–ಸುರೇಶ ತಂಗೋಡ
ಪ್ರೀತಿಯ ವ್ಯಾಲಿಡಿಟಿ
ಹದಿಹರೆಯದ ತವಕ ತಲ್ಲಣಗಳಿಗೆ
ಮೋಹಕತೆ, ಸೆಳೆತಕ್ಕೆ
ಹೆಸರಿಟ್ಟರು “ಪ್ರೀತಿ“.
ಕೈ ಕೈ ಹಿಡಿದು
ಸುತ್ತಾಡುವಾಗ
ಅಪ್ಪನ ಕೈ ನೆನಪೆ ಆಗಲಿಲ್ಲ.
ಈಗವನಷ್ಟೇ ಜಗತ್ತು!.
ನೂರು ವರ್ಷ, ಏಳೇಳು ಜನ್ಮ
ನಾ ನಿನಗೆ, ನೀ ಎನಗೆ
ಎಂದವರಿಗೆ
ಇಬ್ಬರ ಸಂಬಂಧವು ಹಳಸಿದಂತೆ ಭಾವ.
ಅವನಿಗೆ ಅವಳು
ಅವಳಿಗೆ ಅವನೇ ಉಸಿರು.
ಆ ಉಸಿರೇ ನಿಲ್ಲುವುದೆಂದರೆ?
ಪ್ರೀತಿಗೆ ವ್ಯಾಲಿಡಿಟಿ ಇದೆಯೇ?.
ಯಕ್ಷಪ್ರಶ್ನೆಗೆ ಉತ್ತರವೆಲ್ಲಿ!






0 Comments