ಬಣ್ಣ ಬಣ್ಣದ ‘ಬುಕ್‌ ಮಾರ್ಕ್‌’

ತೇಜಸ್ವಿಯವರ ಪುಸ್ತಕದ ಪುಟಗಳ ಮಧ್ಯೆ ಅಡಿಗರ ಕಾವ್ಯದ ಸಾಲು ಸೇರ್ಸೋ ಹಾಗಿದ್ರೆ..

ಜೋಗಿಯವರ ಪುಸ್ತಕದೊಳ್ಗೆ ರಾಜರತ್ನಂ ಮಾತು ಸೇರ್ಕೊಂಡ್ರೆ..

ಬೇಂದ್ರೆಯವರ ಕಾವ್ಯದ ಮಧ್ಯೆ ಕುವೆಂಪುರ ‘ಕನ್ನಡ ಡಿಂಡಿಮ’ ಬಾರ್ಸೋಕೆ ಶುರುವಾದ್ರೆ..

ಹೇಗಿರ್ತದೆ..?

‘ಬಾರಿಸು ಕನ್ನಡ ಡಿಂಡಿಮವ..’
‘ಮೂಗ್ನಲ್ ಕನ್ನಡ ಪದವಾಡ್ತೀನಿ…’
‘ಇರುವುದೆಲ್ಲವ ಬಿಟ್ಟು….’

ಹೀಗೆ ಕನ್ನಡ ಕಾವ್ಯದ ಕಂಪು ಹೊತ್ತ ಸಾಲುಗಳನ್ನ ಆರಿಸಿ, ಆರಿಸಿ ಅವಕೊಂದು ಅಂದ ಕೊಟ್ಟು ಕಲಾತ್ಮಕವಾದ ‘ಬುಕ್ ಮಾರ್ಕ್’ಗಳನ್ನ ಸಿದ್ಧ ಮಾಡ್ತಿದಾರೆ ‘ ವೈಷ್ಣವಿ ಮೋಹನ್’

ಚಿಕ್ಕ ರಟ್ಟಿನ ತುಂಡು, ಒಂದಷ್ಟು ಬಣ್ಣದ ಪೆನ್ ಗಳು, ಕತ್ತರಿ ಮತ್ತು ಕನ್ನಡ ಕಾವ್ಯ ಸೇರ್ಕೊಂಡ್ರೆ ವೈಷ್ಣವಿಯ ಬುಕ್ ಮಾರ್ಕ್ ರೆಡಿ. ಬೇರೆ ಬೇರೆ ಆಕಾರದ ಚೆಂದ ಚೆಂದ ಬಣ್ಣದ ಬುಕ್ ಮಾರ್ಕ್ ಗಳನ್ನ ತಯಾರಿಸ್ತಾರೆ ವೈಷ್ಣವಿ.

ಸದ್ಯ ಎನ್ ಆರ್ ಕಾಲನಿಯ ಎಪಿಎಸ್ ಕಾಲೇಜಿನಲ್ಲಿ ಮೊದಲ ಬಿಎ ಓದುತ್ತಿರುವ ವೈಷ್ಣವಿ ‘ಸೃಷ್ಟಿ ಕಲಾಮಂದಿರ’ ನಡೆಸುತ್ತಿರುವ ಕಲಾವಿದೆ ರೂಪಾ ಮೋಹನ್ ರ ಮಗಳು. ಬಾಲ್ಯದಿಂದಲೇ ಚಿತ್ರಕಲೆಯ ಒಲವು ಹಚ್ಚಿಕೊಂಡಿರುವ ವೈಷ್ಣವಿಯವರ ಆಸಕ್ತಿ ಹಲವು ಬಗೆಯದು.

ಚಿತ್ರಕಲೆಯ ಜೊತೆ ಸಂಗೀತ, ನೃತ್ಯ ಮತ್ತು ರಂಗಭೂಮಿ. ಸಹಪಾಠಿಗಳೊಂದಿಗೆ ಸಂಗೀತ ಕಾರ್ಯಕ್ರಮ ಕೊಡ್ತಿರೋ ವೈಷ್ಣವಿ ಕಳೆದ ವರ್ಷವಷ್ಟೇ ಭರತನಾಟ್ಯ ರಂಗಪ್ರವೇಶ ಮಾಡಿದ್ದಾರೆ. ಕೆರೆಮನೆ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ, ತುಮರಿ, ಹೆಗ್ಗೋಡಿನ ರಂಗಶಿಬಿರಗಳಲ್ಲಿ ಭಾಗವಹಿಸಿರೋ ವೈಷ್ಣವಿಯವರಿಗೆ ಅಪಾರ ಓದಿನ ಹುಚ್ಚು. ಈ ಲಾಕ್ ಡೌನ್ ವೇಳೆಯ ನಿರಂತರ ಓದು ಈ ‘ಬುಕ್ ಮಾರ್ಕ್’ ಗಳ ರಚನೆಗೆ ಮೂಲವಾಯ್ತು.

ಅವರು ಸಿದ್ಧಮಾಡಿದ ಕೆಲವು ‘ಬುಕ್ ಮಾರ್ಕ್’ ಗಳ ಚಿತ್ರಗಳು ಇಲ್ಲಿವೆ….

ಆಸಕ್ತರು..

ರೂಪಾ ಮೋಹನ್,

ಮೊ: 9880882854 ರನ್ನು ಸಂಪರ್ಕಿಸಬಹುದು.

‍ಲೇಖಕರು Avadhi

December 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: