ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೂರ್ಯನಿಲ್ಲದ ಬಾನು..

ಬಹುಮುಖ

ಅರುಣ್ ಕೊಪ್ಪ 

ಒಳಗೆ ಬಾಣಲೆ ಮುಂದೆ ಬಸಿದು ಹೋಗುತ್ತಿಹನು ಇವನು ಪುರಿ ತಾಣಸುವ ಅಡುಗೆ ಬಟ್ಟ
ಹೆಗಲ ಮೇಲೆ ಮೋಟ ಟವೇಲ್
ಜೀವನೋಪಾಯದ ಪೆಹಲ್

ಗುಜರಿ ಆರಿಸುವ ಕರಿ ಹೆಂಗಸರು
ಕೂದಲು, ಹಳೆ ಪ್ಲಾಸ್ಟಿಕ್ ಹೆಕ್ಕಿ
ಅಳುವ ಮಕ್ಕಳ ಸೊಂಟಕೆ ಹಾಕಿ
ಊರೂರು ಕೇರಿಕೇರಿ ಸ್ವಾವಲಂಬನೆ ಸಾರಿಹರು

ನಸುಕಲಿ ಎದ್ದು ಚಳಿಯನು ಹೊದ್ದು
ಪೇಪರ್ ಚೆಲ್ಲುವವರು ನಿರಂತರ ಬದುಕಿಗಾಗಿ
ಹಾಲಿನ ಉಗ್ಗ, ಸೈಕಲ್ ತುಳಿದು..
ಸವೆಸುವರು ಬಾಳ  ರಸ್ತಾ

ಗಡಿಯಲೇ ಗುಡಿ, ಮಡದಿ, ಹಬ್ಬ ಹರಿದಿನ ಎಲ್ಲ
ದೇಶಾಭಿಮಾನದ ಸಾಗರದಲ್ಲಿ
ಪ್ರವಾಹವೇ ಬಂದರೂ ಎದೆಗುಂದದೆ
ಭೇದಿಸುವರು ಕರ್ಣನಂತೆ ವೈರೋಧ್ಯದ ಅಲೆಗಳನು

ಹೊತ್ತು ಮುಳುಕುತ್ತಲೇ ಸೂರ್ಯನಿಲ್ಲದ ಬಾನು
ಒಂದೊಂದೆ ನಾಯಿ ಕೊಡೆಯಂತೆ ನಕ್ಕು ಕಣ್ಣು ಮಿಟುಕಿಸುತ್ತಿದ್ದವು ನಕ್ಷತ್ರಗಳು ಆಗಸದ ಅಂಗಳದಲ್ಲೆಲ್ಲಾ ಚಿತ್ತಾರ ಬರೆದು

‍ಲೇಖಕರು avadhi

23 October, 2019

1 Comment

  1. T S SHRAVANA KUMARI

    ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading