ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಕ್ಕಿನ ಲೆಕ್ಕವ ತಿಳಿಸಿದ ಗುರುವೆ, ಮುಚ್ಚಿದ ಬಾಯಿಗೆ ಸಿಕ್ಕಿದ ಸ್ವರವೆ…

ನಿನ್ನ ಹೆಸರಿಟ್ಟುಕೊಂಡೆವು ಮಂಡೇಲ

ರಮೇಶ ಅರೋಲಿ


ಆಕಾಶಕ್ಕೆ ನೆಟ್ಟ ಬೇಲಿಯ ಕಿತ್ತಿ
ಕಡುಗಪ್ಪು ಕೈಯಿಲೆ ಬೆಳಕನು ಬಿತ್ತಿ
ಮಬ್ಬುಗತ್ತಲಿಗೆ ಮಂಡೇಲ
ನಿನ್ನ ಹೆಸರಿಟ್ಟುಕೊಂಡೆವು ಮಂಡೇಲ
 
ಗೆರಿಲ್ಲ ಯುದ್ಧವೆ ಮದ್ದೆಂದಿ
ಸಾವಿಗು ಸುಮ್ಮನೆ ಬರನೆಂದಿ
ಸೆರೆಮನೆಯೆಲ್ಲಾ ಮಂಡೇಲ
ನಿನ್ನ ಹೆಸರಿಟ್ಟುಕೊಂಡವು ಮಂಡೇಲ
 
ಹಕ್ಕಿನ ಲೆಕ್ಕವ ತಿಳಿಸಿದ ಗುರುವೆ
ಮುಚ್ಚಿದ ಬಾಯಿಗೆ ಸಿಕ್ಕಿದ ಸ್ವರವೆ
ಹುಟ್ಟುವ ಹಕ್ಕಿಗು ಮಂಡೇಲ
ನಿನ್ನ ಹೆಸರಿಟ್ಟುಕೊಂಡೆವು ಮಂಡೇಲ
 
ಬಂಧಿಖಾನೆಯಲ್ಲಿ ಬಚ್ಚಿಟ್ಟ ದೀಪ
ಕಲಿಸಿತು ಭೂಮಿಗು ಎಷ್ಟೊಂದು ಕೋಪ
ಮೂಡುವ ಮೊಗ್ಗಿಗು ಮಂಡೇಲ
ನಿನ್ನ ಹೆಸರಿಟ್ಟುಕೊಂಡೆವು ಮಂಡೇಲ
 
ಜೊಹೆನ್ಸ್ ಬರ್ಗ್ ಕೂಗಿದ ಕೂಗೆ
ಕೇಪು ಟೌನಿನಲ್ಲಿ ಭುಗಿಲೆದ್ದ ಹಾಗೆ
ಧಿಕ್ಕಾರ ಎಂದಾರೆ ಮಂಡೇಲ
ನಿನ್ನ ಹೆಸರಿಟ್ಟುಕೊಂಡೆವು ಮಂಡೇಲ
 
ಚುಕ್ಕಾಣಿ ಇದ್ದಾರು ಚಂದ್ರನಾಗಲಿಲ್ಲ
ಚಪ್ಪಾಳೆ ಸದ್ದೀಗೆ ಚುಕ್ಕಿಯಾಗಲಿಲ್ಲ
ಕಾಮರ್ೋಡ ಕಂಡಾರೆ ಮಂಡೇಲ
ನಿನ್ನ ಹೆಸರಿಟ್ಟುಕೊಂಡೆವು ಮಂಡೇಲ
 
ಕಾಮನಬಿಲ್ಲಿನ ಬಣ್ಣವ ಅಳಿಸಿ
ಬಾನಲ್ಲು ಮಣ್ಣಂಥ ಮನುಜನ ಬಿಡಿಸಿ
ಹುಟ್ಟೊ ಸೂರ್ಯನಿಗು ಮಂಡೇಲ
ನಿನ್ನ ಹೆಸರಿಟ್ಟುಕೊಂಡೆವು ಮಂಡೇಲ
 

‍ಲೇಖಕರು G

23 July, 2014

2 Comments

  1. t.s.goravar

    cholo ide kavite.

  2. mmshaik

    arthapurna kavite..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading