-ಸುವಿಧಾ ಹಡಿನಬಾಳ
ಭರವಸೆ
ಮುಂಗಾರಿನ ಹಂಗಾಮು
ಶುರುವಾಗಿದೆ ಎಲ್ಲೆಲ್ಲೂ
ನೆಲದಡಿಯ ಕ್ರಿಮಿಕೀಟಕು
ಮತ್ತೇರಿದೆ ಸುತ್ತಲೂ
ಕಾರ್ಮೂಗಿಲಿನ ಮಳೆ ಹನಿಗೂ
ಇಳೆ ಸೇರಿದ ಪುಳಕ…
ನೆಲದದೊಡಲಿನ ಒಣ ಕೊರಡಿಗೂ
ಚಿಗುರೊಡೆಯುವ ತವಕ
ಹೊಸ ಕನಸಿನ ನವಭಾವವ
ಕಣ್ತುಂಬಾ ಹೊತ್ತು ತೆನೆ ಹೊತ್ತಿಹ
ಸಿರಿ ಪೈರನು ಎದೆಯೊಳಗೆ ಬಿತ್ತಿ
ಹೊರಟಿಹನದೊ ಹೊಲದೆಡೆಗೆ
ಎದೆಭಾರವ ಧರೆಗಿಳಿಸಿ
ಹೊಲನೆಲವನು ಉತ್ತು
ಹಗಲಿರುಳು ದುಡಿದುಡಿದು
ಬರುವ ಉಳುವ ಯೋಗಿ
ಮುಸ್ಸಂಜೆಯ ಮಿಂಚುಳ್ಳಿ
ಗುಟು ಗುಟುರುವ ಗೊರವಂಕ
ದೀಪಕೆ ಮುತ್ತಿಡುವ ಪತಂಗ
ಭರವಸೆಗಳು ಅವನೆದೆಯಲಿ
ಸೊಗವೇರಲಿ ರೈತರ ಕನಸು
ಮುನಿಸದಿರಲಿ ಪ್ರಕೃತಿ ಸೊಗಸು
ಸುಖಿಯಾಗಲಿ ಅನ್ನದಾತನ ಒಡಲು
ಹಸುರೊಡೆಯಲಿ ಎಲ್ಲರ ಬಾಳಲ್ಲೂ






0 Comments