ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ತ್ರೀ ಕುಲದ ಉದ್ಧಾರವ!

ಡಾ. ಸುಜಾತಾ ಸಿ

ಗುಡಿಗಳಲ್ಲಿ ಅದೇ ಜಾಗಟೆ ಗಂಟೆಗಳ ಆರ್ತನಾದ
ಹೆಣ್ಣುಗಳ ಕೊರಳಿನ ಕೂಗಿನ ರುದ್ರಾವತಾರ
ಶಿವನೋ ಮೂರು ಕಣ್ಣು ಮುಚ್ಚಿ
ಜಗದ ಪರಿವೇ ಇಲ್ಲವೆಂಬಂತೆ
ಅವನ ಮೌನ ರಾಗ
ಇಂಚಿಂಚನ್ನು ಹರಿದು ಮುಕ್ಕುವ
ರಾಕ್ಷಸರ ಅಟ್ಟಹಾಸ

ತಾ ಕುಡಿದು ಬೆಳೆದ ಅದೇ ಮೊಲೆ ತೊಟ್ಟಿಗೆ
ಕಚ್ಚಿ ಕಚ್ಚಿ ಸುಖ ಅನುಭವಿಸುವ
ಶಿಖಂಡಿ ಆತ
ಅದೇ ತೊಡೆ ಸಂದಿಯಲ್ಲಿ ಕೈ ಹಾಕಿ
ಜಗವೇ ಗೆದ್ದೆ ಎಂದು ಮೀಸೆ ತಿರುವಿದ ಗಂಡಸೆಂಬ ನಾಮರ್ದ
ಯೋನಿಯಲ್ಲೇ ಹುಟ್ಟಿ ಯೋನಿಯೊಳಗಿನ ರಕ್ತಕಾರಿಸಿ
ಅವಳ ರಕ್ತದಲ್ಲೇ ಕುದ್ದೇದ್ದ ಶಿಖಂಡಿ ಅವನು
ಮಂತ್ರಗಳಂತೆ, ಪ್ರೋಕ್ಷಣಿಯಂತೆ
ಗುಡಿ ಗುಂಡಾರಗಳಂತೆ
ದೇವರಿಗೆ ಯಜ್ಞಯಾಗಾದಿಗಳಂತೆ
ಕಾಯೋಕೆ ದೇವನಂತೆ
ಯಜ್ಞಕುಂಡ ರಕ್ತದುಂಡೆಯ ಬೆಂಕಿಯಲ್ಲಿ
ಸತ್ತ ಹೆಣದ ವಾಸನೆಯು ಘಂ ಎಂದು ಆರ್ತನಗೈಯುತ್ತಿದೆ

ಅಗರ ಬತ್ತಿಯ ಬೂದಿಯಲ್ಲಿ
ಶಿಖಂಡಿಗಳ ಕತೆ ಹೇಳುತ್ತಿದೆ
ಮೂಢ ಭಕ್ತರ ಹಣಿ ಮೇಲೆ
ಬೂದಿ ಗಂಧವಾಗಿ
ಎಲ್ಲೆಡೆ ಪಸರಿಸುತ್ತಿದೆ
ಇದು ನಮ್ಮ ದೇಶದ ಕಾಮಿ ಸಂತಾನಿಗಳ ಕತೆ
ಕೇಳಿರಪ್ಪಾ ಕೇಳಿರೋ
ಸ್ತ್ರೀ ಕುಲದ ಉದ್ಧಾರವ!

‍ಲೇಖಕರು Avadhi

15 December, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading