ಅರುಣ್ ನಾಯ್ಕ್
ಭಾರತ ದೇಶದ ಹೆಮ್ಮೆಯ ಕುವರ
ಸ್ವಾತಂತ್ರ್ಯದ ಉದಯದ ಮಹಾ ವೀರ
ಉಪ್ಪಿನ ಸತ್ಯಾಗ್ರಹದ ಶೂರ
ಅಹಿಂಸಾವಾದಿ ಖಾದಿ ಬಂಡಾರ
ಪೋರಬಂದರಿನಲಿ ಜನಿಸಿದ ಪುಣ್ಯಾತ್ಮ
ಆದೆ ನೀನು ನಮ್ಮೆಲ್ಲರ ಮಹಾತ್ಮಾ
ಕರೆದರು ನಿನ್ನನು ಬಾಪು ಎಂದು
ಎಂದು ಉಳಿಯಿತು ಅಚ್ಚಳಿಯದೆ ಇಂದೂ
ತಾತ ಎಂದರು, ಧರಿಸಿದೆ ಚರಕವ
ಮೋಹನ ದಾಸ ಕರಮ ಚಂದ್ರ ಆದವ
ಸ್ವಚ್ಛತೆಯ ಹರಿಕಾರ, ಕುಡಿತದ ನಿರ್ಮೂಲನಗನಸುಗಾರ
ದೇಶವ ಉಳಿಸಿದ ಅನಂತ ವೀರರ
ಸಾಲಲಿ ನಿಲ್ಲುವ ಮಹಾನ್ ಹೋರಾಟಗಾರ
ಸತ್ಯ, ಶಾಂತಿಏ ನಿನ್ನ ಉಡುಗೆ
ಮರೆಯಲಾಗದ ನಿನ್ನ ಕೊಡುಗೆ
ತಿಳಿಯದೆ ಹೇಳದಿರಿ ಗಾಂಧಿಗೆ ಬೇಡದನ್ನು
ಅರಿಯಿರಿ ಇತಿಹಾಸವನ್ನು
ಉಳಿಸಲು ಸ್ವಾತಂತ್ರ್ಯವನ್ನು ಮಾಡಿದ ಪ್ರಯಾಸವನ್ನು
ನೆಚ್ಚಿನ ಬಾಪು ನಿಮಗೆ ನಮನ
ಮಾಡಿರಿ ಎಲ್ಲರೂ ಶ್ರಮದಾನ ಆಗ ಸಮಾಧಾನ






ಅರುಣ್ ನಿಮ್ಮ ಕವಿತೆ ಇಷ್ಟು ಪ್ರಾಸದ ಧ್ಯಾನಕ್ಕೆ ಏಕೆ ಇಳೀತು. ಏನಾದರೂ ಆಗಲಿ ಬಾಪುವಿನೊಳಗಿನವರು ನೀವು. ಹೀಗಾಗಿ ಗೌರವಿಸುತ್ತೇವೆ.ನಮ್ಮ ಮುಂದಿನ ತಲೆಮಾರಿಗೆ ಅಂಬೇಡ್ಕರ್ ಗಾಂಧಿ ಬುದ್ಧ ಬಸವರ ಕಡೆಗಷ್ಟೇ ಹೋಗುವುದನ್ನು ಕಲಿಸಬೇಕೀದೆ. ನಾವು ಎಚ್ಚರ ತಪ್ಪಿದರೆ ಆ ಮಕ್ಕಳು ಕೇಸರಿಗೆ ಒಲಿದು ಮಾನವೀಯತೆಗೆ ಬದಲು ಪರಮಾಣು ಬಾಂಬನ್ನು ಆಯ್ಕೆ ಮಾಡಿಕೊಳ್ಳುವ ಅಪಾಯಗಳಿವೆ…..