ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾಸಿಗೆಯ ಮೇಲೆ ರೋಜಾ ಹೂ ಸಿಕ್ಕಿತು..

ಜಯರಾಮಾಚಾರಿ 

ಹಾಸಿಗೆಯ ಮೇಲೆ ರೋಜಾ ಹೂ ಸಿಕ್ಕಿತು
ಅವಳು ಮೊನ್ನೆ ಇಳಿ ಸಂಜೆ ಬಂದಾಗ 
ಬಿಟ್ಟು ಹೋದದ್ದು
ಪಕಳೆಗಳೆಲ್ಲ ಬಣ್ಣ ಕಳಚಿ ಮುಪ್ಪಾಗಿ
ಪರಿಮಳಹೀನವಾಗಿ 
ಬಾಡಿ 
ಕಪ್ಪಿಗೆ ಕರಗಿ
ಮೂಲೆಯೊಂದರಲ್ಲಿತ್ತು

ಆದರೆ ಅದು ಹಾಗಿರಲಿಲ್ಲ
ಅವಳ ತಲೆಯಲ್ಲಿದ್ದಾಗ ಹೊಳೆಯುತ್ತಿತ್ತು
ಅವಳು ಉಸಿರು ತಾಗಿಸಿದಾಗ 
ಅದರ ಪರಿಮಳವೂ ಮೂಗಿಗೆ ಬಡಿದಿತ್ತು 
ಎಲೆಗಳು ಕೆಂಪಿದ್ದವು ಹಸಿ ಕೆಂಪವು
ತೊಟ್ಟು ಹಸಿರಿತ್ತು
ಯೌವನದ ಹೂವಾಗಿತ್ತು

ಈಗಾಗಿಲ್ಲ
ಅದ್ಯಾವುದೋ ಜಾಹೀರಾತಿದೆಯಲ್ಲ
ಬಣ್ಣ ರುಚಿ ಶಕ್ತಿಯಂತ
ಅವು ಮೂರು ಕಳಕೊಂಡ ಮೂಲೆಗುಂಪಾಗಿತ್ತು
ಕೈಲಿಡಿದರೆ 
ಅವಳನ್ನ ನಡುವಲ್ಲಿಡಿದು 
ಥೇಟು ಇಂಗ್ಲೀಷ್ ಸಿನಿಮಾದಲ್ಲಿ ಮುತ್ತಿಡುತ್ತಾರಲ್ಲ
ಹಾಗೇ ಕೊಟ್ಟ ನೆನಪು ನಕ್ಕಿತ್ತು

ನನಗನಿಸುತ್ತೆ 
ಇದು ಬರೀ ಮೂರು ಕಳೆದುಕೊಂಡ ಹೂವಲ್ಲ
ಅರಿಷಡ್ವರ್ಗದ ಅರಿವು
ಅವಳಿದ್ದಾಗ
ಇಲ್ಲದಾಗ 
ನಡುವಲ್ಲಿನ ಭಾವ ಕಂದಕದರಿವು
ಹಾಳು ರೋಜಾನ ಕಸದಡಬ್ಬಿಗೂ ಎಸೆಯುವಂತಿಲ್ಲ 
ನನ್ನ ಪ್ರೀತಿಯನ್ನೇ ಹೀಯಾಳಿಸಿಬಿಡುತ್ತೆ 
ಅದಕ್ಕೆ ದೇವರ ಗೂಡಲ್ಲಿಟ್ಟು ಬಿಟ್ಟೆ

ರಾತ್ರಿ ಪಾಳಿಗೆ ಆಫೀಸಿಗೆ ಹೋಗುವಾಗ
ಲಿಫ್ಟಿನೊಳಗೆ ಹೊಕ್ಕಿದರೆ 
ಅಲ್ಲೊಂದು ರೋಜಾ ಹೂ ಬಿದ್ದಿತ್ತು
ಅದರ ಹೊಣೆ ಯಾರದೀಗ ?!

‍ಲೇಖಕರು avadhi

7 June, 2019

2 Comments

  1. T S SHRAVANA KUMARI

    ಮನ ತಟ್ಟಿದ ಸಾಲುಗಳು

  2. prathibha nandakumar

    Good

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading