ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾದಿಹೋಕಳಿಗೆ – ಚಾರ್ಲ್ಸ್ ಬಾದಿಲೇರ್

ವಿಜಯರಾಘವನ್ ರಾಮ್  ಕುಮಾರ್


ನಗರದ ಕಿವಿಕೊರೆಯುವ ಸದ್ದಿನ ನಡುವೆ
ಎತ್ತರದ, ನೀಳಕಾಯದ, ಆಳ ದುಃಖದ
ಆ ಹೆಣ್ಣು ಸಾಗಿಹೋಗಿದ್ದಾಳೆ. ಗಂಭೀರ, ನೇರನಡೆ
ಗೌನಿನ ಅಂಚು ಹಿಡಿದ ಅವಳ ಸದೃಢ ಕೈ
ಉದಾತ್ತ, ಘನ ನಿಲುವು ಪುತ್ಥಳಿಯ ಹಾಗೆ
ನಾನು ಕುಡಿದೆ, ನಡುಗುತ್ತ, ಆನಂದಗೊಂಡ
ಹುಚ್ಚನೊಬ್ಬನ ಹಾಗೆ
ಅವಳ ಚಂಡಮಾರುತ ಕಾವಿಗೆ ಕೂತಿರುವ
ಬೂದು ಆಕಾಶದಂತೆ ಇರುವ ಕಣ್ಣಿಂದ
ಮನಸೆಳೆಯುವ ಕೋಮಲತೆ, ಕೊಲ್ಲುವ ಖುಷಿ
 
ಒಂದು ಕ್ಷಣ ಸಂದು ಇರುಳು. ಓ ಸುಂದರ ಚೋರಳೆ
ನಿನ್ನ ಒಂದು ಕ್ಷಣದ ಹೊರಳು ನೋಟಕ್ಕೆ
ನಾನು ಮರಳಿ ಹುಟ್ಟಿದವನಂತಾಗಿದ್ದೇನೆ
ಅನಂತಕಾಲದಂತದವರೆಗೂ ನಾನು ನೋಡಲಾರೆನೆ ನಿನ್ನ?
ಎಲ್ಲೋ ಒಂದೆಡೆ, ದೂರ, ತುಂಬ ತಡವಾಗಿ
ಇಲ್ಲವೇ ಇಲ್ಲ ಅಥವಾ ಅಚಾನಕ್ಕಾಗಿ
ಇಬ್ಬರಲ್ಲೊಬ್ಬರಿಗೂ ಗೊತ್ತಿಲ್ಲ ಉಳಿದೊಬ್ಬರೆಲ್ಲಿಗೆ
ಹೋಗುವುದು, ಬದುಕುವುದು ಎನ್ನುವುದು
ನಾವು ಪ್ರೀತಿಸಿರಲೂ ಬಹುದು, ಹಾಗೆಂದು
ನಿನಗೆ ಅರಿವಾಗಿರಲೂ ಬಹುದು
 
ವಾಲ್ಟರ್ ಬೆಂಜಮಿನ್‌ರಿಂದ ಉಧೃತ –
ಸಿ ಎಫ್ ಮ್ಯಾಕಿನ್‌ಟೈರ್‌ರ ಆಂಗ್ಲ ಅನುವಾದದಿಂದ
 
 

‍ಲೇಖಕರು G

30 June, 2015

3 Comments

  1. noorullathyamagondlu

    ಚೆನ್ನಾಗಿದೆ.

  2. girijashastry

    ತುಂಬಾ ಚೆನ್ನಾಗಿದೆ. ಪ್ರೀತಿ ಅನ್ನೋದೆ ಒಂದು ರೀತಿ abstract ಅದದ್ದು. ನಾಜೂಕಾದದ್ದು. ಗಾಳಿಕೆನೆಗಳಿಂದ ಮಾಡಿದ ಪಾತರಗಿತ್ತಿಯ ಪಕ್ಕಗಳಂತೆ “ಮುಟ್ಟಲಾರೆ ಭಯ”!?
    ಅಭಿನಂದನೆಗಳು

  3. Rohini Satya

    Bheetiya badiya preetiya ahavaalu,muttiruvudara aspashtate bhaavavaagi mundhe …enennuva kavana Chennaagide sir!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading