ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಕ್ಕಿ ಹಾರುತಿದೆ..

ಡಾ ಡಿ ಟಿ ಕೃಷ್ಣಮೂರ್ತಿ

ಬೆರಳಷ್ಟೇ ಗಾತ್ರದ

ಹಸಿರು ಪುಟ್ಟ ಹಕ್ಕಿ!!

ನುಗ್ಗೆ ಮರದ ಹೂವಿಗೆ

ಲಗ್ಗೆ……… ಹಾಕಿದೆ!!

ನುಗ್ಗೆ ಮರಕ್ಕೋ ರೋಮಾಂಚನ!!

ರೆಂಬೆ ರೆಂಬೆಗೂ ಹಸಿರು ಹುಚ್ಚು!!

ಪಕ್ಕದ ಗುಲ್ಮೊಹರಿಗೆ,

ಮೈ ತುಂಬಾ ಕೆಂಪು ಕಿಚ್ಚು !!

ಗಾಳಿಯಲ್ಲೇ ರೆಕ್ಕೆ ಬಡಿದು,

ಮಧುವ ಹೀರಿದ ಮತ್ತಿನಲ್ಲಿ

ಅಲ್ಲೇ ಒಂದರೆ ಕ್ಷಣ ,

ತೇಲಾಡುವ ತ್ರಿಶಂಕು!!!

ಮತ್ತೆ ಮರದ ಮೇಲೆ

ಗತ್ತಿನಿಂದ ಕತ್ತು ಕೊಂಕಿಸಿ,

ಪುಚ್ಚಗಳ ತಿದ್ದಿ ತೀಡಿ,

ಅತ್ತಿತ್ತ ತಿರುಗಿ ….,

ಚುಂಚದಲ್ಲೊಂದು ಹೂವ ಹಿಡಿದು,

ಪುರ್ರನೆ ಹಾರಿತ್ತು !!!

ಪ್ರೇಯಸಿಯ ಹುಡುಕುತ್ತಾ !!!

]]>

‍ಲೇಖಕರು G

10 September, 2012

3 Comments

  1. umesh desai

    good one sir, chennagide nimm kalpane/kavite

  2. Badarinath Palavalli

    ಮಧುರಾನುಭೂತಿ ತೆರೆದಿಟ್ಟ ಕವನ. ಹಗುರವಾಯಿತು ನನ್ನ ಮನಸು. ಯಾಕೆಂದರೆ ಮುಖ್ಯವಾಗಿ ನೀವೂ ಹಗುರವಾದಿರಿ.
    ಅಮೋಘ ಕಲ್ಪನೆಯ ಕವನ. ಸೂಪರ್. ಸೂಪರ್.

  3. shanthi k.a.

    very nice sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading