ಸಂಧ್ಯಾ ಭಟ್
ಸತ್ತ ಸಂಬಂಧಗಳೆಲ್ಲ ..
ಸವಿ ನೆನಪುಗಳಾಗಿ
ಫ್ರೇಮ್ ನಲ್ಲಿ ಕುಳಿತಿವೆ ..
ಮುಚ್ಚಟೆಯಿಂದ
ಮನದ ಪೆಟ್ಟಿಗೆಯಲ್ಲಿಟ್ಟು ..
ಬೀಗ ಹಾಕಿದ್ದಾಗಿದೆ …
ಕೀ ಕಳೆಯಬೇಕೆಂದಾಗೆಲ್ಲ
ಹಾಳಾದ್ದು ಕೀಲಿಯಿಟ್ಟ ಜಾಗ
ತಪ್ಪದೆ ನೆನಪಾಗುತ್ತದೆ…
**
ಹೀಗೊಂದು ಕೆಟ್ಟ ಕನಸು…
ಸೇತುವೆಗಳೆಲ್ಲ ಗೋಡೆಗಳಾಗಿ
ಬದಲಾದಂತೆ …
**
ಒಂದು ವೇಳೆ ಅವನು ಕೃಷ್ಣನಾದರೆ
ಭಾಮೆ ನಾನೇ,
ನೀ ರಾಧೆಯಾಗಬೇಕಿತ್ತೇನೋ
ಆದರೆ ನಾ ಭಾಮೆಯಾಗಲೂ ಇಲ್ಲ
ನಿನಗೆ ರಾಧೆಯಾಗಲೂ ಬಿಡಲಿಲ್ಲ
ಅವನು ಮಾತ್ರ ರಾಮನಾಗಿಬಿಟ್ಟ
ಚೆಂದದ ಅವನದೇ ಸಂಸಾರದಲ್ಲಿ







ಕೀ ಕಳೆಯಬೇಕೆಂದಾಗೆಲ್ಲ
ಹಾಳಾದ್ದು ಕೀಲಿಯಿಟ್ಟ ಜಾಗ
ತಪ್ಪದೆ ನೆನಪಾಗುತ್ತದೆ … ಈ ಸಾಲುಗಳು ಮತ್ತು ಉಳಿದ ಎಲ್ಲ ಕವಿತೆಗಳೂ ತುಂಬ ಇಷ್ಟವಾದವು
chennagive kavitegaLu sandy..
ಚೆಂದದ ಅವನದೇ ಸಂಸಾರದಲ್ಲಿ…..ಆಳವಾದ ನಿಟ್ಟುಸಿರು ಮನಮುಟ್ಟಿತು.
1st one is best one.. matteraduu super… 🙂
ಎಲ್ಲಾ ಕವನಗಳು ಚೆನ್ನಾಗಿವೆ…
ಸತ್ತ ಸಂಬಂಧಗಳೆಲ್ಲ ..
ಸವಿ ನೆನಪುಗಳಾಗಿ
ಫ್ರೇಮ್ ನಲ್ಲಿ ಕುಳಿತಿವೆ ..
ಮುಚ್ಚಟೆಯಿಂದ
ಮನದ ಪೆಟ್ಟಿಗೆಯಲ್ಲಿಟ್ಟು ..
ಬೀಗ ಹಾಕಿದ್ದಾಗಿದೆ …
ಕೀ ಕಳೆಯಬೇಕೆಂದಾಗೆಲ್ಲ
ಹಾಳಾದ್ದು ಕೀಲಿಯಿಟ್ಟ ಜಾಗ
ತಪ್ಪದೆ ನೆನಪಾಗುತ್ತದೆ…
ಇದು ಬಹಳ ಬಹಳ ಇಷ್ಟವಾಯಿತು ಸಂಧ್ಯಾ…
nice one friend
Tumba istavaadavu ella chutukugaLu… 🙂
ನಿನಗೆ ರಾಧೆಯಾಗಲೂ ಬಿಡಲಿಲ್ಲ!! wow..!!!!!!!!!!!!!
ಸಂಧ್ಯಾ ಅವರೆ ತುಂಬಾ ಚೆನ್ನಾಗಿವೆ…
chennagive kavithegalu,especially modalaneyadu..
Good one 🙂
ಹೀಗೊಂದು ಕೆಟ್ಟ ಕನಸು…
ಸೇತುವೆಗಳೆಲ್ಲ ಗೋಡೆಗಳಾಗಿ…
ಪುಟ್ಟಿ…ಸುಂದರ ಸಾಲುಗಳಲ್ಲಿ ಭಾವನೆಗಳು ಅಭಾವವಿಲ್ಲದೇ ನಲಿದಾಡಿವೆ.
ಸೇತುವೆಗಳೆಲ್ಲ ಗೋಡೆಗಳಾದಂತೆ…ಚೆನ್ನಾಗಿದೆ
ನಿಮ್ಮ ಪದ್ಯದ ಸು೦ದರ ಸಾಲುಗಳಲ್ಲಿ ಬಿ೦ಬವಾದ ಹಳೆಯ ನೆನಪುಗಳೆಂಬ ಭಾವನೆಗಳು ನನ್ನನ್ನೂ ಈ ದಡದಿ೦ದ ಆ ದಡಕ್ಕೆ ಎಳೆದೊಯ್ದ ಅನುಭವ. ಚೆನ್ನಾಗಿದೆ.
ಎಸ್. ಕಿರಣ್ ಕುಮಾರಿ, ಬೆ೦ಗಳೂರು
ಪುಟಗಟ್ಟಲೆ ಪಟ್ಯಗಳು ಕೆಲವೊಮ್ಮೆ ಸಾಲುಗಳಲ್ಲಿ ಹೇಳಬಹುದು… ಸಾಲುಗಳಲ್ಲಿ ಹೇಳಿದ್ದು ಪುಟಗಟ್ಟಲೆ ಬರೆಯಬಹುದು. ಎರಡನೆಯ ವರ್ಗಕ್ಕೆ ಸೇರಿದ ಸುಂದರ ಕವಿತೆಗಳು ಇಷ್ಟವಾದವು. ಸೇತುವೆಗಳು ಗೋಡೆಗಳಾದರೆ… ಕಮಾನು ಬಾಗಿಲಾಗುತ್ತದೆ….ಯೋಚನಾ ಲಹರಿಗೆ ತಡೆಯುಂಟೇ… . ಸೂಪರ್ ಎಸ್ ಪಿ
” ಅವನು ಮಾತ್ರ ರಾಮನಾಗಿಬಿಟ್ಟ
ಚೆಂದದ ಅವನದೇ ಸಂಸಾರದಲ್ಲಿ…”
“ಹೀಗೊಂದು ಕೆಟ್ಟ ಕನಸು…
ಸೇತುವೆಗಳೆಲ್ಲ ಗೋಡೆಗಳಾಗಿ
ಬದಲಾದಂತೆ …”
ಗೋಡೆಗಳಿದ್ದರೂ..
ಇಣುಕಲು ಕಿಂಡಿಗಳಿವೆಯಲ್ಲ…
ಅದು ಕನಸುಗಳನ್ನು ಹುಟ್ಟಿಸುತ್ತದೆ,…
ಬೆಳಕನ್ನು ತರುತ್ತದೆ…
ತುಂಬಾ ಇಷ್ಟವಾಯ್ತು ಸಾಲುಗಳು… Jai Ho… !
kaviteya salugalu chennagive…
Waaaaaaaaaaav… 🙂
ಎಲ್ಲವೂ ಚೆನ್ನಾಗಿವೆ… ಸೇತುವೆ ಕವಿತೆ ತುಂಬಾ ಇಷ್ಟವಾಯಿತು… 🙂
ಪ್ರೀತಿಯಿಂದ ಓದಿ .. ಮೆಚ್ಚಿ .. ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದ..
wish you all the best.
uttam mnmuttuva pratimegalu..shubhvaagali