ಹೀಗೂ ಉಂಟೇ..?: ಹೀಗೊಂದು ಸಿ ಎಂ ಕುಟುಂಬ

ಸುನಂದಾ ಬಾಯಿರಿ

ಇಂಟರ್ ನೆಟ್ಟಿನಲ್ಲಿ ಕಣ್ಣಾಡಿಸುತ್ತಿದ್ದಾಗ ಕಣ್ಣಿಗೆ ಬಿದ್ದ ಒಂದು ಸುದ್ದಿ ನನ್ನನ್ನು ನಿಬ್ಬೆರಗಾಗಿಸಿತು. ಇದನ್ನು ಬರೆದೇ ತೀರಬೇಕೆಂದು ಬರೆದು ಕಳಿಸುತ್ತಿದ್ದೇನೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಪತ್ನಿ ಮತ್ತು ಮಗ ಜನಸಾಮಾನ್ಯರಂತೆ ನಡೆದುಕೊಂಡ ಮಾದರಿ ಘಟನೆ ಇದು. ನಿಜ ಇದು ಇರಬೇಕಾದ್ದು ಹೀಗೆ, ಆದರೆ ನಾವೀಗ ಎಂತಹ ಸ್ಥಿತಿ ತಲುಪಿದ್ದೆವೆಂದರೆ, ಯಾವುದಾದರೂ ’ಸರಿ’ ಯನ್ನೇ ಬೆಕ್ಕಸಬೆರಗಾಗಿ ನೋಡುವಂತಾಗಿದೆ.

ನಾನು ಓದಿದ ಘಟನೆ ಇದು : ಮುಖ್ಯಮಂತ್ರಿಯವರ ಪತ್ನಿ ಮತ್ತು ವೃತ್ತಿಯಲ್ಲಿ ವೈದ್ಯರಾದ ಅವರ ಮಗ ಚಾಮುಂಡಿ ಬೆಟ್ಟಕ್ಕೆ, ದೇವಸ್ಥಾನಕ್ಕೆ ಹೋಗಿದ್ದಾರೆ. ಇದರಲ್ಲೇನೂ ವಿಶೇಷವಿಲ್ಲ, ನಿಜ, ಆದರೆ ಮುಂದೆ ಓದಿ. ಈಗ ಅಲ್ಲಿ ಆಷಾಢಮಾಸದ ವಿಶೇಷ ಪೂಜೆ, ಸಾಮಾನ್ಯರ ಕಾರುಗಳಿಗೆ ಬೆಟ್ಟದ ಮೇಲಕ್ಕೆ ಪ್ರವೇಶವಿಲ್ಲ. ಕಾರಿನಲ್ಲಿ ಬಂದವರು, ಬೆಟ್ಟದ ಕೆಳಗೆ ಕಾರು ನಿಲ್ಲಿಸಿ, ಸರ್ಕಾರಿ ಬಸ್ಸುಗಳಲ್ಲಿ ಬೆಟ್ಟಕ್ಕೆ ಹೋಗಬೇಕು. ಮುಖ್ಯಮಂತ್ರಿಯ ಮನೆಯವರಿರಲಿ, ಒಬ್ಬ ಎಂ ಎಲ್ ಎ, ಮನೆಯವರು ಸಹ ತಮಗಿರುವ, ಇಲ್ಲದಿರುವ ಎಲ್ಲಾ ವಿಶೇಷ ಸವಲತ್ತನ್ನು ಬಳಸಿಯೋ, ಸ್ಥಾಪಿಸಿಯೋ, ಜಗಳವಾಡಿಯೋ ಬೆಟ್ಟದ ಮೇಲಿನವರೆಗೆ, ದೇವಸ್ಥಾನದ ಬಾಗಿಲವರೆಗೆ ಕಾರಿನಲ್ಲಿ ಹೋದರೆ ಯಾರೂ ಅಚ್ಚರಿ ಪಡದ ಸ್ಥಿತಿಗೆ ನಾವಿಂದು ತಲುಪಿಬಿಟ್ಟಿದ್ದೇವೆ.
ಆದರೆ ಇಲ್ಲಿ ಆಗಿರುವುದೇ ಬೇರೆ. ಮುಖ್ಯಮಂತ್ರಿಯವರ ಶ್ರೀಮತಿ ಮತ್ತು ಮಗ ಬೆಟ್ಟದ ಕೆಳಗೆ ಕಾರು ನಿಲ್ಲಿಸಿ, ಎಲ್ಲಾ ಜನರೊಡನೆ ಬಸ್ಸಿನಲ್ಲಿ ಬೆಟ್ಟಕ್ಕೆ ಹೋಗಿ, ಸರತಿ ಸಾಲಿನಲ್ಲಿ ದರ್ಶನಕ್ಕೆ ನಿಂತಿದ್ದಾರೆ. ಅಲ್ಲಿ ಅವರನ್ನು ಕಂಡು, ಗುರುತು ಹಿಡಿದ ಯಾರೋ ದೇವಸ್ಥಾನದವರಿಗೆ ಸುದ್ದಿ ತಿಳಿಸಿ, ಅವರು ಬಂದು ಇವರನ್ನು ವಿಶೇಷ ದರ್ಶನಕ್ಕೆ ಆಹ್ವಾನಿಸಿದ್ದಾರೆ, ಇವರು ನಿರಾಕರಿಸಿ, ಸಾಲಿನಲ್ಲೇ ಹೋಗಿ ದರ್ಶನ ಮಾಡಿ ಬಂದಿದ್ದಾರೆ. ಆಮೇಲೆ ಸಹ ಇವರು ಬೆಟ್ಟದ ಕೆಳಗೆ ತಮ್ಮ ಕಾರಿಗೆ ಹೋಗಲು ವಿಶೇಷ ವಾಹನದ ವ್ಯವಸ್ಥೆ ಆಗಿದೆ, ಇವರು ಮತ್ತೆ ನಿರಾಕರಿಸಿದ್ದಾರೆ. ಸಾಮಾನ್ಯರಂತೆಯೇ ಮತ್ತೆ ಸರ್ಕಾರಿ ಬಸ್ಸಿನಲ್ಲಿ ಸದ್ದಿಲ್ಲದೆ ಬೆಟ್ಟ ಇಳಿದಿದ್ದಾರೆ.
ಸಾಮಾನ್ಯವಾಗಿದ್ದು ಅಸಾಮಾನ್ಯರಾಗುವುದು ಅಂದರೆ ಇದೇ ಇರಬೇಕು ಅಲ್ಲವೇ? ಇಂತಹವರ ಸಂತತಿ ಸಾವಿರವಾಗಲಿ. ಕುಟುಂಬ ರಾಜಕಾರಣ, ಕುಟುಂಬ ಅಧಿಕಾರ ಪ್ರಯೋಗ, ಅಧಿಕಾರವೆಂದರೆ ವಂಶಪಾರಂಪರ್ಯ ಹಕ್ಕು ಎನ್ನುವಂತೆ ಭಾವಿಸುವ ಈ ದಿನಗಳಲ್ಲಿ ಇಂತಹ ನಡತೆ ರಾಜ್ಯಕ್ಕಲ್ಲ, ಇಡೀ ದೇಶಕ್ಕೇ ಮಾದರಿಯಾಗಿದೆ.

 

‍ಲೇಖಕರು G

July 18, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

14 ಪ್ರತಿಕ್ರಿಯೆಗಳು

  1. ಪ್ರಮೋದ್

    ಯಾಕೋ ಸಿದ್ಧರಾಮಯ್ಯನವರು ಅವಧಿಯೊಳಗೆ ಜಾಸ್ತಿ ಬರ್ತಾ ಇದ್ದಾರಲ್ಲ

    ಪ್ರತಿಕ್ರಿಯೆ
      • ಪ್ರಮೋದ್

        ಸರಳ ವಿಷಯಗಳು ಅನಗತ್ಯವಾಗಿ ರಾಜಕೀಯ ಧ್ರುವಗಳಾಗಿ ಮೈಮೇಲೆ ಎಳೆದುಕೊ೦ಡು ಪ್ರೊಪಗಾ೦ಡದ ರೂಪ ತಾಳುತ್ತದೆ.
        ಅವಧಿ ಫೇಸ್ ಬುಕ್ ಆಗುತ್ತದೆ. ಅವಧಿ ಆದಷ್ಟು ತಟಸ್ಥವಾಗಿರಲಿ ಅ೦ತ ನನ್ನ ಅಭಿಪ್ರಾಯ.

        ಪ್ರತಿಕ್ರಿಯೆ
  2. nagraj.harapanahalli

    ಮುಖ್ಯಮಂತ್ರಿಯೊಬ್ಬರು ಇಷ್ಟು ಸರಳವಾಗಿ ನಡೆದುಕೊಂಡರೇ ಎಂಬ ಸುದ್ದಿಯೇ ಕರ್ನಾಟಕದ ಜನ ಸಂಭ್ರಮಿಸಬೇಕಾದ ಸಂಗತಿ. ಮುಖ್ಯಮಂತ್ರಿಗೆ ಕೋಡು ಇರುವುದಿಲ್ಲ ಎಂಬುದನ್ನ ಸಿದ್ದರಾಮಯ್ಯ ವಿರೋಧಿಗಳು , ಮೋದಿ ಆರಾಧಕರು ತಿಳಿದುಕೊಳ್ಳಬೇಕು . ಈಚಿನ ದಶಕಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿ ಗಳ ಸರಳ ನಡೆ ಕುರಿತು ಸುದ್ದಿಯನ್ನೆ ಕೇಳಿರಲಿಲ್ಲ. ಓದಿರಲಿಲ್ಲ. ಸಿದ್ದರಾಮಯ್ಯ ನವರ ಸರಳತೆ ಮುಂದುವರಿಯಲಿ.

    ಪ್ರತಿಕ್ರಿಯೆ
    • Anonymous

      Hello Nagaraj,
      Hi,
      Why you are hating Modi by praising Siddaramaiah. Every Indian should praise Siddaramaiah and his family in this regard. But it doesn’t mean all Modi followers oppose Siddaramaiah for each and every reason.
      Let us accept which is right and deny whichever is wrong, irrespective of person, caste, party etc.
      shiva

      ಪ್ರತಿಕ್ರಿಯೆ
    • ಪ್ರಮೋದ್

      ಕೇರಳ ಗೋವಾದ ಪ್ರಸಕ್ತ ಮು.ಮ.ಗಳು ಸಿ೦ಪಲ್ಲ್ ಆಗಿ ಸಾರಿಗೆ ಬಸ್ಸಿನಲ್ಲಿ ಓಡಾಡುತ್ತಾರೆ.

      ಪ್ರತಿಕ್ರಿಯೆ
  3. ಉದಯ್ ಇಟಗಿ

    ಹೀಗಿರುವ ಸಿದ್ಧರಾಮಯ್ಯನವರು ಈ ಹಿಂದೆ ತಮ್ಮ ಮಗನ ವಿರುದ್ಧ ಕೇಸು ದಾಖಲಿಸಿದ ಮೈಸೂರಿನ ಇನ್ಸ್ಪೆಕ್ಟರ್ ಒಬ್ಬರನ್ನು ತಾವು ಮುಖ್ಯಮಂತ್ರಿಯಾಗುತ್ತಿದ್ದಂತೆ ಏಕಾಏಕಿ ಸಸ್ಪೆಂಡ್ ಮಾಡಿದ್ದೇಕೆ? ಈ ವಿಷಯದಲ್ಲಿ ಸಿದ್ಧರಾಮಯ್ಯನವರು ಜನಸಾಮಾನ್ಯರಂತೆ ವರ್ತಿಸಲಿಲ್ಲವೇಕೆ? ಅದನ್ನು ದೊಡ್ಡ ಸುದ್ಧಿಯನ್ನಾಗಿ ಮಾಡಿಕೊಂಡಿದ್ದೇಕೆ?

    ಪ್ರತಿಕ್ರಿಯೆ
  4. Jeevan ganvkar, b'lore

    ಸಿದ್ದರಾಮಯ್ಯನವರ ಪತ್ನಿ ಹಾಗೂ ಮಗನ ಸುದ್ದಿ ನಿಜಕ್ಕೂ ಅಭಿನಂದನಾರ್ಹ. ಅಂತೆಯೇ ಅವರ ಇನ್ನೊಬ್ಬ ಮಗನ ವರದಿಯನ್ನು ಕೇಳಿ. ಅವರ ಮತ್ತೊಬ್ಬ ಪುತ್ರ ರಾಖೇಶ್ ಅವರ ಪ್ರತಾಪ ಬೆಂಗಳೂರು ಮಿರರ್ ಹಾಗೂ ವಿಜಯ ಕರ್ನಾಟಕದಲ್ಲಿ ಬಂದಿದೆ. ವಾರ್ತಾ ಇಲಾಖೆ ಹೋರ್ಡಿಂಗ್ ಗಳಲ್ಲಿ, ಇಲಾಖೆ ಅನುಮತಿ ಪಡೆಯದೇ ತನ್ನ ಹುಟ್ಟು ಹಬ್ಬದ ಶುಭಾಷಯಗಳನ್ನು ಬರೆಸಿದ್ದರು. ಪತ್ರಿಕೆಯಲ್ಲಿ ಬಂದ ಮರುದಿನ ಮರೆಯಾಗಿದೆ. ಇಂಥಾ ಸುದ್ದಿಗಳು ಕೂಡ ಕಣ್ಣಿಗೆ ಬೀಳಲಿ.

    ಪ್ರತಿಕ್ರಿಯೆ
  5. Anonymous

    ಸಿದ್ಧರಾಮಯ್ಯ ಅವರ ಪತ್ನಿ ಮತ್ತು ಮಗನಿಗೆ ಅವರದೇ ಆದ ವೈಯಕ್ತಿಕ ವ್ಯಕ್ತಿತ್ವವಿದೆ,ಇಷ್ಟಾನಿಷ್ಟಗಳಿವೆ. ಅದನ್ನು ಗೌರವಿಸೋಣ. ಅದನ್ನೂ ಸಿದ್ಧರಾಮಯ್ಯನವರದೇ ಕೋಡೆಂದು ಯಾಕೆ ಭಾವಿಸುತ್ತೀರಿ? ಇನ್ನೊಬ್ಬ ಮಗ ಹಾಗಿದ್ದರೆ ಅದು ಅವನ ವ್ಯಕ್ತಿತ್ವ. ಗಾಂಧಿಗೂ ಕೆಟ್ಟ ಮಗನಿದ್ದ ಹಾಗೆಂದು ಗಾಂಧಿಯ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಸಾಧ್ಯವೇ? ಅವರನ್ನು ವೇರೆ ಬೇರೆ ವ್ಯಕ್ತಿಗಳಾಗಿ ನೋಡಬೇಕಲ್ಲವೇ?

    ಪ್ರತಿಕ್ರಿಯೆ
  6. ಕೊನಿಕಾ

    ಸರಳತೆ ಶ್ಲಾಘನೀಯ ಆದರೆ ಸರಳತೆಯ ನಟನೆ ಖಂಡನೀಯ. ಇಲ್ಲಿ ಸರಳತೆ ಅಭಿವ್ಯಕ್ತಗೊಂಡಿದೆಯೋ ಅಥವಾ ಅದರ ನಟನೆ ನಡೆದಿದೆಯೋ ಅಂತ ಲೇಖಕಿ ಪರಾಮರ್ಶೆ ನಡೆಸಿದ ಹಾಗೆ ಕಾಣುತ್ತಿಲ್ಲ.

    ಪ್ರತಿಕ್ರಿಯೆ
  7. malini guruprasanna

    barbaaradu anta yenilla, aadre varadigalu vastunistavaagirabeku. adu modiyaagali, siddaramaiahnavaraagali. olleyadannu oppikondu, kettaddannu teekisi. poorvagra peeditaraagadiddare ondu mitiyalli ellavoo chanda.

    ಪ್ರತಿಕ್ರಿಯೆ
  8. V.R.Carpenter

    Paapa Modi bhashana kelalu duddu kodalu tayyariruv ee ‘MOGU’galige tale kettirabeku!

    ಪ್ರತಿಕ್ರಿಯೆ
    • ವಿಜಯ್

      ಎಲ್ಲಿಗೆ ಹೋದ್ರೂ ಮೊಳೆ ಹೊಡೆಯೊ ಕೆಲಸಾನೆ!..ಅದೇನೊ ಅಂತಾರಲ್ಲ..’ಕೆಲಸವಿಲ್ಲದ ಬಡಗಿ, ಸುಮ್ಮನೆ ಕೂಡಲಾರದೇ ಮಗನ ……….ಕೆತ್ತಿದನಂತೆ!. ಇಲ್ಲಿ ಯಾರಾದ್ರೂ ಮೋದಿ ಭಾಷಣದ ಪ್ರಚಾರ ಮಾಡುತ್ತಿದ್ದಾರೆಯೆ? ಇಲ್ಲಿರೊ ವಿಷಯ ಸಿದ್ಧರಾಮಯ್ಯನವರದ್ದು.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: