-ಸೂತ್ರಧಾರ ರಾಮಯ್ಯ
ಹಣ, ಹಗರಣ, ಹಗೆ-ರಣ! ಎಲ್ಲವೂ ಸ್ವಂತ ‘ಉದ್ಯೋಗ ಖಾತ್ರಿ ಯೋಜನೆ’ ಸಲುವಾಗಿ ಮೈಮೇಲೆ ಎಳೆದುಕೊಂಡು ತಮ್ಮ ಉದ್ಯೋಗಕ್ಕೆ ಕತ್ತರಿ ಹಾಕಿಕೊಂಡ ಕಸ-ರತ್ತುಗಳೇ. ಸದ್ಯದ ಸ್ಕ್ಯಾಮ್-ಉತ್ತರದ ಗೂಟಾಲ 2g . ಒಂದು Aರಾಜಾ.ಜಿ , ಇನ್ನೊಂದು
ಎಡ್ಡಿ.ಜಿ. ಪರಸ್ಪರ ತಳಕು ಹಾಡಿಕೊಂಡ, ಒಂದು ಇನ್ನೊಂದನ್ನು ತಳಕ್ಕೆ ಹಾಕಲು ಹೆಣೆಯಲಾಗುತ್ತಿರುವ ‘ತಲೆದಂಡ? ಗಳ ಪ್ರಕ್ರಿಯೆ.
ಎಲ್ಲವೂ ‘ಆದರ್ಶ’ ಸಮಾಜವನ್ನು ಬಿಲ್ಡ್ ಮಾಡುವ ಪ್ರಯತ್ನ ಮೇಲು ನೋಟಕ್ಕೆ. ಎರಡೂ A ರಾಜ ಕತೆಗಳೇ.ಜನರಲ್ಲಿ ಆತಂಕ ಹುಟ್ಟಿಸುತ್ತಿರುವ ನಾಯಕರ , ಕಾಲದಲ್ಲಿ ಎಚ್ಚರಿಕೆ ವಹಿಸದ ಹೈ ಕಮಾನ್ದರುಗಳ ‘ನಿರಾತಂಕವಾದದ’ ಫಲ.
ದೆಹಲಿಯದು ಹೈ ಫ್ರೀ ಕ್ವೆನ್ಸಿಯ ‘ಏರ್ flare ಆದರೆ, ಕರ್ನಾಟ ಕದ್ದು ಭೂ ಕುಸಿತ. ಲ್ಯಾಂಡ್ ಸ್ಲೈಡ್! ಅವರದ್ದನ್ನು ದೇಶ ದ್ರೋಹ ಅಂದರೆ ,ಇವರದ್ದನ್ನು ರಾಜ ದ್ರೋಹ ಅನ್ನಬಹುದಾ-ದಂತಕತೆ. ಆದರೆ ‘ತಲೆದಂಡ’ ಅನ್ನುವ ದೊಡ್ಡ ಶಬ್ಧದ ಬಳಕೆ ಬೇಕೇ? ತಲೆ ಇದ್ದವರು ಹೀಗೆ ಮಾಡಲು ಸಾಧ್ಯವೇ? ಬರಿ ‘ಕುರ್ಚಿದಂಡ’ ಅಂದರೆ ಸಾಲದೇ?
ಒಂದಾನೊಂದು ಕಾಲವಾಗಿದ್ದರೆ ಚಿಂತೆ ಇರುತ್ತಿರಲಿಲ್ಲ.
ಆ ಪೋಸಿಶನ್ ನವರು ‘ಮಾಡಿ ಮಡಿದರು’ (ದುಡ್ಡನ್ನು) ಅಂತಾ ಇಂದಿನವರು ಮಾಡಲಾಗದು; ಫೋರ್ಥ್ ಎಸ್ಟೇಟ್ ನಿಂದ ಎಷ್ಟ್ ಏಟ್ ಬೀಳ್ತಾ ಇದೆ ನೋಡಿದೆವಲ್ಲ, ರಂಗ(ನಾಥ)ನಾಟಕಗಳನ್ನು! ರಂಗಭೂಮಿ, ಉಳಿದ ಮೀಡಿಯಾಗಳ ಮುಂದೆ ಪೇಲವ ಅನಿಸುವಷ್ಟು.
ಅಲ್ಲಾ,ಅಂತ ಬಿಹಾರದಂತ ಬಿಹಾರಕ್ಕೆ ‘ಬಹಾರ್’ಬರಿಸುತ್ತಿದ್ದರೆ ನೀತಿಶ ಕುಮಾರ್, ಇಂಥಾ ಚಲುವ ಕನ್ನಡನಾಡನ್ನು ಹೀಗೆ stingaa ಪುರ ವನ್ನಾಗಿಸುವುದೇ? commission ಮಾಡಿದಾಕ್ಷಣ ಕಾಲ(ಅ)ಕ್ರಮದಲ್ಲಿ ಎಲ್ಲಾ omission ಆಗುತ್ತೆ, ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲು ಯಾವ ಧರ್ಮರಾಯನು ಬರುವುದಿಲ್ಲಾ, ಪರ ಅಪ್ಪನ ಅಗ್ರಹಾರಕ್ಕೆ ಕರೆಯಲು ಬರುವ M ಧರ್ಮರಾಯನನ್ನು ಬಿಟ್ಟರೆ ಅನ್ನುವ ‘ನಿರಾತಂಕ’ ವಾದ ಇನ್ನು ಮುಂದೆ ನಡೆಯದು.
ಕಳ್ಳನ ಹೆಂಡತಿ ಎಂದಿದ್ದರೂ…ಅನ್ನುವ ಕಾಲ ಹತ್ತಿರ ವಾದ್ದರಿಂದ ‘ನಾಳೆಗೆ ತಿಂಡಿಯನ್ನು ಈಗಲೇ ಹುಡುಕುವ’ ಕೋಟಿ ಕೋಟಿ ಆಟದಲ್ಲಿ ,ಕೋತಿ ಕೋತಿ ಯಾಗುವ,ಹೆಂಡತಿ ,ಮಗ ,ಮಗಳು,ಮಗಳ ಗಂಡ (4g ) ಎಂಬೋ ಮಕಾರ ಚತುಷ್ಟಯಗಳಿಗಾಗಿ ಟೂ ಜಿ , ತ್ರಿ ಜಿ,ಗಳನ್ನು ಹುಡುಕಿ ಮರಳು ಗಾಡಿನಲ್ಲಿ ಅಲೆ-ಯುವ ಪೊಲಿಟಿಕಲ್ spectrumna ತರಂಗ ರಂಗ ಮನ್ಗಾಟಕ್ಕೆ
ತೆರೆ ಬೀಳಲಿ. ತಪ್ಪು ಮಾಡಿದವರು ಶ್ರೀಮಾನ್ ಫೋರ್ಟ್ವೆಂಟಿಯ ರಾಜ ಕಪೂರ್ ಮಾದರಿ (?) ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಪರಿಶುದ್ದರಾಗಲಿ.
Like this:
Like Loading...
Related
0 Comments