ಸೃಜನಿ ಕೊಟ್ಟ ಬೆರಗು

ರಾಜೇಂದ್ರಪ್ರಸಾದ್ 

ಮಂಡ್ಯದ ಕಲಾವಿದ ಸೋಮವರದ ಅವರ ಮೂರು ವರ್ಷದ ಮಗಳು ಸೃಜನಿ ಬಿಡಿಸಿದ ಚಿತ್ರಗಳ ಪ್ರದರ್ಶನ..

ಆಕೆ ಈ ವಯಸ್ಸನಲ್ಲೇ ಬಣ್ಣ ಬಳಸುವ ಕ್ರಮ, ಅವುಗಳ ಮಿಶ್ರಣ, ರೇಖೆಗಳಲ್ಲಿ ಮೂಡಿರುವ ಅಸಂಗತ ಆಕೃತಿಗಳು ಭಾಳ ಭರವಸೆಯನ್ನು ಹುಟ್ಟಿಸುತ್ತವೆ..

ಸೃಜನಿಗೆ ಶುಭ ಹಾರೈಸುವೆನು 😍😍

‘ಸಂಕಥನ’ದ ಲೋಗೋ ಮತ್ತು ಬಟ್ಟೆ ಬ್ಯಾನರ್ ಗಳ ವಿನ್ಯಾಸ ಮಾಡಿದ್ದು ಸೋಮು ಅವರೇ..

ಈ ಹಿಂದೆ ನಾನು ಕಾಲೇಜಿನಲ್ಲಿ ಓದುವಾಗ ಶುರುಮಾಡಿದ “ಸೃಜನ” ಕ್ಕೂ ಇವರೇ ಲೋಗೊ ಮಾಡಿದ್ದರು.

ಅದರದೇ ಮತ್ತೊಂದು ಲೋಗೊ ಅನೇಕ ಮತ್ತು ಸಂಕಥನಗಳಿಗೆ ಬಳಸಿಕೊಂಡೆವು. ನನ್ನ ಒಂದಿಷ್ಟು ಪ್ರೀತಿಗೆ ಕೃತಿಗೆ ಕೂಡ ಇವರು ಚಿತ್ರ ಗಳನ್ನು ಬರೆದಿದ್ದಾರೆ.

* ಇದು ಸೋಮವರದ ಅವರೇ ಕಟ್ಟಿಕೊಂಡ ಮನೆಯಂಗಳ.

 

‍ಲೇಖಕರು avadhi

March 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Mallikarjuna Hosapalya

    ಸೋಮವರದ ಅವರು ನನ್ನ ಆತ್ಮೀಯರು. ಬಹುಕಾಲದ ಗೆಳೆಯರೂ ಕೂಡ. ಅವರು ತಮ್ಮ ೩ ವರ್ಷದ ಮಗಳ ಏಕಚಿತ್ರಕಾಲಾ ಪ್ರದರ್ಶನ ಬಗ್ಗೆ ಮಾಹಿತಿ ಕಳಿಸಿದಾಗ ನನಗೆ ತುಸು ಬೇಜಾರೇ ಆಯಿತು. ಇಷ್ಟು ಚಿಕ್ಕ ವಯಸ್ಸಿಗೇ ಇದು ಅಗತ್ಯವಾ ಅಂತ ಪ್ರಶ್ನೇ ಕೇಳಿದೆ. ಅದಕ್ಕವರು ನನಗೆ ಕನ್ವಿನ್ಸ್ ಆಗುವಂತೆ ಒಂದು ಚೆಂದದ ಉತ್ತರ ವ್ಯಾಟ್ಸಪ್ ಮಾಡಿದರು. ಅದನ್ನೇ ಇಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತೇನೆ.

    ಮಲ್ಲಿಕ್, ನನ್ನ ಮಗಳು (ಅವಳಿಗೆ ಒಂದು ವರ್ಷದವಳಿದ್ದಾಗ ) ಮೊತ್ತ ಮೊದಲ ಬಾರಿಗೆ ಬ್ರಶ್ ಬಣ್ಣದಲ್ಲಿ ಚಿತ್ರ ಬರೆದಳು. ಈಗ 100ಕ್ಕೂ ಹೆಚ್ಚು ಡ್ರಾಯಿಂಗ್ ಮತ್ತು ಬಣ್ಣದ ಚಿತ್ರಗಳನ್ನು ತುಂಬಾ ಇಷ್ಟಪಟ್ಟು ಬರೆದಿದ್ದಾಳೆ. ಮಕ್ಕಳ ಚಿತ್ರಗಳ ಬಗೆಗಿನ ತಿಳುವಳಿಕೆ ಶಿಕ್ಷಕರಲ್ಲಿ ಮತ್ತು ಪೋಷಕರಲ್ಲಿ ಕಡಿಮೆ. 5 ವರ್ಷದೊಳಗಿನ ಪ್ರಪಂಚದ ಎಲ್ಲಾ ಮಕ್ಕ್ಳು ಬಣ್ಣ ಮತ್ತು ರೇಖೆಗಳೊಡನೆ ಆಟವಾಡುತ್ತಾ ಅಮೂರ್ತ ಚಿತ್ರಗಳನ್ನು ರೂಪಕಗಳಂತೆ ಚಿತ್ರಿಸುತ್ತಾರೆ. ಆ ಚಿತ್ರಗಳನ್ನು ನೋಡಿ ಆನಂದಿಸುವ ಗುಣ ನಮ್ಮಲ್ಲಿಲ್ಲ. ನೈಜ ಚಿತ್ರಗಳ ಪ್ರತಿಬಿಂಬಗಳನ್ನು ಮಗುವಿನ ಚಿತ್ರಗಳಲ್ಲೂ ಕಾಣಬಯಸುವುದು ಸರಿಯಲ್ಲ. ದೊಡ್ಡವರಾದಂತೆ ವಯೋಸಹಜವಾಗಿ ನೈಜ ಚಿತ್ರಗಳನ್ನು ತಮ್ಮದೇ ಶಯ್ಲಿಯಲ್ಲಿ ಚಿತ್ರಿಸುತ್ತಾರೆ. ಅಲ್ಲಿಯವರೆಗೂ ಕಾಯುವ ತಾಳ್ಮೆ ನಮಗಿಲ್ಲ. ಇಂತಹ ಪ್ರದರ್ಶನಗಳು ಮಕ್ಕಳ ಚಿತ್ರಗಳ ಯಶೋಗಾತೆಯಲ್ಲ. ದೊಡ್ಡವರೆನಿಸಿಕೊಂಡವರು ಮಕ್ಕಳ ಭಾವನಾ ಪ್ರಪಂಚದೊಳಗೆ ವಿಹರಿಸಿ ಆನಂದಪಡುವ ಮಾರ್ಗಗಳು. ಮಕ್ಕಳು ದೇವರಿದ್ದಂತೆ ಎಂದು ಕೊಂಡಾಡುವ ನಾವು ದೇವರ ಫೋಟೋಗಳಿಗೆ ಕೊಟ್ಟಷ್ಟು ಮಹತ್ವವನ್ನು ಮಕ್ಕಳ ಮುಗ್ಧ ಚಿತ್ರಗಳಿಗೆ ಕೊಟ್ಟು ಪ್ರೇಮ್ ಹಾಕಿಸಿ ಮನೆಗಳಲ್ಲಿ ತೂಗು ಹಾಕಿಕೊಂಡಿದ್ದೇವೆಯೇ?. ಮಕ್ಕಳ ಚಿತ್ರಗಳು ಮಕ್ಕಳ ತೊದಲು ನುಡಿಯಷ್ಟೇ ಆನಂದಕೊಡುತ್ತದೆ. ಅದನ್ನು ಅನುಭವಿಸುವ ಗುಣ ನಮ್ಮಲ್ಲಿಲ್ಲ. ಅದಕ್ಕಾಗಿ ಪತ್ರಿಕಾ ವರದಿ ಮೂಲಕ ಮಕ್ಕಳ ಚಿತ್ರಗಳ ಬಗ್ಗೆ ಗಮನಹರಿಸಿ ಮಕ್ಕಳ ಚಿತ್ರಕಲಾ ವಾತಾವರಣ ಮೂಡಿಸಲು ಇಂತಹ ಪ್ರದರ್ಶನಗಳು ತುಂಬಾ ಆವಶ್ಯಕ.

    ಪ್ರತಿಕ್ರಿಯೆ
    • prathibha nandakumar

      ಚಿಕ್ಕ ಮಕ್ಕಳ ಅದ್ಭುತ ಕಲೆಯನ್ನು ಪ್ರದರ್ಶಿಸುವುದು ತಪ್ಪು ಎನ್ನುವ ಯೋಚನೆಯೇ ಸರಿಯಿಲ್ಲ. ಯಾಕೆ ಪ್ರದರ್ಶಿಸಬಾರದು?

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: