– ವೀರಣ್ಣ ಮಡಿವಾಳರ
ಹಸಿದ ಹೊಳೆ
ಸಾವಿರ ಸೂರ್ಯರ ಹೆಣ ಹರಿದು ತಿನ್ನುತಿವೆ ಸಾವಿರದ ಹದ್ದು
ಹರಕು ಅಂಗಿಯ ಕಿಂಡಿಯಲ್ಲಿ ಒಡೆದ ಬೆಳದಿಂಗಳ ಹಾಲು
ದುಃಸ್ವಪ್ನಗಳ ಬೇಟೆಯಾಡುತ್ತ ಬಂದು ಮಲಗಿವೆ ಮೊಗ್ಗು ಆ ನದಿಯ ತಟದಲ್ಲಿ
ಹಸಿದ ಹೊಳೆಗೆ ಮೈತುಂಬ ಬಾಯಿ ತಿನ್ನುತಿದೆ ದಾರಿಗುಂಟ
ಮನೆ ಮಸಣ ಗುಡಿಸಲು ನಮ್ಮಷ್ಟೇ ಎತ್ತರದ ಫಸಲು
ಬೆಚ್ಚಗೆ ಮಲಗಿರುವ ಇರುವೆ ದಂಡಿನ ನಿದ್ದೆಯನೂ ಬಿಡದೆ
ಹಸಿದ ಹೊಟ್ಟೆ ಹಾಸಿ ಮಲಗಿದ್ದಾರೆ ಜನ ಮಳೆಬಿಲ್ಲ ಕೆಳಗೆ
ತಿನ್ನಲಾಗದ ರೊಟ್ಟಿ ಕೈಯಲ್ಲಿ
ಹಾಡಲಾಗದ ಹಾಡು ಕೇಳಲೊಲ್ಲದ ಕಿವಿಗೆ ಹೇಗೆ ಹಾಕುವುದು
ಈ ಲೋಕದ ಚಿಂತೆ ಬೇರೆ
ಹರಿವ ಹೊಳೆಯ ತುಂಬ ಸತ್ತ ಹೂಗಳ ದಿಬ್ಬಣ
ಹಿಡಿದು ಮುಡಿಯುವ ಹಟ ಯಾರದೊ
]]>
'ಹಾಡಲಾಗದ ಹಾಡು ಕೇಳಲೊಲ್ಲದ ಕಿವಿಗೆ…' – ವೀರಣ್ಣ ಮಡಿವಾಳರ ಕವನ
ನಿಮಗೆ ಇವೂ ಇಷ್ಟವಾಗಬಹುದು…




uttama kavana…