋಡಿಬೆಟ್ಟು
ಇಂತಹ ನೋಟ ಒದಗಿಸಿದ ಕೋಡಿಬೆಟ್ಟುವಿಗೆ ಥ್ಯಾಂಕ್ಸ್ ಹೇಳುತ್ತಾ ಆ ಬೆಳದಿಂಗಳ ಸಂಭ್ರಮ ನೀವೂ ಸವಿಯಲು ಸ್ವಾಗತ..








ವಿನೂತನ ಪ್ರಯೋಗ. ಚೆನ್ನಾಗಿದೆ. 🙂
aha!!!
🙂
malathi S
Hosa Pryoga. Fine