ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ಪೂರ್ತಿ ಗಿರೀಶ್ ಹೊಸ ಕವಿತೆ- ಓ ಗಾಳಿಯೇ ಅವನಿಗೆ ತಿಳಿಸು

ಸ್ಪೂರ್ತಿ ಗಿರೀಶ್

ಬೆರಳು ಸೋಕಿದ ರೋಮಾಂಚನಕ್ಕೆ
ಏದುಸಿರು ಬಿಟ್ಟು
ನುಣುಪು ಪಾದದಡಿ ಎದ್ದ
ಧೂಳು
ನವಿರಾಗಿ
ಕಣ್ಣ
ಹೊಸ್ತಿಲವರೆಗೂ ಬಂದು
ಸುರಿಯಲಾಗದ ಬಿಂದುವಿನಲ್ಲಿ
ಹೆಪ್ಪುಗಟ್ಟಿದ್ದೆ ಎಂದು

ಅಂಗೈ ಗೆರೆದಾಟಿದ ಸ್ಪರ್ಶ
ಅಲೆ ಅಲೆಯಾಗಿ ಹಬ್ಬಿ
ಬೆಟ್ಟ ಕಾನನ ಹೊಕ್ಕು
ಗಾಳಿಪಟವಾಗಿ
ಎದೆಯ
ಮಡುವಿನಲಿ ಅಡಗಿ
ನಡುವಿನಲಿ ಮೈ ಮರೆತು
ನವಿಲಾಗಿದೆ ಎಂದು

ಬೆರಗಾಗಿ
ಹಗುರಾದ ಸ್ವರವಾಗಿ
ಕಿವಿಯೊಳಗೆ ಮೌನದಲಿ ಅವನ ಹೆಸರು ಹಾಡಾಗಿದೆ ಎಂದು

ಓ ಗಾಳಿಯೇ ಅವನಿಗೆ ತಿಳಿಸು
ಈ ರಾತ್ರಿ ಆಕಾಶದ ಹೊಲದಲ್ಲಿ ಅರಳಿದ್ದ
ಸಣ್ಣಹೂಗಳ ಕುಯ್ದು ತಂದ
ನನ್ನ
ಅಂಗೈಗಳು ಪರಿಮಳಗೊಂಡವೆಂದು
ಅವನ ನೆನೆದು
ಕೆಂಪಾದವೆಂದು

‍ಲೇಖಕರು Admin

20 August, 2021

1 Comment

  1. Jayasrinivasa Rao

    This is a lovely poem, Spoorthi!! ವಾಯುದೂತ!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading