ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೋತು ಬಂದವ ನಾ ನಿನಗ

ಏಳು ಸುತ್ತಿನ ಕ್ವಾಟಿ

ರಾಜ್‍ಕುಮಾರ್ ಮಡಿವಾಳರ್

ಏಳು ಸುತ್ತಿನ ಕ್ವಾಟಿ
ಒಂಭತ್ತು ವಾರಿ ಸಿರಿಯಲಿ ಮುಚ್ಚಿಟ್ಟೆ
ಹ್ಯಾಂಗಾರ ಬಂದೇನು ಹುಡುಗಿ
ತಡಿಯೆನ್ನುವ ಭಂಟರ ಹೊರಗೆಡವೆ!

ಹದಿನೆಂಟು ವರುಷಾತು ಅದರಿಲ್ಲ ಬೆದರಿಲ್ಲ
ಹೆದರಿಲ್ಲ ತಡದೇನು ಎಂತೆಂಥಾ ದಾಳಿ
ದಂಡೆತ್ತಿ ಬಂದೋರು ಬಾಗಿಲ ಒಡೆಯಲು
ಬಂದು ಹೆಣವಾದರು ದಿಡ್ಡಿ ಹೊರಗ

ಭಲೇ ಚೆಂದುಳ್ಳಿ ನೀ ಎಲ್ಲಿಟ್ಟಿ ಅಕಲಾ?
ಸೋತು ಬಂದವ ನಾ ನಿನಗ
ತೆರೆದು ಬಾಗಿಲ ಒಳ ಕರೆಯೆ
ಹುಡುಗಿ ಬರ ಸೆಳೆಯೆ

ಕೆಂಡ ಕಾರುವ ಕಣ್ಣು ಬೆಂಕಿಯುಗುಳುವ ಬಾಯಿ
ತಣ್ಣಗಾಗೆದೊ ನಿನ್ನ ಚೆಂದುಳ್ಳ ಮಾತು ಕೇಳಿ
ಬಂದೇನೋ ಬಾರೋ ಬಾ ಬೆಳದಿಂಗಳಾ
ಬಿಚ್ಚಿಟ್ಟೇನಿ ಉಕ್ಕಿನ ಚಿಲಕಾ ನೂಕೋ ಬಾಗಿಲಾ

ಬಲುದಿಟ್ಟೆ ನೀ ಭಾರಿ ದಡ್ಡಿ!
ಬಂದು ತಾಸಾತು ನಾ ಕಳ್ಳಗಿಂಡ್ಯಾಗಿಂದ
ಹೊಕ್ಕಳ ಸುಳಿ ಬತ್ತಿ ಎದಿ ತುದಿಗೆ ಅವಳಿ
ಹಣತಿ ಬೆಳಗಿ ಹುಣಿವ್ಯಾತು, ಎಂಥಾ ಬೆರಗ!

ದಂಡಿಗೆ ಹೆದರಿಲ್ಲ, ಹೆದರಿಸಿಲ್ಲ ಒಬ್ಬನೂ
ತಡೆದೇನೊ ನಿಂತ ಮೆಟ್ಟಿಲೆ ಹೌದ್ದನ್ನೋ ಗಂಡಸರ ದಾಳಿ
ಏಳು ಸುತ್ತಿನ ಕ್ವಾಟಿ ಬಿಟಗೊಟ್ಟೆ! ಏನು ಮಾಯಾ ಛಳಿ! ಎಂಥಾ ಮೋಸಾತು ತೀಡಿ ಮೂಡಗಾಳಿ!

(ಒಂದು ಹಳೆ ಚಳಿ)

‍ಲೇಖಕರು avadhi

6 November, 2019

1 Comment

  1. Lalitha siddabasavayya

    ವಾಹ್ !!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading