ಮಿಂಚುಹುಳ ಮತ್ತು ಗಂಗೀ
ಲಕ್ಷ್ಮಣ್ ಕೆ ಪಿ
ಆ ಕಡು ರಾತ್ರಿಗೊಂದು ಮಾತು ಆಡಬೇಕಿನಿಸಿ
ಮಿಂಚುಹುಳವಾಗಿ ಮೂಡಿ
ಅವಳ ಸೆರಗ ಸುಕ್ಕಿಗೆ ಬಂದು ಕೂತಿತು
ಹಿಟ್ಟಿನ ಮಡಕೆಯ ಒಡಲ
ಸೀಕ ಕೆರೆವ ಇವಳು ಅಂದಳೂ ….
“ನಮಗೇ ತಿನ್ನಾಕೆ ಹಿಟ್ಟಿಲ್ಲ
ನೀನ್ಯಾಕ್ ಬಂದೆ ಸರಿ ಹೊತ್ತು”
ಹುಬ್ಬೇರಿಸಿದ ಮಿಂಚುಹುಳವೂ
“ಅದ್ಯಾಕೆ ಗಂಗೀ ಮಾತೆತ್ತಿದರೆ ಹಂಗೇ ಕೊಂಕುತೀ ,
ಇಕ್ಕಲು ಹಿಟ್ಟಿಲ್ಲದಾಗ ನೀನು ಪದ ಕಟ್ಟುತೀ
ಮೂರು ಲೋಕದ ಮಾತು
ಹಿಟ್ಟು ಬೇಡವ್ವ ನನಗೆ, ಒಂದು ಪದವಿಕ್ಕು
ಕುಣಿದೇನು ನಾನೂ ಉಂಡುಂಡು ಹಗಲಾಗಿ”
‘ಮಿಣುಕೋ ಮಿಂಚು ನೀನು
ನಾನಾಡೋ ಕಪ್ಪುಪದವು ಹೆಂಗೆ ಹಿಡಿಸಿತವ್ವಾ …!!
ಹೊರ ಹೊರಡು ಹೊತ್ತಾಯ್ತು ಮಲಗೋಗು”
ರಚ್ಚೆ ಹಿಡಿದ ಮಿಂಚುಮರಿಯು
“ಹಂಗನಬೇಡ್ವೆ…. ದಮ್ಮಯ್ಯ …
ಮುಗಿಲಾಗೆ ಚುಕ್ಕಿಲ್ಲ ಇಂದ್ಯಾಕೋ ಬೇಸರಿಕೆ,
ಅನ್ನನ್ನು ಪದವ ಹೊರಡುತೇನೆ ತಡವಿಲ್ಲ”
ಆ ರಾತ್ರಿಯ ಎದೆಪಸೆಯ ಸೂರಿಡಿದು ಅನ್ನುತಾಳೆ ಗಂಗೀ …
“ಕೂಸುಗಳ ಕತ್ತಿಸುಕಿ
ಊರೂರ ಮರಕೂ ತೂಗ್ಯಾವೋ ಉಯ್ಯಾಲೆ
ಕೂರಲು ಒಂದು ಕೂಸಿಲ್ಲ
ತೊಟ್ಟಿಲಲಿ
ಹೇಲು ಉಚ್ಚೆಯ ಘಮವಿಲ್ಲ …!!!
ಬಾಣಂತಿ ಮೈಯ್ಯಿನ್ನು ಒಣಗಿಲ್ಲ”
ಪದ ಕೇಳಿ ಮಿಂಚುಹುಳವೂ
ಕೊರಳ ಪಕಳೆ ಮುದುರೋಗಿ
ಕಣ್ಣೀರು ಉದುರಿ ಲೋಕಕ್ಕೆ ಬೆಳಕಾಗಿ
ಕಿಡಿಯೊಂದ ಬಿಟ್ಟೋಯ್ತು
ಗಂಗೀ ಹೊತ್ತಾರೆ ಹಚ್ಚೋ ಒಲೆಗಾಗಿ ….





ಜಾನಪದ ಗೀತೆಯ ಪರಿಮಳವಿರುವ ಈ ಕವಿತೆ ಅದೆಲ್ಲಿಂದ ಮೂಡಿತೋ ಆಶ್ಚರ್ಯವಾಗುತ್ತದೆ. ದಲಿತ ಕವಿತೆಗಳು ತಮ್ಮ ಘೋಷಣಾತ್ಮಕ ನೆಲೆಯಿಂದ ಮುಕ್ತಗೊಂಡು ಕವಿತೆಯ ನಿಜದ ನೆಲೆಗೆ ಮರಳುತ್ತಿರುವುದಕ್ಕೆ ಈ ಕವಿತೆಯೇ ಸಾಕ್ಷಿ. ಕೂಸುಗಳು ಮರದಲ್ಲಿ ನೇತಾಡುವ ಕಲ್ಪನೆ ಮತ್ತು ಕೂಸಿಲ್ಲದ ಖಾಲಿತೊಟ್ಟಿಲು ಬಡತನದ ಉರಿಯುವ ಪ್ರತಿಮೆಗಳಾಗಿ ಸಾರ್ಥಕಗೊಂಡಿವೆ. hats off to Mr. Lakshman
Thank you
Arthagarbita kavite ….
Nimma nisarga preetige kalsgige nanna abinandanegalu .
Chi na halli kirana
.
Thank you madam
Nelagurutu……
ಹಿಟ್ಟು ಬೇಡ ಪದವಿಕ್ಕು beautiful expression