ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೇಡಂನ ಮಹದೇವಪ್ಪನ ಸುಸುಲಾ

ಸೇಡಂನ ಮಹದೇವಪ್ಪನ ಸುಸುಲಾ. (ಒಗ್ಗರಣೆ)

ವಿಜಯಭಾಸ್ಕರ್ 

ನಾನು‌ ಸರ್ವಕಾಲಕ್ಕೂ ಇಷ್ಟಪಡುವ ನಮ್ಮೂರಿನ ಒಗ್ಗರಣೆ ಮತ್ತು ಮಹಾದೇವಪ್ಪನ ಹೋಟೆಲ್.

ಇದು ಸರಿಸುಮಾರು 20 ವರ್ಷದ ರುಚಿಯುಳ್ಳ ಸುಸುಲಾ ಹೊಟೇಲ್.

ಸುತ್ತಳ್ಳಿಯ ಜನರಿಗೂ ಈ ಸುಸುಲಾ‌ ಕಂಡರೆ ಪ್ರೀತಿ.

ನಾನು‌ ಊರಲ್ಲಿ ಇದ್ದಾಗ ಬೆಳಗ್ಗೆ ತಪ್ಪದೇ ಮಹಾದೇವಪ್ಪನ ಹೋಟೆಲ್ ಗೆ ಬೇಟಿ ನೀಡಿ ಎರಡು‌ ಪ್ಲೇಟ್ ಸುಸುಲಾ ತಿಂದೇ ತಿನ್ನುವೆ. ಆಹಾ!! ಅದೆಂಥಾ ರುಚಿ ಅಂತೀರಾ ಮನಸ್ಸು ಮತ್ತು ನಾಲಿಗೆ ನಡುವೆ ಹೊಸ ನಂಟು ಬೆಸೆಯಲು ಈ ಸುಸುಲಾ ಬೆಸ್ಟ್. ನಾನು ಕಳೆದ 5 ವರ್ಷದಿಂದ ಈ ಸುಸುಲಾದ ರುಚಿಗೆ ದಾಸನಾಗಿ ಮತ್ತಿತರನ್ನು ದಾಸರನ್ನಾಗಿ ಮಾಡಿರುವೆ.

ಈ ಹೋಟೇಲ್ ಬೆಳಿಗ್ಗೆ 7:30 ಯಿಂದ ಮಧ್ಯಾಹ್ನ 1:30 ವರೆಗೆ ಮಾತ್ರ. ಈ ಸಮಯದ ನಡುವೆ ಮಹಾದೇವಪ್ಪ ಅದೇಷ್ಟು ಮಂಡಾಳಿನ (ಹಳ್ಳು) ಚೀಲ ಖಾಲಿ ಮಾಡುತ್ತಾನೋ ಗೊತ್ತಿಲ್ಲ. ನಾನು‌ ನೋಡಿದ ಪ್ರಕಾರ 6-7 ಚೀಲವಾದರೂ ಸಮಾಪ್ತಿಗೊಳಿಸುವಷ್ಟು ಗಿರಾಕಿ ಈತನ ಹೋಟೆಲ್ ಗೆ ಬರುವರು. ಅದಕ್ಕೆ ಕಾರಣ ಈತ ನೀಡುವ ಶುದ್ಧ ರುಚಿಯ ಸುಸುಲಾ‌ ಮಾತ್ರ ಕಾರಣ.

ಗುಲ್ಬರ್ಗದಿಂದ ಸೇಡಂ ಮಾರ್ಗವಾಗಿ ಹೈದರಾಬಾದ್ ಅಥವಾ ಬೆಂಗಳೂರು ಹೋಗುವ ಜನರಿದ್ದರೆ ಅಥವಾ ಸೇಡಂಗೆ ಬಂದಾಗ ಈ ಮಹದೇವಪ್ಪನ ಹೋಟೆಲ್ ಗೆ ಮರೆಯದೆ ಬೇಟಿ ನೀಡಿ ಸುಸುಲಾ‌ ಸವಿಯಿರಿ.

ಲೊಕೇಶನ್ : ಸೇಡಂನ ಪುರಸಭೆಯ ಸಂಕಿರ್ಣದಲ್ಲಿ‌ ಬೋರ್ಡಿಲ್ಲದ ಮಹಾದೇವಪ್ಪನ ಹೋಟೇಲ್.

‍ಲೇಖಕರು avadhi

19 April, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading