– ಶ್ರೀನಿವಾಸ ಎಂ

1
ಹಗಲನ್ನೂ ನಾಚಿಸುತ್ತದೆ
ಬೀದಿ ದೀಪಗಳ ಬೆಳಕು
ಸಾಲಿನ ಕೊನೆಯಲ್ಲಿ ಮಬ್ಬುಗತ್ತಲು!
2
ಇರುಳು ಆವರಿಸಿದಾಗಲೆಲ್ಲ
ರಸ್ತೆ ತುಂಬ ಗದ್ದಲ…ಗುರುತುಗಳಿಲ್ಲದ
ಜೀವಗಳ ಮೆರವಣಿಗೆ…
ಕತ್ತಲಲೂ ಮುಖಕೆ ದಪ್ಪ ಕಪ್ಪು ಪಟ್ಟಿ.
3
ಜನಜಾತ್ರೆಯ ತುಂಬೆಲ್ಲಾ
ಅದೇನೋ ಹುಡುಕಾಟ
ಗೊತ್ತು ಗುರಿಗಳಿಲ್ಲದ ಕಡೆ
ಅಲೆದಾಟ…ಸವೆದ ದಾರಿಗಳ ಖುಷಿ
4
ಮತ್ತದೆ ಹಗಲು!
ಹೊಸ ನಾಟಕ-ಅದೇ ಪಾತ್ರಧಾರಿಗಳು
ಬೆಳಕಿನ ಮಧ್ಯೆ ಮಿನುಗುವ
ನೂರಾರು ಮುಖವಾಡಗಳು
5
ಸಂಜೆಗೆ ಕಾಯುತ್ತೇನೆ
ಮುಖವಾಡಗಳೆಲ್ಲಾ ಮರೆಯಾಗುವ
ಕ್ಷಣಕೆ ಸಾಲು ದೀಪಗಳ ಬೆಳಕಿನಲ್ಲಿ
ಪರಿಚಿತ ಮುಖಗಳ ಹುಡುಕಾಟದ ಭ್ರಮೆ…





arthpurNa kavitegaLu..