ಹರ್ಷಮಂದರ್ ಈಗ ಕನ್ನಡದಲ್ಲಿ

ಹರ್ಷ ಮಂದರ್ ಅವರ ಲೇಖನಗಳು ಈಗ ಕನ್ನಡದಲ್ಲಿ ಪುಸ್ತಕ ರೂಪದಲ್ಲಿ ಬರುತ್ತಿದೆ. ಅಹರ್ನಿಶಿ ಪ್ರಕಾಶನ ಇದನ್ನು ಪ್ರಕಟಿಸುತ್ತಿದೆ.

ಪುಸ್ತಕದ ಮುಖಪುಟ ಹಾಗು ಒಂದು ಅಧ್ಯಾಯ ನಿಮಗಾಗಿ.

ಕಗ್ಗೊಲೆಗಳ ಕಾಲದಲ್ಲಿ ಚಿಗುರೊಡೆವ ಪ್ರೀತಿ

ಭಾರತದಲ್ಲೀಗ ಸಾರ್ವಜನಿಕ ಆಕ್ರೋಶದ ಕಾಲ, ಪ್ರತಿಕಾರಭಾವ ತುಳುಕುತ್ತಿರುವ ಚಳಿಗಾಲ. ಗಂಭೀರವಾದ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿದ್ದ ಇಬ್ಬರನ್ನು ನೇಣಿಗೇರಿಸಲಾಗಿದೆ. ಮರಣದಂಡನೆಗೆ ಗುರಿಯಾಗಿರುವ ಕಾಡುಗಳ್ಳರು, ಕೊಲೆಗಡುಕರು ಹಾಗೂ ಸರಣಿ ಹಂತಕರು ನೇಣಿಗೆ ಕೊರಳೊಡ್ಡಲು ಸರದಿಯಲ್ಲಿಕಾಯುತ್ತಿದ್ದಾರೆ. ಬಾಲಕನೋರ್ವನೂ ಸೇರಿದಂತೆ ದೆಹಲಿ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಗಲ್ಲುಶಿಕ್ಷೆಯಾಗದೇ ಸಾರ್ವಜನಿಕರ ಪ್ರತಿಕಾರ ಭಾವತಣಿಯುವಂತೆ ಕಾಣುತ್ತಿಲ್ಲ.
ಪ್ರತಿಕಾರಕ್ಕಾಗಿ ಸಾರ್ವಜನಿಕರು ಹಾತೊರಿಯುತ್ತಿರುವ ಇಂಥ ಸನ್ನಿವೇಶದಲ್ಲಿ, ಮೆದುವಾದ ಧನಿಯಲ್ಲಿದಯೆ, ನ್ಯಾಯ, ತಾಳ್ಮೆ ಹಾಗೂ ಸುಧಾರಣೆಯ ಮಾತುಗಳನ್ನಾಡುವವರೂ ಇದ್ದಾರೆ. ಇಂತಹ ದನಿಯೊಂದನ್ನು ಪರಿಚಯಿಸುವ ಪ್ರಯತ್ನವೇ ಈ ಲೇಖನ. 2002ರ ಗುಜರಾತ್ ಹತ್ಯಾಕಾಂಡದ ನಂತರ ಅಹಮದಾಬಾದಿನ ಶಹ ಆಲಂ ನಿರಾಶ್ರಿತರ ಶಿಬಿರದಲ್ಲಿ ನಾನು ಭೇಟಿಯಾದ ಯುವಕ ಯೂಸೂಫ್ಮನ್ಸೂರಿಯ ಕಥನವನ್ನಿಲ್ಲಿ ನಿರೂಪಿಸಯತ್ತೇನೆ.
ಮುಕ್ಕಾಲುವಾಸಿ ಶ್ರಮಿಕ ವರ್ಗದವರೇ ಇದ್ದ ಅಹಮದಾಬಾದಿನ ನರೋದಾ ಪಟಿಯಾ ಪ್ರದೇಶದಲ್ಲಿ ಈತ ತನ್ನ ತಂದೆ, ತಾಯಿ ಹಾಗೂ ಮೂವರು ಸಹೋದರರೊಂದಿಗೆ ವಾಸವಾಗಿದ್ದ. ಯೂಸೂಫನ ತಂದೆ ರಾಜ್ಯರಸ್ತೆ ಸಾರಿಗೆ ಸಂಸ್ಥೆಯಲ್ಲಿ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಖಾಯಂ ಚಾಲಕರು ರಜೆಯಲ್ಲಿದ್ದಾಗ ಬಸ್ಗಳನ್ನು ಓಡಿಸುತ್ತಾ, ಉಳಿದಂತೆ ಕಸೂತಿ ಕೆಲಸ ಮಾಡುತ್ತಾ ಯುಸೂಫ್ಕುಟುಂಬಕ್ಕೆ ಆಸರೆಯಾಗಿದ್ದ. 2002ರ ಹತ್ಯಾಕಾಂಡದಲ್ಲಿ ಈತನ ಮನೆಯನ್ನುಸುಡಲಾಯಿತು. ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಇವನ ಕೆಲ ಹತ್ತಿರದ ಸಂಬಂಧಿಕರೂ ಸೇರಿದಂತೆ ನೂರಕ್ಕೂ ಹೆಚ್ಚು ಜನರನ್ನುಕೊಚ್ಚಿ ಹಾಕಲಾಯಿತು. ಮತ್ತೂ ಲೈಂಗಿಕ ಅತ್ಯಾಚಾರಗಳೂ ನಡೆದವು.
ಎಲ್ಲವನ್ನೂ ಕಳೆದುಕೊಂಡ ಯುಸೂಫನ ಸಂಸಾರ ಶಾಹ ಆಲಂ ದರ್ಗಾದಲ್ಲಿನ ನಿರಾಶ್ರಿತರ ಶಿಬಿರದಲ್ಲಿ ಬದುಕಿನ ಹೊಸ ಪ್ರಯಾಣವನ್ನು ಆರಂಭಿಸಿತು. ಅವನ ಕುಟುಂಬದಂತೆ 10 ಸಾವಿರಕ್ಕೂ ಹೆಚ್ಚಿನ ನಿರಾಶ್ರಿತರು ಈ ಶಿಬಿರದಲ್ಲಿ ಆಶ್ರಯಪಡೆದಿದ್ದರು. ತೊಟ್ಟ ಬಟ್ಟೆಗಳನ್ನು ಒಗೆದು ಹಾಕಿಕೊಳ್ಳಲಾಗದ, ಒಂದೇ ಶೌಚಾಲಯವನ್ನು 500 ಜನ ಬಳಸುತ್ತಿದ್ದ ಅಲ್ಲಿನ ಅಸಹನೀಯ ಬದುಕು ಯೂಸೂಫನ ನೆನಪಿನಲ್ಲಿ ಈಗಲೂ ಹಸಿಯಾಗಿದೆ.
ಯುಸೂಫ್ತನ್ನ ಸ್ನೇಹಿತರೊಂದಿಗೆ ಗೋರಿಗಳ ನಡುವಿನ ಖಾಲಿ ಜಾಗದಲ್ಲಿ ಶಿಬಿರದಲ್ಲಿದ್ದ ಮಕ್ಕಳಿಗೆ ಪಾಠ ಹೇಳಿಕೊಡುತ್ತಾ ಇದ್ದ ಹೊತ್ತಲ್ಲಿ ನನ್ನ ಮತ್ತು ಅವನ ಮೊದಲ ಭೇಟಿಯಾಯಿತು.ಶಾಂತಿ ಪುನರ್ ಸ್ಥಾಪಿಸುವ ನನ್ನಕಾರ್ಯಕ್ಕೆ ಸ್ವಯಂ ಸೇವಕರು ಬೇಕಿದ್ದಾಗ, ಯೂಸೂಫ್ ಸ್ವ ಪ್ರೇರಣೆಯಿಂದ ಈ ಕೆಲಸಕ್ಕೆ ಮುಂದೆ ಬಂದ. ಆರು ತಿಂಗಳ ನಂತರ ನಿರಾಶ್ರಿತರ ಶಿಬಿರಗಳನ್ನು ವಿಸರ್ಜಿಸಿದ ನಂತರ ನರೋದಾದ ಬೀದಿಗಳಲ್ಲಿ ನಾನು ಅವನೊಟ್ಟಿಗೆ ಅಲೆದಾಡಿದ್ದೇನೆ. ತಾನು ಕಂಡ ಹತ್ಯಾಕಾಂಡದ ಭಯಾನಕ ದೃಶ್ಯಗಳನ್ನು ಅವನು ವರ್ಣಿಸುತ್ತಿದ್ದಾಗ, ಅವನಿಗಾದ ಅನುಭವ ನನಗಾಗಿದ್ದರೆ ಕ್ಷಮೆಗೆ ನನ್ನೆದೆಯಲ್ಲಿ ಜಾಗವಿರುತ್ತಿತ್ತೇ? ಎಂದು ಅಚ್ಚರಿಪಟ್ಟದ್ದಿದೆ.

ನಿರಾಶ್ರಿತರ ಶಿಬಿರ ವಿಸರ್ಜಿಸಿದ ನಂತರ, ಯೂಸೂಫ್ಮತ್ತವನ ತಂದೆಯನ್ನು ಹಿಂದೂ ಒಬ್ಬನ ಕೊಲೆಗೈದ ಆರೋಪದ ಮೇಲೆ ಬಂಧಿಸಲಾಯಿತು. ಇದೊಂದು ನರೋದ ಹತ್ಯಾಕಾಂಡದ ಸಾಕ್ಷಿಗಳನ್ನು ಬೆದರಿಸುವ ತಂತ್ರವಾಗಿತ್ತು. ಸಬರಮತಿ ಜೈಲಿನಲ್ಲಿ ಈತ ಮೂರು ತಿಂಗಳು ಕೊಳೆಯಬೇಕಾಯಿತು. ಈ ಕಹಿ ಘಟನೆ ನನ್ನ ಸ್ನೇಹಿತನ ಮನಸನ್ನು ಎಷ್ಟು ಕಹಿಯಾಗಿಸಿರಬಹುದು ಎಂದು ಯೋಚಿಸಿ ನಾನು ಕಳವಳಪಟ್ಟಿದ್ದಿದೆ.

ಜಾಮೀನಿನ ಮೇಲೆ ಹೊರಬಂದ ನಂತರವೂ ಈತ ಉತ್ಸಾಹ ಹಾಗೂ ಆತ್ಮವಿಶ್ವಾಸದ ಚಿಲುಮೆಯಂತಿದ್ದ. ಆತನ ತಂದೆಯನ್ನುಜೈಲಿಗೆ ಹಾಕಿದ್ದು ಅವನನ್ನು ಘಾಸಿಗೊಳಿಸಿತ್ತು.’ಮಗ  ವರ್ಷಾಂತರಗಳ ಹಿಂದೆ ಈ ಜೈಲಿನಲ್ಲಿ ಯಾರಿದ್ದರು ಗೊತ್ತೇ? ಮಹಾತ್ಮಾಗಾಂಧಿ. ಅವರೇ ಇಲ್ಲಿದ್ದರು ಎಂದಾಗ, ನನ್ನದು ನಿನ್ನದು ಯಾವ ಲೆಕ್ಕವಯ್ಯ’ಎಂದು ಅಪ್ಪ ಸಂತೈಸುತ್ತಿದ್ದರು.
ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ನಾಲ್ಕು ವರ್ಷಗಳ ಕಾಲ ಪ್ರತಿ ತಿಂಗಳು ತಂದೆ ಮಗ ಇಬ್ಬರು ವಿಚಾರಣೆಗೆ ನ್ಯಾಯಾಲಯಗಳಿಗೆ ಹಾಜರಾಗಿದ್ದಾರೆ. ಈ ಪ್ರಕರಣದಎಲ್ಲಾ ಆರೋಪಿಗಳು ಖುಲಾಸೆಯಾದರು. ಒಂದೆರಡು ವರ್ಷ ಯೂಸೂಫ್ ‘ಅಮನ್ಪಥಿಕ್’ನಾಗಿ (ಶಾಂತಿ ಸೌಹಾರ್ದತೆ ಪ್ರೇರಕ) ದುಡಿದ. ಆಗ ಯೂಸೂಫ್ ಒಂದು ಮಗುವಿನ ತಂದೆಯಾಗಿದ್ದ. ಕುಟುಂಬ ನಿರ್ವಹಣೆಗೆ ಬಸ್ ಡ್ರೈವರ್ ಕೆಲಸ ಮಾಡುತ್ತಿದ್ದ.
ಡ್ರೈವರ್ ಕೆಲಸ ಮಾಡುತ್ತಲೇ ಅವನು ಕಾನೂನು ವಿದ್ಯಾಭ್ಯಾಸಕ್ಕೆ ಸೇರಿದ. ಮೊದಲ ವರ್ಷದ ಕಾನೂನು ಪದವಿ ಪರೀಕ್ಷೆಯ ಫಲಿತಾಂಶ ಬಂದಾಗ ನನಗೆ ಕರೆ ಮಾಡಿ ‘ಶೇ.57 ಅಂಕಗಳೊಂದಿಗೆ ತೇರ್ಗಡೆಯಾಗಿದ್ದೇನೆ’ಎಂದು ಹೆಮ್ಮೆಯಿಂದ ಹೇಳಿದ.
ಉತ್ತಮ ಅಂಕಗಳೊಂದಿಗೆ ಪದವಿ ಮುಗಿಸಿದ ನಂತರ ವಕೀಲನಾದ. 2012ರ ಬೇಸಿಗೆಯಲ್ಲಿ ಅಸ್ಸಾಂನಲ್ಲಿ ಕೋಮುಗಲಭೆಯಾದಾಗ ನಮಗೆ ನಿರಾಶ್ರಿತರ ಶಿಬಿರಗಳಲ್ಲಿ ಕೆಲಸ ಮಾಡಲು ಸ್ವಯಂ ಪ್ರೇರಕರು ಬೇಕಿದ್ದರು. ಯೂಸೂಫ್ ನಮ್ಮ’ಅಮನ್ಬಿರಾದರಿ’ ಸ್ವಯಂಸೇವಕರ ತಂಡವನ್ನು ಸೇರಿ ಗುಜರಾತ್, ದೆಹಲಿ, ಹೈದರಾಬಾದ್ನ ಯುವಕರೊಡನೆ ನಿರಾಶ್ರಿತರ ಶಿಬಿರಗಳಲ್ಲಿ ದುಡಿದ. ಅಮನ್ ಬಿರಾದರಿಯ ನಿಯಮಗಳ ಪ್ರಕಾರ ಬೋಡೋ ಸ್ವಯಂ ಸೇವಕರು ಮುಸ್ಲಿಂ ಶಿಬಿರಗಳಲ್ಲಿಯೂ ಹಾಗೂ ಮುಸ್ಲಿಂ ಸ್ವಯಂ ಸೇವಕರು ಬೋಡೋ ನಿರಾಶ್ರಿತರ ಶಿಬಿರಗಳಲ್ಲಿ ದುಡಿಯಬೇಕಿತ್ತು. ಹಿಂಸಾಚಾರದ ನಂತರ ಜನಾಂಗೀಯ ದೃವೀಕರಣವಾಗಿದ್ದ ಅಸ್ಸಾಂನಲ್ಲಿ ಇದು ಅಸಾಧ್ಯ ಎಂಬುದು ಎಲ್ಲರ ನಂಬಿಕೆಯಾಗಿತ್ತು. ಆದರೆ, ಯೂಸೂಫ್ ಇದನ್ನುಅಸಾಧ್ಯವಾದುದನ್ನು ಸ್ಯಾಧ್ಯ ಮಾಡಿ ತೋರಿಸಿದ. ಬೋಡೋ ಕ್ಯಾಂಪ್ನಲ್ಲಿ ಕಾರ್ಯ ನಿರ್ವಹಿಸಲು ಅವನು ಮುಂದೆ ಬಂದ. ಶಿಬಿರ ವಾಸಿಗಳಿಗೆ ತಾನೊಬ್ಬ ಮುಸ್ಲಿಂ ಎಂದು ಹೇಳಿಕೊಂಡ. ಆತನ ವಿರುದ್ಧ ಅವರು ಆಕ್ರೋಶಗೊಂಡು ತಮ್ಮ ಮನೆಗಳ ಮೇಲೆ ದಾಳಿ ಮಾಡಿದ ಮುಸ್ಲಿಂರನ್ನು ತಾಸುಗಟ್ಟಲೆ ನಿಂದಿಸಿದರು. ಯುಸೂಫ್ ಅವರ ಕಣ್ಣಲ್ಲಿ ಕಣ್ಣಿಟ್ಟು ಅಚಲನಾಗಿ ಹೇಳಿದ – ‘ನಾನು ನಿಮ್ಮ ಸೇವೆ ಮಾಡುವುದನ್ನು ನೀವು ತಡೆಯಲಾರಿರಿ’.
ನಂತರ ನಿರಾಶ್ರಿತರು ಅವನನ್ನು ಒಪ್ಪಿಕೊಂಡು ಅವನಿಗೆ ಹಾಸಿಗೆ ಹಾಗೂ ಆಹಾರ ಕೊಟ್ಟರು.ಆ ಶಿಬಿರದ ನಿರಾಶ್ರಿತರು ಹಾಗೂ ಅವರ ಮುಸ್ಲಿಂ ನೆರೆಕರೆಯವರೊಂದಿಗೆ ಆತ ಶಾಂತಿ ಸಭೆಗಳನ್ನು ಏರ್ಪಡಿಸಿದ. ಶಾಂತಿ ಸಭೆಗಳಲ್ಲಿ ಒಂದಿಷ್ಟೊತ್ತು ಮೌನ, ಅಳು ನಂತರ ಶಾಂತಿ ಬಗೆಗಿನ ಎರಡು ಸಮುದಾಯದವರತುಡಿತ ಪ್ರಕಟವಾಗುತ್ತಿದ್ದವು.
ಅಹಮದಬಾದಿನ ನರೋದಪಟಿಯಾ ಪ್ರಕರಣದ ಮುಖ್ಯ ಸಾಕ್ಷಿಯಾಗಿದ್ದಯೂಸೂಫ್ ವಷರ್ಾನುಗಟ್ಟಲೆ ವಿಚಾರಣೆಗಳಿಗೆ ತಪ್ಪದೆ ಹಾಜರಾಗುತ್ತಿದ್ದ.ಮಾಜಿ ಸಚಿವೆ ಮಯಾಕೊಡ್ನಾನಿ ಹಾಗೂ ಇತರರಿಗೆ ಶಿಕ್ಷೆ ಪ್ರಕಟವಾದ ದಿನ ನಾನವನಿಗೆ ಕರೆ ಮಾಡಿ ಕೇಳಿದೆ-‘ಹೇಗನಿಸುತ್ತಿದೆ.’ಅವನೆಂದ-‘ಸತ್ಯಕ್ಕೆಜಯವಾಗಿದೆ.ನ್ಯಾಯ ಹಾಗೂ ಪ್ರಜಾಪ್ರಭುತ್ವಗಳಲ್ಲಿನ ನನ್ನ ನಂಬಿಕೆ ಗಟ್ಟಿಯಾಗಿದೆ.ನ್ಯಾಯಾಧೀಶರಾದಜೋಸ್ನಾ ಬೆನ್ಯಾಗ್ನಿಕ್ ನ್ಯಾಯವನ್ನುಎತ್ತಿ ಹಿಡಿದಿದ್ದಾರೆ.’
ಪ್ರಕರಣದಲ್ಲಿಜೀವಾವಧಿ ಶಿಕ್ಷೆಯಾದವರನ್ನು ಪೊಲೀಸರು ಎಳೆದೊಯ್ಯುವಾಗ ರೋಧಿಸುತ್ತಿದ್ದಅವರ ಮಕ್ಕಳನ್ನು ಇವನುಕಂಡಿದ್ದಾನೆ. ದಶಕಗಳ ಹಿಂದೆ ನರೋದಪಟಿಯಾ ಹತ್ಯಾಕಾಂಡದಲ್ಲಿಅನಾಥರಾಗಿದ್ದ ಮಕ್ಕಳ ನೆನಪಾಗಿ ‘ಅಪ್ಪಂದಿರಷ್ಟೇತಪ್ಪಿತಸ್ಥರು, ಮಕ್ಕಳಲ್ಲ. ನ್ಯಾಯಾಧೀಶರಲ್ಲಿ ಪ್ರಾಥರ್ಿಸೋಣ ಎನಿಸುತ್ತದೆ…..’ಎನ್ನುತ್ತಾನೆಯುಸೂಫ್.ತನ್ನವರನ್ನು ಹತ್ಯೆಗೈದ ಮಂದಿಯನ್ನು ಬಿಡುಗಡೆ ಮಾಡಿ ಎಂದು ಪ್ರಾಥರ್ಿಸೋಣ ಎಂದು ಇವನಿಗನ್ನಿಸುತ್ತಿದೆ.
ಮೂಲ-ಹರ್ಷಮಂದರ್
ಅನುವಾದ -ವಿರೇಂದ್ರ ಪಿ.ಎಮ್
 
 
 

‍ಲೇಖಕರು G

November 15, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: