ಮೆಹಬೂಬ ಮುಲ್ತಾನಿ, ಚೆನ್ನಮ್ಮನ ಕಿತ್ತೂರು
ನಿನ್ನ ಕಣ್ಣ ಕಾಡಿಗೆ ಕದ್ದು
ರಾತ್ರಿಯಾಗಿಸಿ ಬೆಳಗಲು
ಬರುತ್ತಾನೆ ಚಂದಿರ
ಸೂರ್ಯನ ವಿರಾಮದ ನಂತರ
ಹಗಲಿಡಿ ನಿನ್ನ ಧ್ಯಾನದಲಿ
ಮಿಂದೆದ್ದ ಪಕ್ಷಿಗಳೆಲ್ಲ
ನಾಳೆಗೂ ನಿನ್ನನ್ನೆ ಧ್ಯಾನಿಸುತ್ತವೆ
ಗೂಡು ಸೇರಿದ ನಂತರ
ಗೋಧೂಳಿವರೆಗೂ ವಿರಹದಲಿ ನಿಂತ ಸಾಲ್ ಮರಗಳೆರೆಡು ಇರುಳು ಕಂಡು ಆಲಿಂಗನಕ್ಕೆ ಹಾತೊರೆಯತೊಡಗುತ್ತವೆ
ಹಗಲು ಮುಗಿದ ನಂತರ
ಒಂದೇ ಮನೆಯ ಎದರು ಬದುರು ನಿಂತ ಚೌಕಟ್ಟಿನಂತೆ ನಾವಿಬ್ಬರು
ಪ್ರೀತಿ ಮುಗಿದು ಹೋದ ನಂತರ






ಸರಳ…ಸುಂದರ ..ಕವನ..ಅರ್ಥ ಸೊಗಸಾಗಿದೆ.