ಧನಂಜಯ ಎನ್ ಆಚಾರ್ಯ
ಸ್ಪರ್ಶ ಸುಖವನ್ನು ಇನ್ನಿಲ್ಲದಂತೆ ಅನುಭವಿಸುತ್ತಿದ್ದೆ…
ಧಿಗ್ಗನೆ ಎಚ್ಚರಗೊಳ್ಳುವಂತೆ ಅವಳ ಧ್ವನಿ!
ಮಂದಿರಕ್ಕಂಟದ ದೇವರು ನಾನು
ಕೆತ್ತನೆಯನ್ನಷ್ಟೇ ಸುಖಿಸಿ ಏನು ತಾನೇ ಪಡೆವೆ ??
ನಾ ಉಸಿರು ಬಿಗಿ ಹಿಡಿದದ್ದು ಅವಳ ಮಾತಿಗಲ್ಲಾ..
ಇಲ್ಲಿಯ ತನಕವೂ ಒಟ್ಟಿಗಿದ್ದಳು ಎಂದು
ತಿಳಿದಿದ್ದ ನನ್ನ ಮೌಢ್ಯಕ್ಕೆ,
ಅವಳ ಬೆವರಿನ ಘಮಲು
ನುಣುಪಾದ ಚರ್ಮ
ಗೊಂಬೆಯಂಥಾ ನೋಟ
ಎಲ್ಲವೂ ಈಗ ನಿಜಕ್ಕೂ ಕಲ್ಲಾಯಿತು.

ನಾನು ಮಾತ್ರ ಜೀವವಿದ್ದೂ ಕಲ್ಲಿನ ಹಾಗೆ
ಅವಳನ್ನೇ ನೋಡುತ್ತಾ ಕುಳಿತೆ.
ಎದ್ದು ಬರಲೂ ಮನಸಾಗಲಿಲ್ಲ,
ಜೀವ ನೀಡುವಷ್ಟು ಶಕ್ತಿಯೂ ಇರಲಿಲ್ಲ.






0 Comments