ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಬ್ಬಕ್ಕೆ ಹಳೇ ಹುಡುಗಿ ಬರುತಾಳೋ, ಮಗನಿಗೆ ನಿನ್ನ ಹೆಸರಿಟ್ಟಾಳೋ..

 

ಯೋಗರಾಜ್ ಭಟ್

ಹುಟ್ಟಿದ ಊರನು ಬಿಟ್ಟು ಬಂದ ಮೇಲೆ
ಇನ್ನೇನು ಬಿಡುವುದು ಬಾಕಿ ಇದೆ..?
ಮಾಡೋದೆಲ್ಲಾ ಮಾಡಿ ಅಳಬ್ಯಾಡ ಪರದೇಸಿ
ಎದ್ದೇಳು ಕೊನೆ ಬಸ್ಸು ಟೈಮಾಗಿದೆ..!
ಊರ ದಿಕ್ಕಿನ ಗಾಳಿ ತಂದಿದೆ ಒಂದು ಕಾಣದ ಕೂಗನ್ನು,
ತವರಿಗಿಂತ ಬೆಚ್ಚನೆ ಜಾಗ ಹೇಳು ಎಲ್ಲಿದೆ ನಿಂಗಿನ್ನೂ..?
ನಿಂಗಿದೂ ಬೇಕಿತ್ತಾ ಮಗನೇ?
ವಾಪಸ್ಸು ಹೊಂಟ್ಹೋಗು ಶಿವನೇ!
ಬ್ಯಾಗು ಹಿಡೀ ಸೀದಾ ನಡಿ, ಬೋರ್ಡು ನೋಡಿ ಬಸ್ಸು ಹಿಡಿ..

ಬ್ಯಾರೆಲ್ಲೆ ಇದ್ದರೂ ಇದ್ದು ಸತ್ತಂಗೆ, ಊರಲ್ಲೇ ನಿನ್ನ ಉಸಿರಿದೆ..
ನಿನ್ನೂರ ನಡುವಿನ ಆಲದ ಮರದಲಿ ನೀ ಕೆತ್ತಿ ಬಂದ ಹೆಸರಿದೆ..
ಕಿತ್ಹೋದ ಕಾಸಿಗೆ ಕಿತ್ತಾಡೋ ಕೀರ್ತಿಗೆ ಹೈವೇಲಿ ಲಾರಿ ಹಿಡಿದು ನೀ ಬಂದೆ,
ಪಟ್ಟಣಕೆ ಬಂದು ಸಗಣಿಯ ಮ್ಯಾಲಿನ ಸಂಕ್ರಾತಿ ಹೂವಿನಂತೆ ನೀನಾದೆ..!

ಹಬ್ಬಕ್ಕೆ ಹಳೇ ಹುಡುಗಿ ಬರುತಾಳೋ, ಮಗನಿಗೆ ನಿನ್ನ ಹೆಸರಿಟ್ಟಾಳೋ..
ಈ ಬಾರಿ ಒಳ್ಳೆ ಫಸಲಂತೇ, ಅತ್ತಿಗೆ ತಿರುಗಾ ಬಸಿರಂತೇ.,
ನಿಮ್ ಮಾವ ಎಲೆಕ್ಷನ್ ಗೆದ್ನಂತೇ, ದೊಡ್ಡಪ್ಪ ಸಿಗರೇಟ್ ಬಿಟ್ನಂತೆ.,
ಅತ್ತೆಯ ಮಗಳು ಓದ್ತಾಳೋ, ಆಗಾಗ ನಿನ್ನ ನಂಬರ್ ಕೇಳ್ತಾಳೋ.,
ನಿಂಗೂ ಡಿಮ್ಯಾಂಡಿದೇ ಮಗನೇ, ವಾಪಸ್ಸು ಹೊಂಟ್ಹೋಗು ಶಿವನೇ..!
ಬ್ಯಾಗು ಹಿಡೀ ಸೀದಾ ನಡಿ, ಬೋರ್ಡು ನೋಡೀ ಬಸ್ಸು ಹಿಡಿ!

ಇದ್ದಕ್ಕಿದಂತೆ ಏನೇನೋ ಅನ್ನಿಸಿ ಕಣ್ಣು ತುಂಬಿ ಕೊಳ್ಳೋದ್ಯಾಕೆ?
ಅಪ್ಪ ಅಮ್ಮ ಇಬ್ಬ್ರೂ ಹತ್ರ ಕುಂತುಕೊಂಡು ಅಳಬ್ಯಾಡ ಅಂದಂಗಾಗೊದ್ಯಾಕೆ?
ದಿಕ್ಕುಗೆಟ್ಟವನು ಕಾಲಿದ್ದು ಹೆಳವ, ಎತ್ಲಾಗೆ ಹೋದರೂ ಒಂದೇ ನೀನೂ..
ಎಲ್ಲಿಂದ ಬಂದೆಯೋ ಅಲ್ಲೇ ಹುಡುಕಾಡು, ದುರ್ಬಿನು ಹಾಕಿಕೊಂಡು ನಿನ್ನೇ ನೀನು..!

ಚಡ್ಡಿ ದೋಸ್ತ್ರೆಲ್ಲಾ ನಿನ್ನಾ ಬೈತಾರೆ, ಪಕ್ಕದ ಮನೆ ಹುಡುಗಿ ಕಾಯ್ತಾಳೆ.,
ಕಲಿಸಿದ ಮೇಷ್ಟ್ರು ಹೋಗ್ಬಿಟ್ರೂ, ಮತ್ತಜ್ಜನ ಮನೆ ಮಾರ್ಬಿಟ್ರೂ.,
ತಂಗಿಯ ಗಂಡ ಲಾಸಾಗೋದಾ, ಅಣ್ಣನ್ಗೆ ಖಾಯಿಲೆ ಮೊನ್ನೆಯಿಂದಾ.,
ಅಪ್ಪನ್ಗೆ ಉಸಿರೇ ಸಾಕಾಗಿದೆ, ಅವ್ವನ್ಗೆ ನೆನಪೇ ನಿಂತ್ಹೋಗಿದೆ.,
ಕಂಡಿಸನ್ ಹಿಂಗಿದೇ ಮಗನೇ, ವಾಪಸ್ಸು ಹೊಂಟ್ಹೋಗು ಶಿವನೇ..!
ಬ್ಯಾಗು ಹಿಡೀ ಸೀದಾ ನಡಿ, ಬೋರ್ಡು ನೋಡೀ ಬಸ್ಸು ಹಿಡಿ..!

‍ಲೇಖಕರು admin

23 December, 2015

5 Comments

  1. Ajit

    Good One…. Y Bhat signature styled 🙂

  2. Neeta S Rao

    ಹಾಡು ಸಖತ್ತಾಗಿದೆ. ಯೊಗರಾಜ ಭಟ್ರು ಬರೆದದ್ದು ಅಂತ ಯಾಕೋ ಅನಿಸಿಯೇ ಇರಲಿಲ್ಲ. ಪಕ್ಕಾ ಜಾನಪದ ಹಾಡಿನಲ್ಲಿ ಬರೆದಿದ್ದಾರೆ, ಒಂದೂ ಇಂಗ್ಲೀಷ ಶಬ್ದ ಹಾಕದೆ!

    • Neeta S Rao

      ಪಕ್ಕಾ ಜಾನಪದ ಹಾಡಿನ ಶೈಲಿಯಲ್ಲಿ ಬರೆದಿದ್ದಾರೆ ಅಂತ ಓದಕೊಳ್ಳಿ ಪ್ಲೀಜ್.

  3. Teju

    Thanks bhatre for one more hit song 🙂

  4. B manjunath

    Super sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading