ಉಪಾಸನಾ ಟ್ರಸ್ಟ್ ಭಾವಗೀತೆಗಳ ಬೆಳವಣಿಗೆಗೆ ಕಳೆದ 26 ವರ್ಷಗಳಿಂದ ನಿರಂತ ರ ಚಟುವಟಿಕೆಗಳಿಂದ ಕ್ರಿಯಾಶೀಲವಾಗಿದೆ. ನೂರಾರು ಕಾರ್ಯಕ್ರಮಗಳನ್ನು ನಡೆಸಿದೆ. ಪ್ರತಿವರ್ಷ ಭಾವಗೀತಾಕ್ಷೇತ್ರಕ್ಕೆ ಅನುಪಮ ಸೇವೆಯನ್ನು ನೀಡುತ್ತಿರುವ ಯುವ ಗಾಯನ ಹಾಗೂ ವಾದ್ಯ ಕಲಾವಿದರಿಗೆ “ಉಪಾಸನಾ” ಹಾಗೂ “ನಾದೋಪಾಸನಾ” ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಾ ಬಂದಿದೆ.
ಗಾಯಕ ದಿ. ಜಿ.ವಿ. ಅತ್ರಿ ಸವಿನೆನಪಿನ ಈ ಬಾರಿಯ “ಉಪಾಸನಾ” ಪ್ರಶಸ್ತಿಯನ್ನು ಪ್ರಸಿದ್ಧ ಯುವ ಗಾಯಕಿ ಶ್ರೀಮತಿ ಚಾಂದನಿ .ಆರ್ ಅವರಿಗೆ ಹಾಗೂ ಕೊಳಲು ವಾದಕ ದಿ. ಎನ್.ಎಸ್. ಮುರಳಿ ಅವರ ಸವಿನೆನಪಿನ “ನಾದೋಪಾಸನಾ ಪ್ರಶಸ್ತಿ”ಯನ್ನು ಮೃಸೂರಿನ ರಿದಂಪ್ಯಾಡ್ಸ್ ಕಲಾವಿದ ಶ್ರೀ ಆರ್. ವಿನಯ್ ರಂಗಧೋಳ್ ಅವರಿಗೆ ನೀಡಿ ಗೌರವಿಸಲಾಗುತ್ತಿದೆ.
ಈ ಸಮಾರಂಭವು 2026ರ ಜುಲೈ 11ರ ಶನಿವಾರದಂದು ಬೆಂಗಳೂರಿನ ಪತ್ತಿ ಸಭಾಂಗಣದಲ್ಲಿ ಜರುಗಲಿದೆ.








0 Comments