ಹನೇಹಳ್ಳಿಯ ಬ್ರಹ್ಮ ಹೋದದ್ದೆಲ್ಲಿಗೆ?

ಹನೇಹಳ್ಳಿಯ ಬ್ರಹ್ಮ ಇನ್ನಿಲ್ಲ. ..

೪೦ ದಿನಗಳ ಹಿಂದೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಚಿತ್ತಾಲರು ಇನ್ನಿಲ್ಲ.  ಅವರಿಗೆ ೮೬ ವರ್ಷ ವಯಸ್ಸಾಗಿತ್ತು.  ’ಶಿಖಾರಿ’, ’ಛೇದ’, ’ಓಡಿಹೋದ ಮುಟ್ಟಿಬಂದ ಬರೆದ’, ನಮ್ಮೊಳಗೆ ಹನೇಹಳ್ಳಿಯನ್ನು ಕಟ್ಟಿಕೊಟ್ಟ ಚಿತ್ತಾಲರು ಹೋದದ್ದೆಲ್ಲಿಗೆ….

ಚಿತ್ತಾಲರನ್ನು ನೋಡಿ ಬಂದು ಬಿ ಎಂ ಬಶೀರರು ಬರೆದ ಕವನ ನಿಮಗಾಗಿ :

ಚಿತ್ತಾಲರ ಜೊತೆ ಸಂಜೆ…


….ಕೇಳಿದರು
ಎಲ್ಲಿಂದ ಬಂದೆ?
ನಿಮ್ಮೆದೆಯಿಂದ
ಎಂದೆ
 
ದಿನವಿಡೀ ದುಡಿದು
ಬಳಲಿದ ಶಹರದಂತೆ ಒರಗಿದರು
ಆ ಸೋಫಾದಲ್ಲಿ
ಕೇಳಿದೆ ಇಲ್ಲಿ
ಯಾವ ಒಳದಾರಿಯಲ್ಲಿ ನಡೆದರೆ
ಹನೇಹಳ್ಳಿ?
ಅಲ್ಲಲ್ಲಿ ಬಿತ್ತಿ
ಬೆಳೆಸಿದ ವೌನ-
ದ ಗಿಡದಲ್ಲಿ ಮಾತು
ಚಿಗುರುವ ಹೊತ್ತು
ಅಸಂಖ್ಯ ಬೋಗಿಗಳನ್ನು ಹೊತ್ತ
ಗಾಡಿಯೊಂದು
ದೀಪದ ಸನ್ನೆಗಾಗಿ ಕಾಯುತ್ತಿತ್ತು!
ತೆರೆದ ಬಾಲ್ಕನಿಯಾಚನೆ
ಶಹರವನ್ನು ಆಳುವ ಕಡಲು
ಬೀಸುವ ಗಾಳಿಗೆ
ಪಟಪಟನೆ ಬಡಿದುಕೊಳ್ಳುವ ಅದರ
ರಕ್ತವರ್ಣದ ಸೆರಗು
ತೆಕ್ಕೆಯಲ್ಲಿ ಅಧರಕ್ಕೆ ಅಧರ
ಒತ್ತೆ ಇಟ್ಟವರು!
ಇಬ್ಬರೆಂದರೆ ಬರೇ ಇಬ್ಬರು
ನಾನು ಮತ್ತು ಅವರು
ಹಾಯಿ ದೋಣಿಯಂತೆ ತೇಲುತ್ತಿರುವ
ಕತೆಯ ಸಾಲೊಂದನ್ನು
ಏರಿ ಕುಳಿತಿದ್ದೇವೆ…
ಮೊರೆವ ಎದೆಯೊಳಗೆ
ಭೋರ್ಗರೆವ ಅಕ್ಷರದ ಕಡಲು
ಕತೆಗಾರ ನನ್ನ ಪಕ್ಕದಲ್ಲೇ ಅಂಬಿಗನಂತೆ
ಹುಟ್ಟು ಹಾಕುತ್ತಿರುವಾಗ
ನನಗೇಕೆ ಮುಳುಗುವ ಚಿಂತೆ…?
 

‍ಲೇಖಕರು G

March 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ahalyaballal

    ……..ಕತೆಗಾರ ನನ್ನ ಪಕ್ಕದಲ್ಲೇ ಅಂಬಿಗನಂತೆ
    ಹುಟ್ಟು ಹಾಕುತ್ತಿರುವಾಗ……..

    ಪ್ರತಿಕ್ರಿಯೆ
  2. Anantharamesh

    ಯಶನೆ, ಹ್ರದಯವಂತನೆ, ಚಿತ್ತ ಆಲದಮರವೆ
    ಹರಡುವುದು ಸಾರಸ್ವತದಾಕಾಶದಗಲ ಕತೆ ಕಥನ ಗೊಂಚಲು
    ಏಕೆಂದರೆ, ನೀವು ಹೋಗಿರುವುದೀಗ ಅದರ ಆಳ ಬೇರಾಗಿ ಮತ್ತೆ ಬಿಳಲಾಗಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: