ಹಳೆಯ ದಿನಗಳನ್ನು ಮೆಲುಕು ಹಾಕುವ ‘ಮಾವಿನಗುಡಿ ಕಾಲೋನಿ’

ಜಾಗತೀಕರಣ ಮತ್ತು ಪ್ರಗತಿಯ ಹೆಸರಿನಲ್ಲಿ ನಾಶವಾಗಿ ಹೋದ ಕಾಡುಗಳೆಷ್ಟು ಹಳ್ಳಿಗಳೆಷ್ಟೋ, ಅಂತೆಯೇ ಎಷ್ಟೋ ನಗರಗಳೂ ಕೂಡ ಈ ಪ್ರಗತಿಯ ಅಬ್ಬರಕ್ಕೆ ಸಿಲುಕಿ ತಮ್ಮ ಸೊಬಗು, ವೈಭವಗಳನ್ನು ಕಳೆದುಕೊಂಡಿವೆ. ಲಗಾಮಿಲ್ಲದ ಹುಚ್ಚು ಕುದುರೆಯಂತೆ ಉದ್ದಗಲಕ್ಕು ಹರಡುತ್ತಿರುವ ವೃದ್ಧಿಯೆಂಬ ಈ ಕುರುಡುತನ, ಒಂದು ರೀತಿಯ ಸಾಂಕ್ರಮಿಕ ಖಾಯಿಲೆಯಂತೆ ಕಾಣುವುದರಲ್ಲಿ ಅನುಮಾನವೇ ಇಲ್ಲ. ಪ್ರಗತಿಯ ಪತಾಕೆ ಹಿಡಿದು ಓಡಾಡುತ್ತಿರುವ ನಗರವಾಸಿಗಳು ತಿರುಗಿ ನೋಡಿದಾಗ, ಹಿಂದೊಂದು ದಿನ ತಾವಿದ್ದ ಜಾಗ ಬದಲಾಗಿರುವುದನ್ನು ಕಂಡಾಗ, ಆಗುವ ಆಶ್ಚರ್ಯ ಒಂದು ಕಡೆಯಾದರೆ ಮತ್ತೊಂದೆಡೆ ಅಘಾತವೂ ಉಂಟಾಗುತ್ತದೆ. ಬದಲಾವಣೆಯೆಂಬುವುದು ನಮ್ಮನ್ನು ಯಾವ ದಿಕ್ಕಿಗೆ ಕರೆದುಕೊಂಡು ಹೋಗುತ್ತಿದೆ ಎಂಬ ಗೊಂದಲಗಳು ಉಂಟಾಗುವುದರಲ್ಲಿ ಅನುಮಾನವೇ ಇಲ್ಲ. ಹೇಗೆ ಕಾಡುಗಳನ್ನು ಮತ್ತು ಹಳ್ಳಿಗಳನ್ನು ಉಳಿಸುವುದು ಅನಿವಾರ್ಯವೋ ಅಂತೆಯೇ ನಗರಗಳನ್ನು ಬೆಳೆಸದೆ ಉಳಿಸಿಕೊಳ್ಳುವುದು ಅನಿವಾರ್ಯ.

ಹೀಗೆ ಜಾಗತೀಕರಣದ ಅಲೆಯಲ್ಲಿ ವಿವಿಧ ದಿಕ್ಕಿನಲ್ಲಿ ಗುತ್ತಿರುವ ಸ್ನೇಹಿತರ ಗುಂಪೊಂದು, ತಮ್ಮ ಬಾಲ್ಯದ ದಿನದಲ್ಲಿ, ಒಟ್ಟಿಗೆ ಬೆಳೆದ ಜಾಗದಲ್ಲಿ ಮತ್ತೊಮ್ಮೆ ಸೇರುವ ಸಂದರ್ಭ ಬರುತ್ತದೆ.ಆ ಜಾಗವೇ ‘ಮಾವಿನಗುಡಿ ಕಾಲೋನಿ’. ಹೆಸರೇ ಸೂಚಿಸುವಂತೆ, ಮಾವಿನ ಮರವೆ ಆ ಕಾಲೋನಿಯ ಕೇಂದ್ರಬಿಂದು. ಆದರೆ ಇಂದು ಅದೂ ಕೂಡ ಪ್ರಗತಿಯ ಬಲೆಗೆ ಬಲಿಯಾಗುವ ಹಂತದಲಿರುತ್ತದೆ. ಮಾವಿನ ಮರ ಧರೆಗುರುಳುವ ಮುನ್ನ ಸ್ನೇಹಿತರು ಒಮ್ಮೆ ಅಲ್ಲಿ ಭೇಟಿಯಾಗಬೇಕೆಂದು ನಿರ್ಧರಿಸಿ ಸೇರುತ್ತಾರೆ, ನೆನಮಗಳನ್ನು ಮೆಲಕು ಹಾಕುತ್ತಾ ಬದಲಾವಣೆಗಳನ್ನು ಗಮನಿಸುತ್ತಾ ಕೆಲವು ಗಂಟೆಗಳ ಕಾಲ ಆ ಹಳೆಯ ದಿನಗಳನ್ನು ಬಾಳುವ ಪ್ರಯತ್ನ ಮಾಡುತ್ತಾರೆ.

ಮಾವಿನಗುಡಿ ಕಾಲೋನಿ ನಾಟಕ, ಪ್ರೇಕ್ಷಕನಿಗೆ ತನ್ನ ಹಳೆಯ ದಿನಗಳನ್ನು ಮೆಲುಕು ಹಾಕುವಂತೆ ಮಾಡುತ್ತಾ, ಬದಲಾದ ಜೀವನ ಶೈಲಿಯನ್ನು ಬಿಂಬಿಸುವ ಪ್ರಯತ್ನವಷ್ಟೆ.

ABOUT MAVINAGUDI COLONY:

It is not just the forests and villages that are swept by the waves of development and globalization,even the cities are caught in the web and have lost their charm and glory. In the mad rush for development, the cultural roots are washed away and this trend is spreading like an epidemic.The people of the city wearing a proud badge of progress, when they turn around and look at the places from where they grew up, are not only surprised but shocked. That moment opens a door of realization towards the endless path of loneliness and confusion. It is as important to save the cultural traits of a city as it is to save a forest or a village. 

A group of friends caught in the web of globalization plan to meet at a place where they had spent their childhood and that place is “Mavinagudi Colony” (Mango Temple Colony). As the name itself suggests, a mango tree is the focal point. And this tree is now on the verge of being destroyed for the development of the area. The friends decide to meet under the tree before it is brought down. Recollecting their childhood memories they spend few hours, reliving those joyous moments. 

Mavinagudi colony brings back the nostalgic elements of one’s life and draws the attention towards the effects of progress and globalization.

‍ಲೇಖಕರು Admin

December 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: