ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ವರ್ಗ ಹೂವಿನ ಜೊತೆ ನಾರಿಗೆ

-ಉದಯಕುಮಾರ ಹಬ್ಬು

ಜಗದ ಒದ್ದೆಬಟ್ಟೆಯಾದ ಬವಣೆಗಳ‌ನ್ನು ಹಿಂಡಿ
ಹಗ್ಗಕ್ಕೆ ಹರವಿ ಒಣಗಿಸುವಂತಿದ್ದರೆ..
ಕಣ್ಣೀರೆಂಬ ಕಾಯನ್ನು ಈಳಿಗೆ ಮಣೆಯಲಿ ತುರಿದು
ಮೆಣಸು, ಕೊತ್ತಂಬರಿ, ಜಿರಿಗೆ ಅರಿಷಿಣ ಹಾಕಿ
ಮಿಕ್ಸಿಯಲಿ ರುಬ್ಬಿ ರುಚಿಕಟ್ಟಾದ ಸಾಂಬಾರು
ಮಾಡುವಂತಾದರೆ…
ಜಗದ ಹಸಿವನ್ನು ಇಬ್ಬನಿಗಳ ಹಾಗೆ
ಸೂರ್ಯ ಬಿಸಿಲಿನಲ್ಲಿ ಒಣಗಿಸಿ ಹಲಸಿನ
ಹಪ್ಪಳದ ಹಾಗೆ ಕುರುಕುರು ಚಪ್ಪರಿಸುವಂತಾದರೆ
ಹೆಣ್ಣುಗಳೆಂಬ ಬೆಂಕಿ ಗಂಡಸರೆಂಬ ಕಟ್ಟಿಗೆಯನ್ನು ಸುಡುವಂತಾದರೆ..
ಭೂಮಿ ಆಕಾಶಕ್ಕೆ ಏರುವಂತಾದರೆ..
ಸ್ವರ್ಗ ಹೂವಿನ ಜೊತೆ ನಾರಿಗೆ..

‍ಲೇಖಕರು Admin

8 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading