ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲಿ ಹುಡುಕಲಿ ತಾಯಿ ಹೆಣ್ಣು ಮಗಳ?

-ಶ್ವೇತಾ. ಎಂ ಯು

ಎಲ್ಲಿ ಹುಡುಕಲಿ ತಾಯಿ…!

ಲಕ್ಷ್ಮಿ, ಸರಸ್ವತಿ, ಪಾರ್ವತಿ
ಸ್ವರ್ಗವನ್ನೇ ಸೃಷ್ಟಿಸುವ, ಅಮೃತ ವಾಕ್ಯಗಳು
ತಾಯಿ, ತಂಗಿ, ಅಕ್ಕ, ಅವ್ವ
ಅಬ್ಬಬ್ಬಾ !
ನೀರಿಗೆ, ಭೂಮಿಗೆ, ದೇಶಕ್ಕೆ
ಎಲ್ಲಕ್ಕೂ ಹೆಣ್ಣಿನ ಹೆಸರು !
ಹೆಸರು ಮಾತ್ರ ಹೆಣ್ಣಿಗೆ
ಅಷ್ಟೇ ಉಳಿದಿರುವುದು
ಎಷ್ಟೊಂದು ಛದ್ಮ ವೇಷಗಳ ನಡುವೆ
ಎಲ್ಲಿ ಹುಡುಕಲಿ ತಾಯಿ
ಹೆಣ್ಣು ಮಗಳ ?

ದಸರಾ, ದೀಪಾವಳಿ, ಸಂಕ್ರಾಂತಿ, ಯುಗಾದಿ
ಎಲ್ಲಾ ಹಬ್ಬಗಳಲ್ಲೂ
ಹೆಣ್ಣಿಗೆ ಪೂಜೆ
ಹಳೆಮನೆ, ಗುಡಿಸಲು, ಅರಮನೆಯಲಿ
ಅವಿರತ ದುಡಿವ ಹೆಣ್ಣು ಬರೇ ಕೆಲಸದವಳು
ಹೆಸರಿಲ್ಲ ಅವಳಿಗೆ

ಪೂಜಿಸುವುದು ಬೇಡ ಕೊನೆ ಪಕ್ಷ
ಮರ್ಯಾದೆಯ ಮೊಹರಿಲ್ಲ
ಆಧುನಿಕರು ಸಮಾನತೆಯ ವಾರಸುದಾರರು
ಆಫೀಸು , ಮೆಟ್ರೋ, ಮನೆ, ಹೀಗೆ
ಎಲ್ಲೆಲ್ಲೂ ಅವಳೇ ಚಾಲಕಳು
ಅವಳ ಬದುಕಿಗಿಲ್ಲ ಚಾಲನೆ
ಇಷ್ಟೊಂದು ಛದ್ಮ ವೇಷಗಳ ನಡುವೆ
ಎಲ್ಲಿ ಹುಡುಕಲಿ ತಾಯಿ ಹೆಣ್ಣು ಮಗಳ?

ಪೊಲೀಸು, ಇಂಜಿನಿಯರ್, ಶಿಕ್ಷಕಿ
ಪಾಲಿಸಿಸುವ ಕೆಲಸದಲ್ಲೂ ಅವಳೇ
ಅಲ್ಲಿಯೂ ಅವಳ ಮಾತು ಪಾಲಿಸುವವರಿಲ್ಲ
ಪಂಚಾಯ್ತಿ ಅಧ್ಯಕ್ಷಳು
ರಾಷ್ಟ್ರಪತಿ ಗೌರವವೂ
ನಾಮಕಾವಾಸ್ಥೆ
ಅಧಿಕಾರ ನಡೆಸಲು ಬಿಡುವರೇ ?

ರೂಪಕ್ಕೆ ಕೈಮುಗಿದು ಸ್ವರೂಪವ ನುಂಗುವ
ರಕ್ತಭೀಜರ ದಮನಮಾಡುವುದು ಹೇಗೆ?
ಕಣ್ಣಿಗೆ ಕಾಣುತ್ತಾರೆ ಹಣವ ಹೊದ್ದು ಮಲಗಿ
ಮರ್ಯಾದಸ್ತರಾಗುತ್ತಾರೆ
ಇಷ್ಟೊಂದು ಛದ್ಮ ವೇಷಗಳ ನಡುವೆ
ಎಲ್ಲಿ ಹುಡುಕಲಿ ತಾಯಿ ಹೆಣ್ಣು ಮಗಳ?

ಮಾತುಗಳ ನಂಬುವ ಮನಸುಗಳಿಗೆ
ಕತ್ತರಿಸುವ ಕೆಲಸ ಕಲಿಸಿ
ಮಲ್ಲಿಗೆಯ ಮುಲಾಮು ಹಚ್ಚುವ
ಜಾಣರ ಸಂತೆಯಲ್ಲಿ
ಅಕ್ಕ, ಅಣ್ಣ ಬಸವಣ್ಣರ ಮಾತುಗಳ ಅನುಸರಿಸಿ
ದೊಡ್ಡ ದೊಡ್ಡ ಭಾಷಣ ಮಾಡುತ್ತಾರೆ
ಅವರ ಮನೆಯ ಹೆಣ್ಣುಗಳು ನಮ್ಮ ಜಾತಿಯವರೇ ಅಲ್ಲವೇ
ಹೆಣ್ಣಿಗೆ, ಹೆಣ್ತನಕ್ಕೆ ಜಾತಿ ಧರ್ಮದ ಹಂಗಿಲ್ಲ
ನೋಟದಲ್ಲಿ ಕತ್ತರಿಸಿ ನಾಲಗೆಯಲ್ಲಿ ಒಲಿಯುವ
ಇಷ್ಟೊಂದು ಛದ್ಮ ವೇಷಗಳ ನಡುವೆ
ಎಲ್ಲಿ ಹುಡುಕಲಿ ತಾಯಿ ನಿನ್ನ ಹೆಣ್ಣು ಮಕ್ಕಳಾ ?

.

‍ಲೇಖಕರು Admin

26 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading